Saturday, November 23, 2024
Saturday, November 23, 2024

ಯತ್ನಾಳ್ ಬಂಡಾಯದ ಬಾವುಟ. ವಿಜೇಂದ್ರರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿ ! ಹೇಳಿಕೆ

Date:

ರಾಜ್ಯದಲ್ಲಿ ಬಿಜೆಪಿ ಉಳಿಸಬೇಕೆಂದರೆ ಕೇಂದ್ರದವರು ಬಿ. ವೈ. ವಿಜಯೇಂದ್ರನನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ತೆಗೆಯಬೇಕು. ಅಲ್ಲದೇ, ಬಿ. ಎಸ್. ಯಡಿಯೂರಪ್ಪ ಅವರನ್ನು ಯಾವುದೇ ವೇದಿಕೆಯಲ್ಲಿ ಕೂಡಿಸಬಾರದು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸ್ವಪಕ್ಷದವರ ವಿರುದ್ಧವೇ ತಿರುಗಿ ಬಿದ್ದಿದ್ದಾರೆ.

ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ವಿಜಯೇಂದ್ರನನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ತೆಗೆದು ಯಡಿಯೂರಪ್ಪ ಅವರನ್ನು ಯಾವುದೇ ವೇದಿಕೆಯಲ್ಲಿ ಕೂಡಿಸದಿದ್ದಾಗ ಮಾತ್ರ ರಾಜ್ಯದಲ್ಲಿ ಬಿಜೆಪಿ ಉಳಿಯುತ್ತದೆ ಎಂದು ಹೇಳಿದರು.

ಸ್ಟಾರ್ ಪ್ರಚಾಕರ ಪಟ್ಟಿ ವಿಚಾರರಾಜ್ಯದ ಮೂರು ವಿಧಾನಸಭೆ ಕ್ಷೇತ್ರಗಳಿಗೆ ನಡೆಯುತ್ತಿರುವ ಉಪಚುನಾವಣೆಯಲ್ಲಿ ಬಿಜೆಪಿ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಯತ್ನಾಳ್ ಮತ್ತು ಶಾಸಕ ರಮೇಶ ಜಾರಕಿಹೊಳಿ ಹೆಸರು ಕೈಬಿಟ್ಟಿರುವ ಕುರಿತು ಖಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ವಿಜಯೇಂದ್ರ ನಮ್ಮನ್ನು ಸ್ಟಾರ್ ಮಾಡುತ್ತಾನಾ? ಎಂದು ಪ್ರಶ್ನಿಸಿದರು.

ನಮ್ಮನ್ನು ಜನರು ಸ್ಟಾರ್ ಮಾಡುತ್ತಾರೆ. ವಿಜಯೇಂದ್ರನ ಭಾಷಣಕ್ಕೆ ಯಾರೂ ಕೂಡುತ್ತಿಲ್ಲ. ಅಪ್ಪ ಮತ್ತು ಮಗ ಇಬ್ಬರೇ ಕುಳಿತು ಭಾಷಣ ಹೊಡೆಯಬೇಕಾಗಿದೆ. ಅವರದ್ದು ಮುಗಿದಿದೆ.

ವಿಜಯೇಂದ್ರನ ಕೇಳಿ ಯತ್ನಾಳ್ ಮತ್ತು ರಮೇಶ್ ಜಾರಕಿಹೊಳಿ ಸ್ಟಾರ್ ಪ್ರಚಾರ ಆಗಬೇಕೆಂಬುವಅವಶ್ಯಕತೆ ಇಲ್ಲ ಎಂದರು.
ರಾಜ್ಯದ ಜನ ನಮ್ಮನ್ನು ಒಪ್ಪಿಕೊಂಡಿದ್ದಾರೆ. ಜನರೇ ನಮ್ಮನ್ನು ಸ್ಟಾರ್ ಮಾಡಿದ್ದಾರೆ. ಈಗಾಗಲೇ ವಿಜಯೇಂದ್ರ ಜೀರೋ ಆಗಿದ್ದಾನೆ. ಸುಮ್ಮನೆ ಬಡೆದಾಡುತ್ತಿದ್ದಾರೆ ಎಂದು ಅವರು ಹೇಳಿದರು.

