ಕನ್ನಡ ಪುಸ್ತಕ ಓದುವವರ ಸಂಖ್ಯೆ ಹೆಚ್ಚಾಗಬೇಕು. ಆಗ ಮಾತ್ರ ಕನ್ನಡ ಲೇಖಕರ ಶ್ರಮ ಸಾರ್ಥಕವಾಗಲಿದೆ ಎಂದು ಕವಯತ್ರಿ ಸವಿತಾ ನಾಗಭೂಷಣ ಅವರು ಹೇಳಿದರು.
ಶಿವಮೊಗ್ಗದ ಕರ್ನಾಟಕ ಸಂಘದಲ್ಲಿ ಶನಿವಾರ ಸಂಜೆ ಆಯೋಜಿಸಿದ್ಧ ಪುಸ್ತಕ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಬರಹಗಾರ, ಲೇಖಕನಿಗೆ ಹತ್ತಾರು ಪ್ರಶಸ್ತಿಗಳು ಬರುತ್ತಿವೆ. ಆದರೆ, ಅವರು ಬರೆದ ಕಥೆ ಅಥವಾ ಕವನ ಓದುಗರನ್ನು ತಲುಪಿದಾಗ ಮಾತ್ರ ಬದುಕಿಗೆ ತೃಪ್ತಿ ಸಿಗುತ್ತದೆ ಎಂದು ಹೇಳಿದರು.
ಕನ್ನಡ ಸಾಂಸ್ಕೃತಿಕ, ಸಾರಸ್ವತ ಲೋಕದಲ್ಲಿ ಕರ್ನಾಟಕ ಸಂಘದ ಹೆಸರು ಚಿರಸ್ಥಾಯಿ ಆಗಿದೆ. ಕೆಲವು ಸಂಘ ಸಂಸ್ಥೆಗಳು ಐದರಿಂದ ಹತ್ತು ವರ್ಷಗಳವರೆಗೆ ಮಾತ್ರ ಕಾರ್ಯನಿರ್ವಹಿಸುತ್ತವೆ. ಕೆಲವು ಅನುದಾನ ಬಂದಾಗ ಮಾತ್ರ ಕಾರ್ಯ ಚಟುವಟಿಕೆ ನಡೆಸುತ್ತವೆ. ಆದರೆ,92 ವಸಂತಗಳನ್ನು ಕಂಡಿರುವ ಸಂಘವು ಕನ್ನಡವನ್ನು ಜಾಗೃತಿಗೊಳಿಸುವ ಕೆಲಸ ಮಾಡುತ್ತಿದೆ ಎಂದು ಪ್ರಶಸ್ತಿ ಪುರಸ್ಕೃತರಾದ ಮೋಹನ್ ಅವರು ಮಾತನಾಡಿದರು.
ಕಾರ್ಯಕ್ರಮ ದ ಬಹುಮಾನಿತರ ವಿವರಗಳು ಹೀಗಿದೆ…
ಕುವೆಂಪು ಪ್ರಶಸ್ತಿ: ವೈಷ್ಣವ ಜನತೋ (ಕಾದಂಬರಿ): ಲೋಕೇಶ ಅಗಸನಕಟ್ಟೆ ಎಂ.ಕೆ. ಇಂದಿರಾ ಪ್ರಶಸ್ತಿ: ಅಮ (ಕೃತಿ); ಸ್ನೇಹಲತಾ ದಿವಾಕರ ಕುಂಬ್ಳೆ ಎನ್.ವಿ. ಪರಮೇಶ್ವರ ಭಟ್ಟ ಪ್ರಶಸ್ತಿ: ಪ್ರೇಮ ಪತ್ರ (ಅನುವಾದಿತ ಸಾಹಿತ್ಯ); ಡಾ.ಎ. ಮೋಹನ್ ಕುಂಟಾರು
ಡಾ.ಶೋಭಾ ನಾಯಕ
ಡಾ.ಜಿ.ಎಸ್. ಶಿವರುದ್ರಪ್ಪ ಪ್ರಶಸ್ತಿ: ಶಯ್ಯಾಗೃಹದ ಸುದ್ದಿಗಳು (ಕವನ ಸಂಕಲನ); ಡಾ.ಹಾ.ಮಾ. ನಾಯಕ ಪ್ರಶಸ್ತಿ: ಓದಿನ ಮನೆ (ಅಂಕಣ ಬರಹ): ದೀಪಾ ಪಡೆ ಡಾ.ಯು.ಆರ್. ಅನಂತಮೂರ್ತಿ ಪ್ರಶಸ್ತಿ: ಬೊಗಸೆ ತುಂಬಾ ನಕ್ಷತ್ರಗಳು;
ವಸುಮತಿ ಉಡುಪ
ಡಾ.ಕೆ.ವಿ. ಸುಬ್ಬಣ್ಣ ಪ್ರಶಸ್ತಿ: ಪಂಚಾವರಂ (ನಾಟಕ): ಮಹಾಂತೇಶ ನವಲಕಲ್ ಕುಕ್ಕೆ ಸುಬ್ರಹ್ಮಣ್ಯ ಶಾಸ್ತ್ರಿ ಪ್ರಶಸ್ತಿ: ತಿರೆಯ ತೀರಗಳಲ್ಲಿ ನಾ ಕಂಡಂತೆ (ಪ್ರವಾಸ
ಕಥನ): ಎಸ್.ಪಿ. ವಿಜಯಲಕ್ಷ್ಮೀ
ಹಸೂಡಿ ವೆಂಕಟಶಾಸ್ತ್ರಿ ಪ್ರಶಸ್ತಿ: ಡೇಟಾ ದೇವರು ಬಂದಾಯ್ತು (ವಿಜ್ಞಾನ ಕೃತಿ); ಗುರುರಾಜ್ ಎಸ್. ದಾವಣಗೆರೆ ನಾ.ಡಿಸೋಜ ಪ್ರಶಸ್ತಿ: ಕಥೆಗಳ ತೋರಣ ಭಾಗ-2 (ಮಕ್ಕಳ ಸಾಹಿತ್ಯ): ಶಾಲಿನಿ ಮೂರ್ತಿ.