ನವೆಂಬರ್ 8 ರಿಂದ ಅಂಗನವಾಡಿ ಕೇಂದ್ರಗಳ ಆರಂಭಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಿ ಮಾರ್ಗಸೂಚಿ ಹೊರಡಿಸಿದೆ. ಕೋವಿಡ್ -19 ನಿಂದಾಗಿ ಕಳೆದ ಒಂದುವರೆ ವರ್ಷದಿಂದ ಮಕ್ಕಳು ಶಾಲೆಗಳಿಂದ ವಂಚಿತರಾಗಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರ ಹಂತ-ಹಂತವಾಗಿ ಶಾಲೆಗಳ ತರಗತಿಯನ್ನು ಪ್ರಾರಂಭಿಸುತ್ತಿದೆ ಈಗ ಅಂಗನವಾಡಿ ಕೇಂದ್ರಗಳನ್ನು ಪ್ರಾರಂಭಿಸುವುದಾಗಿ ತಿಳಿಸಿದೆ. ಹೀಗಾಗಿ ಎಲ್ ಕೆಜಿ ಮತ್ತು ಯುಕೆಜಿ ಪೂರ್ವ ಪ್ರಾಥಮಿಕ ಶಾಲೆಗಳ ಆರಂಭಕ್ಕೆ ಸರ್ಕಾರದ ಬಳಿ ಖಾಸಗಿ ಶಿಕ್ಷಣ ಸಂಸ್ಥೆಗಳು ಹಾಗೂ ಮಾಂಟೆಸ್ಸರಿಗಳು ಒತ್ತಾಯಿಸಿವೆ.
ಕೋವಿಡ್ -19 ನಿಂದ ಅಂಗನವಾಡಿ ಕೇಂದ್ರಗಳು ಫಲಾನುಭವಿಗಳ ಮನೆ ಬಾಗಿಲಿಗೆ ಪೂರಕ ಪೌಷ್ಠಿಕ ಆಹಾರವನ್ನು ವಿತರಿಸಲಾಗುತ್ತಿತ್ತು. ರಾಜ್ಯದಲ್ಲಿ ಕೋವಿಡ್ ಸೋಂಕು ಇಳಿಮುಖವಾದರಿಂದ ಸರ್ಕಾರ ಅಂಗನವಾಡಿ ಕೇಂದ್ರಗಳನ್ನು ಆರಂಭಗೊಳಿಸಲಿದೆ.
ರಾಜ್ಯದಲ್ಲಿ ಈಗಾಗಲೇ 1ರಿಂದ 10 ತರಗತಿಯ ಆರಂಭಗೊಂಡಿವೆ. ” ಮಕ್ಕಳು ಪೂರ್ವ ಪ್ರಾಥಮಿಕ ಶಾಲೆಗಳಲ್ಲಿ ಮಾತೃಭಾಷೆಯಲ್ಲಿ ಅಕ್ಷರಭ್ಯಾಸ, ಭಾಷಾ ಕಲಿಕೆ, ಬಣ್ಣ, ವಸ್ತುಗಳ ಆಕಾರ ಗುರುತಿಸುವುದು, ಸಂಖ್ಯೆಗಳಲ್ಲಿ ಪರಿಣಿತಿ ಹೊಂದಿದ ಬಳಿಕವಷ್ಟೇ ಪ್ರಾರ್ಥಮಿಕ ತರಗತಿಗಳಲ್ಲಿ ಉತ್ತಮವಾಗಿ ಕಲಿಯಲು ಸಾಧ್ಯ. ಪ್ರತಿವರ್ಷ ಸುಮಾರು 25 ಲಕ್ಷಕ್ಕೂ ಹೆಚ್ಚು ಮಕ್ಕಳು ಎಲ್ ಕೆಜಿ ತರಗತಿಗಳಿಗೆ ಸೇರುತ್ತಿದ್ದರು. ಆದರೆ ಲಾಕ್ಡೌನ್ ನಿಂದ ಶಾಲೆಗಳು ಮುಚ್ಚಿದ್ದ ಪರಿಣಾಮ ಪೂರ್ವ ಪ್ರಾರ್ಥಮಿಕ ಶಾಲೆಗಳಿಗೆ ಸಮರ್ಪಕವಾಗಿ ದಾಖಲಾತಿ ನಡೆದಿಲ್ಲ. ಅಂಗನವಾಡಿ ಕೇಂದ್ರದ ಮಕ್ಕಳು ಮತ್ತು ಪೂರ್ವ ಪ್ರಾಥಮಿಕ ತರಗತಿಗಳ ಮಕ್ಕಳ ವಯಸ್ಸು ಒಂದೇ ಆಗಿದೆ. ಆದ್ದರಿಂದ ಎಲ್ ಕೆಜಿ ಮತ್ತು ಯುಕೆಜಿ ತರಗತಿಗಳ ಆರಂಭಕ್ಕೆ ಅನುಮತಿ ನೀಡಿ” ಎಂದು ರುಪ್ಸಾ ಸಂಘಟನೆ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಅವರು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.