ಬಿಜೆಪಿ ಕರ್ನಾಟಕ ಎಕ್ಸ್ಖ್ ಖಾತೆ ಹೆಸರು ಬದಲಾಯಿಸಲಿ ವಿಜಯೇಂದ್ರ ಮತ್ತು ಅವರ ಅಪ್ಪ ಅಧಿಕಾರದಲ್ಲಿದ್ದಾಗ ಸಾವಿರಾರು ಕೋಟಿ ರೂಪಾಯಿ ಹಣ ತಿಂದಿದ್ದಾರೆ. ಹಣ ಖರ್ಚು ಮಾಡಿ ಮಾಡಿ ಹೀರೋ ಆಗಬೇಕೆನ್ನುತ್ತಿದ್ದಾರೆ. ಬಿಜೆಪಿ ಕರ್ನಾಟಕ ಎಕ್ಸ್ ಇದೆಯಲ್ಲ ಅದನ್ನ ಬಿವೈವಿ ಕರ್ನಾಟಕ ಮಾಡುವುದು ಒಳ್ಳೆಯದು. ಅದರಲ್ಲಿ ವಿಜಯೇಂದ್ರನ ಗುಣಗಾನ ಮಾಡುವುದನ್ನು ಬಿಟ್ಟರೆ ಏನೂ ಇರಲ್ಲ. ಮೂರೂ ಕ್ಷೇತ್ರಗಳ ಉಪಚುನಾವಣೆಯಲ್ಲಿ ಅಭ್ಯರ್ಥಿಗಳಿಗೆ ಹಿಂದುಗಳ ಮತ ಬೇಕಾದರೆ ನಮ್ಮನ್ನು ಕರೆಯಲಿ.
ನಮಗೆ ಸಾಬರು ಮತ ಹಾಕುತ್ತಾರೆ ಎಂದು ತಿಳಿದುಕೊಂಡಿದ್ದರೆ ಕರೆಯಬೇಡಿ ಎಂದು ಅವರು ಹೇಳಿದರು. ವಿಜಯೇಂದ್ರ, ಯತ್ನಾಳ್ ನಡುವೆ ಸಮರ ವಿಚಾರಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಮತ್ತು ತಮ್ಮ ನಡುವೆ ನಡೆಯುತ್ತಿರುವ ಸಮರದ ಕುರಿತು ಹೈಕಮಾಂಡ್ ಯಾಕೆ ಗಮನ ನೀಡುತ್ತಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಶಾಸಕರು, ಹೈಕಮಾಂಡ್ ನನ್ನ ಬಗ್ಗೆ ಮತ್ತು ಬಿ. ವೈ. ವಿಜಯೇಂದ್ರನ ಬಗ್ಗೆ ಮೌನ ವಹಿಸಿದೆ.

ಅವರಿಗೆ ಏನು ಗೊತ್ತಾಗುತ್ತಿಲ್ಲ. ಯತ್ನಾಳನನ್ನು ಹಿಡಿಯಬೇಕು ಅಥವಾ ವಿಜಯೇಂದ್ರನ ಹಿಡಿಯಬೇಕು ಎಂಬ ಗೊಂದಲದಲ್ಲಿದ್ದಾರೆ. ಮಾಧ್ಯಮಗಳು ಯತ್ನಾಳನನ್ನು ಉಚ್ಚಾಟನೆ ಮಾಡಲಾಗುತ್ತದೆ ಎಂದು ಸುದ್ದಿ ಮಾಡುತ್ತವೆ.
ಆರು ವರ್ಷದಿಂದ ಯತ್ನಾಳ ಬಿಜೆಪಿಯಿಂದ ಉಚ್ಚಾಟನೆ ಎಂದು ಸುದ್ದಿ ಮಾಡುತ್ತೀರಿ. ಒಮ್ಮೆಯಾದರೂ ಹೊರಗೆ ಹಾಕಿ ಎಂದು ಅವರು ಕುಟುಕಿದರು.

ವಿಜಯೇಂದ್ರ ಕೆಲವೊಂದು ಸುದ್ದಿ ಮಾಡಿ ಎಂದು ಹೇಳುತ್ತಾನೆ. ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿ ಬೆಳೆಯುತ್ತದೆ ಎಂದು ಸುಳ್ಳು ಸುದ್ದಿ ಮಾಡುತ್ತಾರೆ. ನನ್ನ ವಿರುದ್ಧ ಕ್ರಮಕ್ಕಾಗಿ ವಿಜಯೇಂದ್ರ ಮತ್ತು ಅವರ ಅಪ್ಪ ದಿನಾಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಬಳಿ ವಿಜಯೇಂದ್ರನನ್ನು ಮುಖ್ಯಮಂತ್ರಿ ಅಭ್ಯರ್ಥಿಯೆಂದು ಘೋಷಣೆ ಮಾಡಿ ಎಂದು ಕೂಡುತ್ತಾರೆ ಎಂದು ಅವರು ಹೇಳಿದರು.

