Wednesday, November 27, 2024
Wednesday, November 27, 2024

ಸ್ಮಾರ್ಟ್ ಸಿಟಿಯ 108 ತಂಗುದಾಣಅಸಮರ್ಪಕ

Date:

ಶಿವಮೊಗ್ಗ ಸ್ಮಾರ್ಟಸಿಟಿಯವರು ನಗರದ್ಯಾಂತ  ಬಸ್ಸು ತಂಗುದಾಣ ನಿಲ್ದಾಣದಗಳನ್ನು ನಿರ್ಮಿಸಿದ್ದು  ಅವುಗಳು  ಅವೈಜ್ಞಾನಿಕ ವ್ಯವಸ್ಥೆಗಳಿಂದ   ಪ್ರಯಾಣಿಕರಿಗೆ ತ್ರೀವ್ರ ಆನಾನುಕೂಲ ಉಂಟಾಗುತ್ತಿದೆ. ಹಾಗೂ ನಗರದ ರಕ್ಷಣಾ ವ್ಯವಸ್ಥೆಗೂ ಸವಾಲಾಗಿದೆ.  ಈ ವಿಚಾರವಾಗಿ ಗಮನಿಸಿ, ಸೂಕ್ತ ಕ್ರಮ ಕೈಗೋಳ್ಳಿ ಎಂದು ಶಿವಮೊಗ್ಗ ನಾಗರಿಕರು ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಅಪಾಯಕಾರಿಯಾಗಿ  ಪ್ರಯಾಣಿಕರ ಮಾಹಿತಿ  ಬೋರ್ಡ್ ಗಳ ಜೋಡಣೆ:   ಬಿ.ಹೆಚ್. ರಸ್ತೆ, ಸಾಗರ ರಸ್ತೆ, 100 ಅಡಿ ರಸ್ತೆ ಮುಂತಾದ ಕಡೆಗಳಲ್ಲಿ ತಂಗುದಾಣಗಳಲ್ಲಿ ಪ್ರಯಾಣಿಕರ ಮಾಹಿತಿ  ಬೋರ್ಡ್ ಗಳನ್ನು ಆಡವಳಿಸಲಾಗಿದೆ.  ಇವುಗಳನ್ನು ಬಹುತೇಕ ಕಡೆ ಪ್ರಯಾಣಿಕರು  ಈ ಬಸ್ಸು ತಂಗುದಾಣಗಳಿಗೆ ಹತ್ತುವ ಮತ್ತು ಇಳಿಯುವ  ಜಾಗದಲ್ಲೇ  ಆಡವಳಿಸಿರುವುದರಿಂದ  ಪ್ರಯಾಣಿಕರಿಗೆ ತ್ರೀವ್ರ ಅಡಚಣೆ ಆಗುತ್ತಿದೆ.  ತುಂಬಾ  ಕಡಿಮೆ  ಎತ್ತರದಲ್ಲಿ ಅಡವಳಿಸಿರುವುದರಿಂದ  ಹಲವಾರು ಕಡೆ ಪ್ರಯಾಣಿಕರಿಗೆ ಈಗಾಗಲೇ ಗಾಯಗಳಾಗುತ್ತೀವೆ.  ಇವುಗಳನ್ನು ನೆಲಮಟ್ಟದಿಂದ ಕನಿಷ್ಠ  7 ಅಡಿಯ ಮೇಲೆ ಕೂರಿಸ ಬೇಕು. ಆದರೆ ಈ ತಂಗುದಾಣಗಳ ವಿನ್ಯಾಸ ಇದಕ್ಕೆ ಪೂರಕವಾಗಿಲ್ಲ. ಹಾಗಾಗಿ   ದಯವಿಟ್ಟು ತಕ್ಷಣದಲ್ಲಿ  ಇವುಗಳ ಜೋಡಣೆ   ಎಲ್ಲಿಲ್ಲಿ ಅಪಾಯಕಾರಿ ಅಂತರದಲ್ಲಿ ಆಳವಡಿಸಿದ್ದಾರೆಯೂ, ಅವುಗಳನ್ನು ತಕ್ಷಣ  ತೆರವು ಗೊಳಿಸಲು ಕ್ರಮ ಕೈಗೋಳ್ಳಿ .  ಉಳಿದ ತಂಗುದಾಣಗಳಿಗೆ ಈ ಮಾಹಿತಿ ಬೋರ್ಡ್ ಗಳನ್ನು ಈ ರೀತಿ    ಆಳವಡಿಸದಂತೆ ಸ್ಮಾರ್ಟಸಿಟಿಯವರಿಗೆ ಸೂಚಿಸಿ.   ಅಪಾಯಕಾರಿ ಜೋಡಣೆಯ ಕೆಲವು  ಪೋಟೂ ಗಳನ್ನು ಇದರೂಂದಿಗೆ ಲಗತ್ತಿಸಿದೇವೆ.    
 
