Shanthala Spherocast Private Limited ಶಿವಮೊಗ್ಗದ ಹೆಸರಾಂತ ಸಂಸ್ಥೆಯಾದ ಶಾಂತಲಾ ಸ್ಟೆರೋಕ್ಯಾಸ್ಟ್ ಪ್ರೈವೇಟ್ ಲಿಮಿಟೆಡ್, ಮಾಚೇನಹಳ್ಳಿ, ಸಂಸ್ಥೆಯ ಯೂನಿಟ್-೨ ರಲ್ಲಿ ದಿನಾಂಕ:೧೯.೧೧.೨೦೨೪ ರ ಮಂಗಳವಾರದಂದು ಸಂಸ್ಥೆಯ ಸಾಮಾಜಿಕ ಕಳಕಳಿಯ ಭಾಗವಾಗಿ ೨೦೨೩-೨೦೨೪ ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇಕಡಾ ೭೦% ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದು ತೇರ್ಗಡೆಯಾದ ಸಂಸ್ಥೆಯ ಉದ್ಯೋಗಿಗಳ ಮಕ್ಕಳಿಗೆ ಪ್ರತಿಭಾ ಪುರಾಸ್ಕಾರ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಪುರಸ್ಕೃತ ವಿದ್ಯಾರ್ಥಿಗಳು, ಮುಖ್ಯ ಅತಿಥಿಗಳಾದ ಶ್ರೀ ಟಿ ಎಸ್ ಹೂವಯ್ಯ ಗೌಡ ವಿ. ಪ್ರಾಂಶುಪಾಲರು ಸಹ್ಯಾದ್ರಿ ವಿಜ್ಞಾನ ಕಾಲೇಜು ಹಾಗೂ ವಿ. ರಿಜಿಸ್ಟ್ರಾರ್ ರಾಷ್ಟ್ರೀಯ ಶಿಕ್ಷಣ ಸಮಿತಿ ಶಿವಮೊಗ್ಗ. ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀಯುತ. ಎಸ್ ರುದ್ರೇಗೌಡ, ಡಿ. ಎಸ್. ಚಂದ್ರಶೇಖರ್ರವರು, ನಿರ್ದೇಶಕರಾದ ಶ್ರೀ ವಿನಯ್ ಡಿ ಸಿ, ಶಾಂತಲಾ ಸಮೂಹ ಸಂಸ್ಥೆಗಳ ನಿರ್ದೇಶಕರು ಮತ್ತು ಸಿಬ್ಬಂದಿಗಳು, ಸಂಸ್ಥೆಯ ಉದ್ಯೋಗಿಗಳು ಹಾಗೂ ಪುರಸ್ಕೃತ ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಒಟ್ಟು ೦೯ ವಿದ್ಯಾರ್ಥಿಗಳಿಗೆ ಸಂಸ್ಥೆಯಿಂದ ಪ್ರತಿಯೊಬ್ಬ ವಿದ್ಯಾರ್ಥಿ/ನಿಗೆ ಅಭಿನಂದನಾ ಪತ್ರ ಹಾಗೂ ತಲಾ ರೂ. ೨೦,೦೦೦/- ಇಪ್ಪತ್ತು ಸಾವಿರ ರೂಗಳ ಚೆಕ್ ವಿತರಿಸುವ ಮೂಲಕ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹವನ್ನು ನೀಡಲಾಯಿತು. ವಿದ್ಯಾರ್ಥಿಗಳು ಅವರ ಅನಿಸಿಕೆಗಳನ್ನು ಹಂಚಿಕೊಂಡರು ಹಾಗೂ ವಿದ್ಯಾರ್ಥಿಗಳ ಜೊತೆಗೆ ಪೋಷಕರು ಮಕ್ಕಳ ಶ್ರಮ ಹಾಗೂ ಸಂಸ್ಥೆಯು ನೀಡುತ್ತಿರುವ ಪ್ರೋತ್ಸಾಹದ ಬಗ್ಗೆ ಸಂತಸವನ್ನು ವ್ಯಕ್ತಪಡಿಸಿದರು.
ಈ ಕಾರ್ಯಕ್ರಮದಲ್ಲಿ ಮಷಿನ್ ಶಾಪ್ ವಿಭಾಗದ ಶ್ರೀ. ಚೇತನ್ ಕೆ ಎಸ್ ಇವರು ಎಲ್ಲರನ್ನು ಸ್ವಾಗತಿಸಿದರು. ಶ್ರೀ ನಾಗರಾಜ ವಿ ಡಿ ಹೆಚ್ ಆರ್ ಆಫೀಸರ್ ಇವರು, ಸಂಸ್ಥೆಯನ್ನು ಕಟ್ಟಿಬೆಳೆಸಿದ ಸಂಸ್ಥಾಪಕರ ಬಗ್ಗೆ ಹಾಗೂ ಇಂದಿನ ಪ್ರತಿಭಾ ಪುರಸ್ಕಾರದ ಬಗ್ಗೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮುಖ್ಯ ಅತಿಥಿಗಳಾದ ಶ್ರೀ ಟಿ ಎಸ್ ಹೂವಯ್ಯ ಗೌಡ ರವರು ವಿದ್ಯಾರ್ಥಿಗಳು ಉತ್ತಮ ಯೋಚನೆಗಳೊಂದಿಗೆ ಹೇಗೆ ತಮ್ಮ ಜೀವನವನ್ನು ರೂಪಿಸಿಕೊಳ್ಳಬೇಕು, ಪೋಷಕರು ತಮ್ಮ ಆಸೆಯನ್ನು ವಿದ್ಯಾರ್ಥಿಗಳ ಮೇಲೆ ಹೇರಬಾರದು ಅವರು ತಮ್ಮ ಇಚ್ಚೆಯಂತೆ ವಿಷಯ ಮತ್ತು ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳಲು ಬಿಡಬೇಕು. ವಿದ್ಯಾರ್ಥಿಗಳಿಗೆ ಓದುವ ಛಲವಿರಬೇಕು ಹಾಗೂ ಓದಿನ ಜೊತೆಗೆ ತಮಗಿಷ್ಟವಾದ ಉತ್ತಮ ಹವ್ಯಾಸವೊಂದನ್ನು ಹೊಂದಿರುವುದು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಉತ್ತಮವೆಂದು ತಿಳಿಸಿದರು ಜೊತೆಗೆ ಸಮಾಜದ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕೆಂಬ ಬಗ್ಗೆ ವಿವರಿಸಿದರು.
