ನಟ ಪುನೀತ್ ರಾಜಕುಮಾರ್ ಸಾವಿಗೆ ಅತಿಯಾದ ವ್ಯಾಯಾಮ ಕಾರಣ ಎನ್ನುವ ಮಾತು ಎಲ್ಲೆಡೆ ಕೇಳಿ ಬರುತ್ತಿದೆ. ಇದರಿಂದ ಯುವ ಪೀಳಿಗೆ ಆತಂಕಕ್ಕೊಳಗಾಗಿದ್ದಾರೆ.
ಕೆಲವರು ಜಿಮ್ ಗಳಿಗೆ ಗುಡ್ ಬೈ ಹೇಳಿ, ತಮ್ಮ ಸದಸ್ಯತ್ವವನ್ನು ಮುಂದುವರಿಸುವುದಿಲ್ಲ ಎಂದು ಫಿಟ್ನೆಸ್ ಕೇಂದ್ರಗಳಿಗೆ ಗೈರು ಹಾಜರಾಗುತ್ತಿದ್ದಾರೆ. ಈಗಷ್ಟೇ ಕರೋನಾ ಲಾಕ್ಡೌನ್ ಎದುರಾದ ಸಂಕಷ್ಟದಿಂದ ಹೊರಬರಲು ಯತ್ನಿಸುತ್ತಿದ್ದ ಫಿಟ್ನೆಸ್ ಮಾಲೀಕರಿಗೆ ಈ ವಿಷಯ ಆಘಾತವನ್ನುಂಟುಮಾಡಿದೆ.
ಇದರ ಸಲುವಾಗಿ ಸುರಕ್ಷತೆ ದೃಷ್ಟಿಯಿಂದ ಜಿಮ್ ಹಾಗೂ ಫಿಟ್ನೆಸ್ ಸೆಂಟರ್ ಗಳಿಗೆ ವಿಶೇಷ ಮಾರ್ಗಸೂಚಿ ನಿಯಮಗಳನ್ನು ರೂಪಿಸುವುದು ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದರು. ಜಿಮ್ ಮತ್ತು ಫಿಟ್ನೆಸ್ ಸೆಂಟರ್ ಗಳಲ್ಲಿ ದೈಹಿಕ ಕಸರತ್ತಿನ ವೇಳೆ ಸುರಕ್ಷತೆ ನಿಯಮಗಳನ್ನು ಪಾಲಿಸ ಬೇಕಾದ ಅಗತ್ಯವಿದೆ. ಇದಕ್ಕೆ ಕಡ್ಡಾಯವಾಗಿ ಸುರಕ್ಷತಾ ಸಾಮಗ್ರಿಗಳು, ಇತರ ನಿರ್ವಹಣೆ ಸೇರಿ ಹಲವು ವಿಚಾರಗಳಿಗೆ ಸಂಬಂಧಿಸಿದಂತೆ, ಹೃದಯ ತಜ್ಞರಿಂದ ವರದಿ ತಯಾರಿಸಿ ಮಾರ್ಗಸೂಚಿ ಜಾರಿಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ಅನಾರೋಗ್ಯ ಸಮಸ್ಯೆಗಳು ಕಂಡು ಬಂದ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕೆಲಸ, ಪ್ರಥಮ ಚಿಕಿತ್ಸೆ ಮತ್ತು ಆಸ್ಪತ್ರೆಗೆ ದಾಖಲಿಸುವುದು. ವಿಶೇಷ ಮಾರ್ಗದರ್ಶನ ತರಬೇತಿಯನ್ನು ಜಿಮ್ ಮತ್ತು ಫಿಟ್ನೆಸ್ ತರಬೇತಿದಾರರಿಗೆ ನೀಡಲಾಗುವುದು ಎಂದು ತಿಳಿಸಿದರು. 16 ವರ್ಷದ ಹಿಂದೆ ಪುನೀತ್ ರಾಜಕುಮಾರ್ ಹಾಗೂ ರಾಘವೇಂದ್ರ ರಾಜಕುಮಾರ್ ಅವರು ಇಬ್ಬರೂ ಒಂದೇ ಸಲ ಜಿಮ್ ಅಭ್ಯಾಸ ಆರಂಭಿಸಿದ್ದರು. ಪುನೀತ್ ದೇಹದಂಡನೆ ನೋಡಲು ಸಂತೋಷವಾಗುತ್ತಿತ್ತು. ಆದರೆ ಈಗ ಸಂಬಂಧಿಸಿರುವ ಆಘಾತದಿಂದ ಜಿಮ್ ಮಾಡಬೇಕಾ , ಅಥವಾ ಮಾಡಬಾರದು ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಹಲವಾರು ಜನರು ಆತಂಕ ವ್ಯಕ್ತಪಡಿಸಿದ್ದಾರೆ. ಆದರೆ, ಒಂದೆರಡು ಪ್ರಕರಣಗಳಿಂದ ಜಿಮ್ ಮಾಡುವುದು ತಪ್ಪು ಎಂಬ ನಿರ್ಧಾರ ಸರಿ ಇಲ್ಲ ಎಂದು ಮಾಧ್ಯಮ ಮಿತ್ರರಿಗೆ ತಿಳಿಸಿದರು.