ಮಲೆನಾಡಿನ ಆರ್ಥಿಕತೆಗೆ ಬೆನ್ನೆಲುಬು ಆಗಿದ್ದಂತಹ ಅಡಿಕೆ ಬೆಳೆಗೆ ಈಗ ಹೊಸ ರೋಗ ಕಾಟದ ಕಾಟ ಹೆಚ್ಚಾಗಿದೆ.
ಹಳದಿ ಎಲೆ, ಕೊಳೆ, ಎಲೆಚುಕ್ಕಿ, ಹಿಡಿಮುಂಡಿಗೆ, ಹಿಂಗಾರ ಒಣಗುವ ರೋಗಗಳಿಂದ ಕಂಗಾಲಾಗಿರುವ ರೈತರಿಗೆ ಕಾಂಡ ಕೊರಕ ಹುಳು ಬಾಧೆ ಇನ್ನಷ್ಟು ಆತಂಕಕ್ಕೆ ಸಿಲುಕಿಸಿದೆ.
ತೀರ್ಥಹಳ್ಳಿ ತಾಲ್ಲೂಕಿನ ತೂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅನೇಕ ತೋಟಗಳಲ್ಲಿ ಈ ರೋಗ ಕಾಣಿಸಿಕೊಂಡಿದೆ. 3ರಿಂದ 4 ವರ್ಷಗಳ ಗಿಡಗಳು ಹುಳುಗಳ ಬಾಧೆಗೆ
ಒಣಗಿ ಬುಡ
ಮೇಲಾಗುತ್ತಿವೆ. ರೋಗ ತಗುಲಿರುವ ಸಸಿಗಳಲ್ಲಿ ಅಂಟಿನ ಅಂಶಗಳ ಮೂಲಕ ಗಮ್ ರೀತಿ ಕಾಣಿಸಿಕೊಳ್ಳುತ್ತದೆ. ಅಂಟಿನ ಅಂಶದ ಕೆಳಗೆ ರಂಧ್ರಗಳು ನಿರ್ಮಾಣವಾಗಿರುವುದನ್ನು ರೈತರು ಗುರುತಿಸಬೇಕು.
ಸ್ಥಳಕ್ಕೆ ತೋಟಗಾರಿಕೆ
ಇಲಾಖೆ, ಕೃಷಿ ಮತ್ತು ಸೀಬಿನಕೆರೆ ತೋಟಗಾರಿಕಾ ಸಂಶೋಧನಾ
ಕೇಂದ್ರದ ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಾಥಮಿಕವಾಗಿ ಇದು ರಂಧ್ರ ಕೊರೆಯುವ ಹುಳು ಎಂದು ಗುರುತಿಸಲಾಗಿದೆ. ಸದ್ಯ ನಿಯಂತ್ರಣಕ್ಕೆ ಕ್ಲೋರೊಫಿರಫಸ್ 20ಇಸಿ – 3ಮಿ.ಲೀ ಪ್ರತಿ ಲೀಟರ್ ನೀರಿಗೆ ಬೆರೆಸಿ
ಕಾಂಡಕ್ಕೆ ಉಪಚಾರ ಮಾಡುವ ಮೂಲಕ ನಿಯಂತ್ರಿಸಬಹುದು.
15 ದಿನಗಳ ನಂತರ ಇದೆ
ದ್ರಾವಣದಲ್ಲಿ ಬಟ್ಟೆಯನ್ನು ನೆನೆಸಿ ಕೀಟದಿಂದ ಭಾದೆಗೊಳಗಾದ ಅಡಿಕೆ ಕಾಂಡದ ಸುತ್ತಲು
ಕಟ್ಟಬೇಕು. ಅಥವಾ ಹನಿಯಾಗಿರುವ ಕಾಂಡಗಳಿಗೆ ಔಷಧಿಯನ್ನು ಬಳಿಯಬೇಕು ಎಂದು ಮಾಹಿತಿ ನೀಡಿದ್ದಾರೆ.