2.ಹಲವಾರು ತಂಗುದಾಣದ ಎತ್ತರ ರಸ್ತೆ ಮಟ್ಟದಿಂದ 150 ಎಂ.ಎಂ. ( ಅರ್ದ ಅಡಿ) ಹೆಚ್ಚಾಗಿದ್ದು, ಈ ರಚನೆಗಳು ರಾಷ್ಟ್ರೀಯ ರೋಡ್ ಕಾಂಗ್ರೆಸ್ ನಿಯಮ ಗಳ ವಿರುದ್ದವಾಗಿದೆ.  ಇದರಿಂದ ವಯೋವೃದ್ಧ, ಮಂಡಿ ನೋವಿರುವ, ಪೊಲಿಯೂ ಪೀಡಿತ ಹಾಗು  ಆಂಗ ವಿಕಲ ಪ್ರಯಾಣಿಕರಿಗೆ ತ್ರೀವ
ತೂಂದರೆ ಆಗಲಿದೆ.  ಈ ರೀತಿಯ ನಿರ್ಮಾಣಗಳಿಗೆ ಉದಾಹರಣೆಗಳು: ಲಕ್ಷ್ಮಿ ಟ್ಯಾಕ್ಸಿಸ್ , ಮೀನಾಕ್ಷಿ ಭವನ, ಸೈನ್ಸ್ ಫೀಲ್ಡ್,  ಎ.ಪಿ.ಎಂ.ಸಿ ಎದುರು, ಕೋರ್ಟ್  ಎದುರು, ಹೊಸ ಬ್ರಿಡ್ಜ ಪಕ್ಕದ    ತಂಗುದಾಣಗಳು. ಇವುಗಳನ್ನು ನಿಯಮದ ಪ್ರಕಾರ ಬಳಕೆದಾರರಾದರ ಸ್ನೇಹಿ ತಂಗುದಾಣವಾಗಿ  ಪುನರ್ ನಿರ್ಮಾಣ ಮಾಡಲು  ಸ್ಮಾರ್ಟಸಿಟಿಯವರಿಗೆ ಸೂಚಿಸ ಬೇಕು.                                               3.  ಬಸ್ಸು   ತಂಗುದಾಣಗಳಿಗೆ ಪ್ರಯಾಣಿಕರ ಅನುಕೂಲಕ್ಕಾಗಿ ತಂಗುದಾಣಗಳ ಎರಡೂ ಬದಿಗಳಲ್ಲಿ ಇಳಿಜಾರುಗಳನ್ನು ತಮ್ಮ ಅನುಮೊದಿತ ನಕ್ಷೆಯ ಪ್ರಕಾರ ( ಪ್ರಯಾಣಿಕರಿಗೆ ಇಳಿಯಲು-ಹತ್ತಲು) ನಿರ್ಮಾಣ ಮಾಡ ಬೇಕಾಗಿತ್ತು ಸ್ಮಾರ್ಟಸಿಟಿಯವರು. ಅನುಮೊದಿತ ನಕ್ಷೆಯನ್ನು ತಮ್ಮ ಗಮನಕ್ಕೆ ಲಗತ್ತಿಸಿದ್ದೇವೆ .  ಬಹುತೇಕ ತಂಗುದಾಣಗಳಲ್ಲಿ ಒಂದೇ ಕಡೆಯಲ್ಲಿ ಇಳಿಜಾರು ನಿರ್ಮಾಣ ಮಾಡಿದ್ದಾರೆ. ಹಾಗಾಗಿ ಎಲ್ಲಾ ತಂಗುದಾಣಗಳಲ್ಲಿ  ಎರಡೂ ಬದಿಗಳಲ್ಲಿ ಇಳಿಜಾರು ಗಳನ್ನು ರಚಿಸಿ ಪ್ರಯಾಣಿಕರಿಗೆ ಅನುಕೂಲ ಮಾಡಿ ಕೊಡಲು  ಸ್ಮಾರ್ಟಸಿಟಿಯವರಿಗೆ ತಾವು  ಸೂಚಿಸ ಬೇಕು.                  

