Saturday, November 23, 2024
Saturday, November 23, 2024

Klive Special Article ಜಮ್ಮು & ಕಾಶ್ಮೀರ ಚುನಾವಣೆ. ಜನತೆಯಿಂದ ಸಂವಿಧಾನ ಒಪ್ಪಿತದ ಅಭಿವ್ಯಕ್ತಿ

Date:

Klive Special Article ಜಮ್ಮು ಮತ್ತು ಕಾಶ್ಮೀರದಲ್ಲಿ ಜನತೆ ಬಹು ನಿರೀಕ್ಷಿತ ಬಿಜೆಪಿಗೆ ಆಡಳಿತ ನೀಡಲು ‌ಇನ್ನೂ ಮನಸ್ಸು ಮಾಡಿಲ್ಲದಂತಿದೆ.
ಆದರೆ ಪ್ರಜಾಪ್ರಭುತ್ವ ವ್ಯವಸ್ಥೆ ಒಪ್ಪಿಕೊಂಡ ಮನೋಭಾವ ತೋರಿದ್ದಾರೆ.
ಸ್ಥಳೀಯ ಆಡಳಿತಕ್ಕೆ
ರಾಷ್ಡ್ರೀಯ ಪಕ್ಷಗಳ ನಾಯಕತ್ವ ಇನ್ನೂ
ಅಲ್ಲಿ ಬೇರೂರಿ ಕೆಲಸ ಮಾಡಬೇಕಿದೆ. ಏಕೆಂದರೆ ಕಾಂಗ್ರೆಸ್ ಮತ್ತು ‌ ಮೆಹಬೂಬ ಅವರ ಪಿಡಿಪಿ ಪಕ್ಷಕ್ಕೂ ಅಲ್ಲಿಯ ಜನತೆ
ಸ್ವಾಗತಿಸಿಲ್ಲ. ಇದ್ದದ್ದರಲ್ಲಿ‌ ಪ್ರಮುಖ ವಿರೋಧ ಪಕ್ಷವಾಗಿ
ಬಿಜೆಪಿ ಮಿಂಚಿದೆ.

