Sunday, November 24, 2024
Sunday, November 24, 2024

ನೇತ್ರದಾನ : ಪುನೀತರಾದ ಪುನೀತ್

Date:

ಪವರ್ ಸ್ಟಾರ್ ನಟ ಪುನೀತ್ ರಾಜಕುಮಾರ್ ಅವರ ಕಣ್ಣು ನಾಲ್ವರಿಗೆ ಜಗದ ಬೆಳಕು ತೋರಿದೆ. ಸಾವಿನ ಬಳಿಕ ಮಣ್ಣಿನಲ್ಲಿ ಮಣ್ಣಾಗುತ್ತಿದ್ದವು.ಅಂತಹ ಅಮೂಲ್ಯ ಕಣ್ಣಗಳನ್ನು ಪುನೀತ್ ಕುಟುಂಬದವರು ದಾನ ಮಾಡಿದ್ದಾರೆ. ನಾಲ್ವರ ಬಾಳಿನಲ್ಲಿ ಇಲ್ಲಿಯವರೆಗಿದ್ದ ಅಂದಕಾರ ದೂರವಾಗಿ ಹೊರಜಗತ್ತನ್ನು ನೋಡುವ ಸೌಭಾಗ್ಯ ಒದಗಿದೆ ಎಂದು ನಾರಾಯಣ ನೇತ್ರಾಲಯದ ಮುಖ್ಯಸ್ಥ ಡಾ.ಭುಜಂಗ ಶೆಟ್ಟಿ ತಿಳಿಸಿದ್ದಾರೆ.
ಪುನೀತ್ ರಾಜಕುಮಾರ್ ನಿಧನಕ್ಕೆ ಸಂತಾಪ ಸೂಚಿಸಲು ನಾರಾಯಣ ನೇತ್ರಾಲಯದಲ್ಲಿ “ನಿಮಗಿದೋ ವಂದನೆ” ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಅವರ ಪುನೀತ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.
” ಈವರೆಗೂ ಯಾವುದೇ ದಾನಿಗಳಿಂದ ಎರಡು ಕಣ್ಣುಗಳನ್ನು ಪಡೆದರೆ ಮತ್ತಿಬ್ಬರಿಗೆ ಮಾತ್ರ ಕಸಿ ಮಾಡಲಾಗುತ್ತಿತ್ತು. ಆದರೆ ಇದೇ ಮೊದಲ ಬಾರಿಗೆ ಪುನೀತ್ ಅವರಿಂದ ಪಡೆದ ಎರಡು ಕಣ್ಣುಗಳನ್ನು ಆಧುನಿಕ ತಂತ್ರಜ್ಞಾನದ ನೆರವಿನೊಂದಿಗೆ ನುರಿತ ತಜ್ಞರ ತಂಡವು ಯಶಸ್ವಿಯಾಗಿ ನಾಲ್ವರಿಗೆ ದೃಷ್ಟಿ ಭಾಗ್ಯ ನೀಡಿದೆ ಎಂದರು.
ಪುನೀತ್ ಅವರ ಮರಣದ ಮಾರನೇ ದಿನವೆ ನಾಲ್ಕು ಜನರಿಗೆ ಕಸಿ ಮಾಡಲಾಗಿದೆ. ಎಲ್ಲರಿಗೂ ದೃಷ್ಟಿ ಸ್ಪಷ್ಟವಾಗಿದೆ. ಒಂದೇ ದಿನ ಒಬ್ಬರ ಕಣ್ಣನ್ನು ನಾಲ್ವರಿಗೆ ಕಸಿ ಮಾಡಿರುವುದು ರಾಜ್ಯದಲ್ಲಿ ಇದೇ ಮೊದಲು. ಇವರಲ್ಲಿ ಒಬ್ಬ ಯುವತಿ ಹಾಗೂ ಮೂವರು ಯುವಕರು ಸೇರಿದ್ದಾರೆ ಎಂದರು.
“ದಾನ ಪಡೆದ ಕಣ್ಣುಗಳು ಆರೋಗ್ಯಕರವಾಗಿದ್ದರೆ ಕಾರ್ನಿಯಾವನ್ನು ಎರಡು ಭಾಗಗಳನ್ನಾಗಿ ಮಾಡಿ ಇಬ್ಬರಿಗೆ ಕಸಿ ಮಾಡಬಹುದು. ಆದರೆ ನಾವು ದಾನಿಗಳಿಂದ ಪಡೆದ ಬಹುತೇಕರ ಕಣ್ಣುಗಳಲ್ಲಿ ಕಾರ್ನಿಯಾದ ಮುಂಬಾಗ ಚೆನ್ನಾಗಿದ್ದರೆ, ಹಿಂಭಾಗದಲ್ಲಿ ತೊಂದರೆ ಇರುತ್ತದೆ, ಅಥವಾ ಹಿಂಭಾಗದಲ್ಲಿ ಚೆನ್ನಾಗಿದ್ದರೆ ಮುಂಭಾಗದಲ್ಲಿ ಸಮಸ್ಯೆ ಇರುತ್ತಿತ್ತು. ನಟ ಪುನೀತ್ ಅವರ ಎರಡು ಕಣ್ಣುಗಳಲ್ಲೂ ಯಾವುದೇ ಸಮಸ್ಯೆ ಇರಲಿಲ್ಲ. ಹಾಗಾಗಿ ಕಣ್ಣಿನ ಕಾರ್ನಿಯಾದ ಮುಂದಿನ ಮತ್ತು ಹಿಂದಿನ ಪದರಗಳನ್ನು ಬೇರ್ಪಡಿಸುವ ಮೂಲಕ ಪ್ರತಿ ಕಣ್ಣಿನಿಂದ ತಲಾ ಇಬ್ಬರು ರೋಗಿಗಳಿಗೆ ಚಿಕಿತ್ಸೆ ನೀಡಲು ನಾವು ಬಳಸಿದ್ದೇವೆ.
ಇಂತಹ ಸಂಕಷ್ಟದ ಸಂದರ್ಭದಲ್ಲಿ ಕಣ್ಣಿನ ದಾನ ಮಾಡಿದ ಡಾ. ರಾಜಕುಮಾರ್ ಕುಟುಂಬ ವರ್ಗಕ್ಕೆ ನಾವು ತುಂಬಾ ಧನ್ಯವಾದಗಳನ್ನು ಸಲ್ಲಿಸುತ್ತೇವೆ ಎಂದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Maharashtra Election ‘ಮಹಾ’ ಚುನಾವಣೆ.ಮತ್ತೆ ತಲೆಯೆತ್ತಿದ ” ಮಹಾಯುತಿ” ಮಕಾಡೆ ಬಿದ್ದಅಘಾಡಿ