  1. ರಾಷ್ಟ್ರೀಯ ರೋಡ್ ಕಾಂಗ್ರೆಸ್ ನ ನಿಯಮ ಗಳಿಗೆ ವಿರುದ್ದವಾಗಿ- ಸರ್ಕಲ್ ಗಳಲ್ಲಿ  ಬಸ್ಸು  ತಂಗುದಾಣ:     ಇಂದಿರಾ ಗಾಂಧಿ ಸರ್ಕಲ್,   ವಿನೋಬನಗರ ಪೋಲಿಸ್ ಚೌಕಿ, ಮತ್ತು  ಸೌಹ್ಯಾರ್ದಿ  ಕಾಲೇಜ್  ಸರ್ಕಲ್ ನಲ್ಲಿ ಎರಡು   ಬಸ್ಸು   ತಂಗುದಾಣ ನಿರ್ಮಾಣ ಮಾಡಿದ್ದು, ಸರ್ಕಲ್ ಗಳಲ್ಲಿ ಬಸ್ಸು ತಂಗುದಾಣಗಳು    ರಾಷ್ಟ್ರೀಯ ರೋಡ್ ಕಾಂಗ್ರೆಸ್ ನಿಯಮ ಗಳಿಗೆ ವಿರುದ್ದ ವಾಗಿದೆ ಮತ್ತು
    ವಾಹನ ಓಡಾಟಕ್ಕೆ ತ್ರೀವ ತೊಂದರೆ ಆಗುತ್ತಿದೆ.  ವಿನೂಭನಗರದ ಇಂದಿರಾಗಾಂಧಿ ಸರ್ಕಲ್ ಮತ್ತು  ಪೋಲೀಸ್ ಚೌಕಿಯಲ್ಲಿ ಬಸ್ಸು ತಂಗುದಾಣಗಳನ್ನು  ನಾವು ಪ್ರಾರಂಬ ಹಂತದಲ್ಲೇ ವಿರೋಧಿಸಿದ್ದೇವು.   ಇದೇ ರೀತಿ  ನವುಲೇ ಕರೆಗಿಂತ ಮೊದಲು ನಿರ್ಮಿಸಿರುವ ಬಸ್ಸು ತಂಗುದಾಣದಲ್ಲಿ,  ಬಸ್ಸು ನಿಲುಗಡೆಯಿಂದ  ವಾಹನ ಓಡಾಟಕ್ಕೆ ತ್ರೀವ ತೊಂದರೆ ಆಗುತ್ತಿದೆ.  ಸ್ಮಾರ್ಟಸಿಟಿಯ ನಿಯಮಗಳ ಪ್ರಕಾರ ಸಂಬಂಧ ಪಟ್ಟವರ ಅನುಮತಿ ಪಡೆದು ಅಭಿವೃದ್ಧಿ ಕಾರ್ಯ  ನೆಡೆಸ ಬೇಕಾಗಿತ್ತು. ಆದರೆ, ತಂಗುದಾಣಗಳ ನಿರ್ಮಾಣಕ್ಕಿಂತ ಮೊದಲು  ಕನಿಷ್ಠ ನಿಮ್ಮ ಇಲಾಖೆಯ ಸಲಹೆಯನ್ನಾದರೂ   ಪಡೆದು ನಿರ್ಮಿಸಿದ್ದರೆ  ನಿಯಮ ಉಲ್ಲಂಘನೆಗೆ ಅವಕಾಶ ಇರುತ್ತಿರಲಿಲ್ಲ.    ಆದುದರಿಂದ ತಮ್ಮಲ್ಲಿ ವಿನಂತಿ ಎನೆಂದರೆ ಎಲ್ಲಾ ನಿಯಮಗಳನ್ನು ಬದಿಗೆ ತೂರಿ ವಾಹನ ಓಡಾಟಕ್ಕೆ ತೂಂದರೆ ಆಗುವ ಎಲ್ಲಾ  ತಂಗುದಾಣಗಳನ್ನು  ತೆರವು ಗೊಳಿಸಲು ಕ್ರಮ ಕೈಗೋಳ್ಳುವಂತೆ ತಿಳಿಸಲಾಗಿದೆ.
                         