Shanthala Spherocast Private Limited ಮುಂದುವರೆದು ನಿಷ್ಠೆ, ಪ್ರಾಮಾಣಿಕತೆ ಮತ್ತು ಸತತ ಪ್ರಯತ್ನದಿಂದ ಏನು ಬೇಕಾದರೂ ಸಾಧಿಸಬಹುದು ಎಂದು ಎಲ್ಲರಿಗೂ ಮನಮುಟ್ಟುವಂತೆ ಉತ್ತಮ ಸಾಮಾಜಿಕ ಸಂದೇಶವನ್ನು ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀಯುತ. ಎಸ್ ರುದ್ರೇಗೌಡರವರು ಮಾತನಾಡಿ ಈ ರೀತಿಯ ಪ್ರೋತ್ಸಾಹದಿಂದ ವಿದ್ಯಾರ್ಥಿಗಳಲ್ಲಿ ಚೆನ್ನಾಗಿ ಓದಬೇಕೆನ್ನುವ ಛಲ ಮತ್ತು ಹುಮ್ಮಸ್ಸು ಬರುತ್ತದೆ. ಎಲ್ಲಾ ವಿದ್ಯಾರ್ಥಿಗಳೂ ಅವರ ವಿದ್ಯಾಭ್ಯಾಸದ ನಂತರ ಅವರವರ ಕಾರ್ಯಕ್ಷೇತ್ರದಲ್ಲಿ ಉತ್ತಮವಾಗಿ ಕೆಲಸವನ್ನು ನಿರ್ವಹಿಸುವ ಮೂಲಕ ಹೇಗೆ ದೇಶದ ಆರ್ಥಿಕತೆಯ ವೃದ್ಧಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬಹುದೆಂಬುದನ್ನು ತಿಳಿಸಿದರು. ಅಲ್ಲದೇ ಉನ್ನತ ವಿದ್ಯಾಭ್ಯಾಸಕ್ಕೆ ಇರುವ ಸೌಲಭ್ಯಗಳ ಬಗ್ಗೆ ತಿಳಿಸಿದರು.
ನಾಗರಾಜ್ ವಿ ಡಿ, ಹೆಚ್.ಆರ್ ಆಫೀಸರ್, ಈ ಕಾರ್ಯಕ್ರಮವನ್ನು ನಿರೂಪಿಸಿದರು ಮತ್ತು ಮುಖ್ಯ ಅಥಿತಿಗಳನ್ನು ಪರಿಚಯಿಸಿದರು ಹಾಗೂ ವಂದನಾರ್ಪಣೆಯನ್ನು ಚೇತನ್ ವಿ ಇವರು ನಡೆಸಿಕೊಟ್ಟರು, ನಂಜುಂಡೇಶ್ವರ ಹೆಚ್ ಬಿ ಮ್ಯಾನೇಜರ್ ಹೆಚ್ ಆರ್ ಇವರು ಕಾರ್ಯಕ್ರಮದ ಉಸ್ತುವಾರಿ ವಹಿಸಿಕೊಂಡಿದ್ದರು. ಕಾರ್ಯಕ್ರಮವನ್ನು ರಾಷ್ಟçಗೀತೆ ಹಾಡುವುದರೊಂದಿಗೆ ಮುಕ್ತಾಯಗೊಳಿಸಲಾಯಿತು.
ಒಟ್ಟಿನಲ್ಲಿ ಈ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಶಾಂತಲಾ ಸ್ಪೆರೋಕ್ಯಾಸ್ಟ್ ಸಂಸ್ಥೆಯ ಸಾಮಾಜಿಕ ಕ್ಷೇತ್ರದಲ್ಲಿನ ಕಾಳಜಿಗೆ ಸಾಕ್ಷಿಯಾಯಿತು.
ನಂಜುಡೇಶ್ವರ ಹೆಚ್ ಬಿ ಮ್ಯಾನೇಜರ್ ಹೆಚ್ ಆರ್ ಶಾಂತಲಾ ಸ್ಪೆರೋಕ್ಯಾಸ್ಟ್ ಪ್ರೈವೇಟ್ ಲಿಮಿಟೆಡ್, ಮಾಚೇನಹಳ್ಳಿ. ಕಾರ್ಯಕ್ರಮವನ್ನು ನಿರೂಪಿಸಿದರು.