Maharashtra Election ದೇಶದ ಗಮನ ಸೆಳೆದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ...

Police Department ರಾಜ್ಯದ ಜೈಲುಗಳ ವಾರ್ಡನ್ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೇಮಕವಾಗಲು ಆಸಕ್ತ ಮಾಜಿ ಸೈನಿಕರು ಅರ್ಜಿ ಸಲ್ಲಿಸಲು ಅವಕಾಶ

Police Department ಕರ್ನಾಟಕ ರಾಜ್ಯಾದ್ಯಾಂತ ಇರುವ ಜೈಲುಗಳಲ್ಲಿ ವಾರ್ಡನ್‌ ಹುದ್ದೆಗೆ ಗುತ್ತಿಗೆ...

DC Shivamogga ಶಿವಮೊಗ್ಗ ಜಿಲ್ಲೆಯಲ್ಲಿ ಚುನಾವಣಾ ಜನಸಂಖ್ಯೆ ಅನುಪಾತದ ಬಗ್ಗೆ ಡಾ.ತ್ರಿಲೋಕ ಚಂದ್ರ ಅವರಿಂದ ಪರಿಶೀಲನೆ

DC Shivamogga ಶಿವಮೊಗ್ಗ ಜಿಲ್ಲೆಯಲ್ಲಿ ಚುನಾವಣಾ ಜನಸಂಖ್ಯೆ ಅನುಪಾತ (ಇಪಿ ರೇಷಿಯೋ)...