ಯತ್ನಾಳ್‌ಗೆ ಸೂಕ್ತ ಸ್ಥಾನಮಾನ ವಿಚಾರಯತ್ನಾಳ್‌ಗೆ ಸೂಕ್ತ ಸ್ಥಾನಮಾನ ಮಾಡಿಕೊಡಲಾಗುತ್ತದೆ ಎಂದು ವಿಜಯೇಂದ್ರ ಹೇಳಿಕೆ ವಿಚಾರ ಕುರಿತು ಖಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ನಾನು ವಿಜಯೇಂದ್ರ ಬಳಿ ಸ್ಥಾನಮಾನ ತಗೋ ಮಗ ಅಲ್ಲ.
ಯಡಿಯೂರಪ್ಪ ಸಿಎಂ ಇದ್ದಾಗಲೇ ಆತನ ಬಳಿ ಮಂತ್ರಿ ಆಗಲ್ಲ ಎಂದು ಹೇಳಿದ್ದೇನೆ. ನಾನು ವಾಜಪೇಯಿ ಅವರ ಸರಕಾರದಲ್ಲಿ ಮಂತ್ರಿ ಆಗಿದ್ದೇನೆ. ನಿನ್ನಂತ ಭ್ರಷ್ಟ ಸಿಎಂ ಬಳಿ ನಾನು ಸಚಿವನಾಗಲ್ಲ ಎಂದು ಯಡಿಯೂರಪ್ಪಗೆ ಹೇಳಿದ್ದೆ. ವಿಜಯಪುರ ಜಿಲ್ಲೆಗೆ ವಿಜಯೇಂದ್ರ ಮತ್ತು ಯಡಿಯೂರಪ್ಪ ಬಹಳ ಅನ್ಯಾಯ ಮಾಡಿದ್ದಾರೆ. ಈ ಹಿಂದೆ ರೂ. 125 ಕೋಟಿ ಅನುದಾನ ಬಂದಿದ್ದನ್ನು ಕಡಿತ ಮಾಡಿದ್ದರು. ನಮ್ಮ ಜಿಲ್ಲೆಗೆ ಸಚಿವ ಸ್ಥಾನ ಕೊಡಲಿಲ್ಲ. ಅಪ್ಪ ಮಕ್ಕಳು ಇನ್ನೂ ಏನೇನೋ ಮಾಡಬೇಕೆನ್ನುತ್ತಾರೆ. ನಮ್ಮ ಜಿಲ್ಲೆಗೆ ಅವಮಾನ ಮಾಡಿದರು ಎಂದು ಯತ್ನಾಳ ವಾಗ್ದಾಳಿ ನಡೆಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Maharashtra Election ‘ಮಹಾ’ ಚುನಾವಣೆ.ಮತ್ತೆ ತಲೆಯೆತ್ತಿದ ” ಮಹಾಯುತಿ” ಮಕಾಡೆ ಬಿದ್ದಅಘಾಡಿ

Maharashtra Election ದೇಶದ ಗಮನ ಸೆಳೆದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ...

Police Department ರಾಜ್ಯದ ಜೈಲುಗಳ ವಾರ್ಡನ್ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೇಮಕವಾಗಲು ಆಸಕ್ತ ಮಾಜಿ ಸೈನಿಕರು ಅರ್ಜಿ ಸಲ್ಲಿಸಲು ಅವಕಾಶ

Police Department ಕರ್ನಾಟಕ ರಾಜ್ಯಾದ್ಯಾಂತ ಇರುವ ಜೈಲುಗಳಲ್ಲಿ ವಾರ್ಡನ್‌ ಹುದ್ದೆಗೆ ಗುತ್ತಿಗೆ...

DC Shivamogga ಶಿವಮೊಗ್ಗ ಜಿಲ್ಲೆಯಲ್ಲಿ ಚುನಾವಣಾ ಜನಸಂಖ್ಯೆ ಅನುಪಾತದ ಬಗ್ಗೆ ಡಾ.ತ್ರಿಲೋಕ ಚಂದ್ರ ಅವರಿಂದ ಪರಿಶೀಲನೆ

DC Shivamogga ಶಿವಮೊಗ್ಗ ಜಿಲ್ಲೆಯಲ್ಲಿ ಚುನಾವಣಾ ಜನಸಂಖ್ಯೆ ಅನುಪಾತ (ಇಪಿ ರೇಷಿಯೋ)...