ಕೇಂದ್ರದ ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಔಷಧಿಗಳ ಕ್ಷೇತ್ರದಲ್ಲಿ ಮತ್ತೊಂದು ಹೊಸ ಯೋಜನೆಯನ್ನು ಅನುಷ್ಠಾನ ಮಾಡುತ್ತಿರುವ ಬಗ್ಗೆ ಯೋಜಿಸುತ್ತಿದೆ. ಮೋದಿ ಅವರು ಹೇಳಿರುವಂತೆ ಇದೊಂದು ದವಾ ಕಾ ಆಧಾರ್ ಕಾರ್ಡ್ ಯೋಜನೆಯಾಗಿದ್ದು ಈ ಮೂಲಕ ಭಾರತದಲ್ಲಿ ಮುಂಚೂಣಿಯಲ್ಲಿ ಮಾರಾಟವಾಗುವ ಹಲವು ಔಷಧಿಗಳ ಪ್ಯಾಕೆಟ್ಗಳ ಮೇಲೆ ಕ್ಯೂಆರ್ ಅಥವಾ ಬಾರ್ ಕೋಡ್ಗಳನ್ನು ಅಳವಡಿಸುವುದು ಕಡ್ಡಾಯವಾಗಲಿದೆ.
ಕಳೆದ ತಿಂಗಳಷ್ಟೇ ಆರೋಗ್ಯ ಮಂತ್ರಾಲಯವು ಮಾರಾಟವಾಗುವ ಮೊದಲ 300 ಔಷಧಿ ಬ್ರ್ಯಾಂಡುಗಳು ತಮ್ಮ ಔಷಧಿ ಉತ್ಪನ್ನಗಳ ಮೇಲೆ ಬಾರ್ಕೋಡ್ ಅಳವಡಿಕೆಯನ್ನು ಕಡ್ಡಾಯಗೊಳಿಸುವ ಶೆಡ್ಯೂಲ್ H2 ಅನ್ನು ಜಾರಿ ಮಾಡಿದೆ.
ಈ ಉಪಕ್ರಮವು ಆಗಸ್ಟ್ 1, 2023 ರಿಂದ ಪರಿಣಾಮಕಾರಿಯಾಗಿ ಜಾರಿಗೆ ಬರಲಿದ್ದು ಈ ಮೂಲಕ ಔಷಧಿಗಳ ನೈಜತ್ವ, ಹಾಗೂ ಸಮರ್ಪಕವಾದ ರೀತಿಯಲ್ಲಿ ಅದರ ವ್ಯವಹಾರಗಳ ಮೇಲೆ ಹೆಚ್ಚಿನ ನಿಗಾ ಇರಿಸಬಹುದಾಗಿದೆ.
ಎರಡು ಸರ್ಕಾರಿ ಮೂಲಗಳ ಪ್ರಕಾರ ಈ ಉಪಕ್ರಮಕ್ಕೆ “ಔಷಧಿಗಳಿಗಾಗಿ ಆಧಾರ್ ಕಾರ್ಡ್” ಎಂಬ ಹೆಸರನ್ನಿರಿಸಲಾಗುವುದು ಎಂದಾಗಿದೆ.