  2. ಬಸ್ಸು ಗಳ ಓಡಾಟವೇ ಇಲ್ಲದ ರಸ್ತೆ ಗಳಲ್ಲಿ ಬಸ್ಸು ತಂಗುದಾಣಗಳು- ನಗರದ ರಕ್ಷಣೆಗೆ ಸವಾಲು: ಬಸ್ಸು ತಂಗುದಾಣಗಳಿಗೆ ಭಾರಿ ವೆಚ್ಚ ತಗಲುವುದಿಲ್ಲ ಮತ್ತು ಕೇವಲ 15 ದಿನಗಳಲ್ಲಿ  ನಿರ್ಮಾಣ ಮಾಡ ಬಹುದು. ಹಾಗಾಗಿ  ಬಸ್ಸು ಗಳು ಓಡಾಡದ ರಸ್ತೆ ಗಳಲ್ಲಿ  ಈಗಲೇ ತಂಗುದಾಣ ನಿರ್ಮಾಣ ಮಾಡುವ ಅಗತ್ಯ ವಿರಲಿಲ್ಲ.   ಬಸ್ಸು ಗಳು ಓಡಾಡದ ಜಾಗದಲ್ಲಿ ಬಸ್ಸು ತಂಗುದಾಣ ಮಾಡಿರುವುದು ಕುಡುಕರ,ಕ್ರಿಮಿನಲ್, ಪೋಲಿಗಳ, ಆಂದರ್ ಬಾಹರ್ ಆಡುವವರ  ಕಾರ್ಯ ಕ್ಷೇತ್ರ ಅಥವಾ ವಾಸ ಸ್ಥಾನ ಬಿಟ್ಟು ಬೇರೇನೂ ಅಲ್ಲ.

ಉದಾಹರಣೆಗೆ: ಕುವೆಂಪು ನಗರ ರಸ್ತೆ ಪ್ರಾರಂಭದಲ್ಲಿ, ಕುವೆಂಪು ನಗರದ ರಸ್ತೆ ಯಲ್ಲಿ,  ವಿದ್ಯಾ ಭಾರತಿ ಕಾಲೇಜು ಹತ್ತಿರ ನಿರ್ಮಿಸಿರುವ ತಂಗುದಾಣ, ಕೃಷ್ಣಪ್ಪ ತಂಗುದಾಣ ಆಲುಕೂಳ ಸರ್ಕಲ್,  ಉಷಾ ನರ್ಸಿಂಗ್ ನಿಂದ ರೋಟರ್ರಿ ಬ್ಲಡ್ ಬ್ಯಾಂಕ್ ಕಡೆಗೆ ಬಸ್ಸು ತಂಗುದಾಣ, ಡಿ.ವಿ.ಜಿ. ಸರ್ಕಲ್ ಬಸ್ಸು ತಂಗುದಾಣ ಮತ್ತು ಹಲವು( ಸಂಪೂರ್ಣ ತಂಗುದಾಣಗಳ ಪಟ್ಟಿ ಲಗತ್ತಿಸಿದೇವೆ). ಇವುಗಳಿಗೆಲ್ಲವೂ  ತಮ್ಮ ಇಲಾಖೆಯ ಅಥವಾ ಆರ್.ಟಿ.ಓ.ಇಲಾಖೆಯ ಅಭಿಪ್ರಾಯ ಪಡೆಯದೇ ನಿರ್ಮಿಸಿರುವ ತಂಗುದಾಣಗಳು.  ನಗರದ ರಕ್ಷಣಾ ಹೆಚ್ಚಿನ ಸಾವಾಲುಗಳು.  ಈ ರೀತಿ ನಿರ್ಮಾಣ ಮಾಡಿರುವ ಎಲ್ಲಾ ತಂಗುದಾಣಗಳಿಂದ, ಓಡಾಡಲು ನಾಗರೀಕರಿಗೆ, ಮಕ್ಕಳು,
ಹೆಣ್ಣು ಮಕ್ಕಳು ಮತ್ತು ಮಹಿಳೆಯರಿಗೆ ತೊಂದರೆಗಳು ಆಗದಂತೆ ವ್ಯವಸ್ಥೆ ಕಲ್ಪಸಿ ಬೇಕಾದ ಹೆಚ್ಚಿನ ಜವಾಬ್ದಾರಿ ರಕ್ಷಣಾ ಇಲಾಖೆಗೆ ಓದಗಿ ಬಂದಿದೆ.  ಈ ವಿಷಯವನ್ನು  ಜಿಲ್ಲಾಳಿತದ ಗಮನಕ್ಕೆ  ತಂದು, ಸ್ಮಾರ್ಟಸಿಟಿಯವರಿಂದ ಈ ಎಲ್ಲಾ ತಂಗುದಾಣಗಳಲ್ಲಿ  ಸಿ.ಸಿ.ಕ್ಯಾಮರ ಆಡವಳಿಸಲು ಮತ್ತು ರಕ್ಷಣೆಗೆ ಅಗತ್ಯವಾದ ಇತರೇ ಕ್ರಮಗಳು ತಮ್ಮಿಂದ ಆಗ ಬೇಕಾಗಿದೆ. 

  1. ನಾವು  108 ತಂಗುದಾಣ ಪಟ್ಟಿಯನ್ನು ಈ ಮನವಿಗೆ ಲಗತ್ತಿಸಿದೇವೆ. ತಾವು ದಯವಿಟ್ಟು ಪ್ರತ್ಯೇಕ ತನಿಖಾ ತಂಡ ರಚಿಸಿ  ಅವುಗಳ ನ್ಯೂನತೆಗಳ ಸಮಗ್ರ  ವರದಿ ತಯಾರಿಸಿ ಹಾಗು ನ್ಯೂನತೆಗಳನ್ನು   ಸ್ಮಾರ್ಟಸಿಟಿ ಯೂಜನೆ ಮುಗಿಯುವುದರ  ಒಳಗೆ ಸರಿಪಡಿಸಲು ಕ್ರಮ ಕೈಗೋಳ್ಳಲು ವಿನಂತಿಸಲಾಗಿದೆ‌.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Constitution Day ಸಂವಿಧಾನ ಪೀಠಿಕೆಯನ್ನು ಪ್ರತಿಷ್ಠಾಪಿಸುವ ಕೆಲಸವನ್ನ ರಾಜ್ಯ ಸರ್ಕಾರ ಮಾಡುತ್ತಿದೆ- ಮಧು ಬಂಗಾರಪ್ಪ

Constitution Day ಭಾರತೀಯರೆಲ್ಲರೂ ಒಂದೇ ಎಂಬ ಐಕ್ಯತೆ, ಸಮಗ್ರತೆ, ಭಾವೈಕ್ಯತೆ...

K.H. Muniyappa ನ.28ರೊಳಗೆ ಎಲ್ಲಾ ಬಿಪಿಎಲ್ ಕಾರ್ಡ್ ದಾರರಿಗೆ ಅಕ್ಕಿ ವಿತರಿಸಲು ಅಧಿಕಾರಿಗಳಿಗೆ ಸೂಚನೆ- ಸಚಿವ ಕೆ ಎಚ್. ಮುನಿಯಪ್ಪ

K.H. Muniyappa ಎಲ್ಲಾ ಪಡಿತರ ಕಾರ್ಡ್‌ಗಳನ್ನು ಯಥಾವತ್ತಾಗಿ ಮುಂದುವರಿಸಲು ಮುಖ್ಯಮಂತ್ರಿಗಳ ಆದೇಶದಂತೆ...