90 ವಿಧಾನಸಭಾ ಕ್ಷೇತ್ರಗಳ ಪೈಕಿ ಸರ್ಕಾರ ರಚನೆ 46 ಸ್ಥಾನಗಳ ಅಗತ್ಯ ಇತ್ತು.
ಅದರಂತೆ ಕಾಂಗ್ರೆಸ್ ಮತ್ತು ನ್ಯಾಷನಲ್ ಕಾನ್ಪರೆನ್ಸ್ ಮೈತ್ರಿಕೂಟ 48 ಸ್ಥಾನಗಳಲ್ಲಿ ಗೆದ್ದು ಸ್ಪಷ್ಟ ಬಹುಮತ ಗಳಿಸುವ ಮೂಲಕ ಆಡಳಿತ ಚುಕ್ಕಾಣಿ ಹಿಡಿಯಲು ಮುಂದಾಗಿದೆ.
ಒಮರ್ ಅಬ್ದುಲ್ಲ ಎರಡು ಕ್ಷೇತ್ರಗಳಲ್ಲಿ ಗೆದ್ದು ಅಸೆಂಬ್ಲಿಗೆ ಆಯ್ಕೆಯಾಗಿದ್ದಾರೆ.
ಚುನಾಣೋತ್ತರ ಸಮಯದಿಂದಲೂ
ಫರೂಕ್ ಅಬ್ದುಲ್ಲ ಬಿಜೆಪಿ ಯನ್ನ ವಿರೋಧಿಸುತ್ತಲೇ ಬಂದಿದ್ದಾರೆ. ಮೈತ್ರಿಗೆ ಅವರು ” ಬುಲ್ಡೋಜರ್ ” ನೀತಿಯಿಂದಾಗಿ‌‌ ಬಿಜೆಪಿ ಹೆಸರು ಕೆಡಿಸಿಕೊಂಡಿದೆ ಎನ್ನುವ ಅರ್ಥ ಬರುವ ಹೇಳಿಕೆ ನೀಡಿ
ಬಿಜೆಪಿಯೊಂದಿಗಿನ ಮೈತ್ರಿಯನ್ನ ತಿರಸ್ಕರಿಸಿ‌ ಮಾತಾಡಿದ್ದಾರೆ.
ಆದರೆ ಈಗ ಗೆದ್ದು ಸೀಎಂ ಆಗಲಿರುವ
ಒಮರ್ ಅಬ್ದುಲ್ಲ. ಮೋದಿ ಅವರ ಬಗ್ಗೆ ನೀಡಿದ ಮೆದು ಹೇಳಿಕೆ , ಅಪ್ಪನ ಮಾತಿಗೆ
ವಿರೋಧಾಭಾಸ ಉಂಟುಮಾಡಿದೆ.
ಜಮ್ಮು & ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ ನೀಡುವ ಬಗ್ಗೆ ಮತ್ತು ಲೆ.ಗವರ್ನರ್ ಅವರಿಗಿರುವ ಐದು ಶಾಸಕರ ನಾಮನಿರ್ದೇಶನ ಆಧಿಕಾರದ ಬಗೆಗಿನ ವಿವಾದ ಪರಿಹರಿಸಲು ಕಾನೂನಾತ್ಮಕ ಪ್ರಯತ್ನ ಮಾಡುವುದಾಗಿ ಫರೂಕ್ ನುಡಿದಿದ್ದಾರೆ.
ಇಂಡಿ ಕೂಟದ ಬಗ್ಗೆ ನಾಯಕ‌ ರಾಹುಲ್ ಮತ್ತು ಇತರರು ಏನೊಂದೂ ಮಾತಾಡಿಲ್ಲ. ಅವರ ಚಿತ್ತವೆಲ್ಲ ಹರಿಯಾಣ ಫಲಿತಾಂಶದತ್ತ ನೆಟ್ಟಿದೆ.

Klive Special Article ಪ್ರಸ್ತುತ ವಿಧಾನಸಭಾ ಚುನಾವಣೆ
ಮತ ಹಂಚಿಕೆ ಪ್ರಮಾಣ ಹೀಗಿದೆ

ಜಮ್ಮು ಮತ್ತು ಕಾಶ್ಮೀರ ರಾಷ್ಟ್ರೀಯ ಕಾನ್ಫರೆನ್ಸ್ – 23.43%
ಬಿಜೆಪಿ – 25.64%
ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (PDP) – 8.87%

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (INC) – 11.97%
ಇತರೆ – 30.09%
( ಮಾಧ್ಯಮದಲ್ಲಿ ಪ್ತಕಟವಾಗಿರುವ ಅಂಕಿ‌ಅಂಶಗಳನ್ನ ಆಧರಿಸಿದೆ .)
ಅಂದರೆ ಇಲ್ಲಿ ಒಳನೋಟ ಅಚ್ಚರಿಯನ್ನೇ ಉಂಟುಮಾಡುತ್ತದೆ.
ಶೇ.30.9 ಇತರೆ ಪಕ್ಷೇತರರು ಗಳಿಸಿದ್ದಾರೆ. ಈ ಹಂಚಿಕೆಯೇ ಅಪಾರವಾಗಿದೆ.
ಮೈತ್ರಿಕೂಟದ
ನ್ಯಾಷನಲ್ ಕಾನ್ಫರೆನ್ಸ್ ಶೇ.23.43
ಮತ್ತು ಕಾಂಗ್ರೆಸ್ ಶೇ.11.97
ಒಟ್ಟು ಶೇ. 35.40
ಆಗುತ್ತದೆ.
ಮೈತ್ರಿಕೂಟ ಉಸಿರುಗಟ್ಟಿಕೊಂಡು ಗೆಲುವು ಸಾಧಿಸಿದೆ ಅನ್ನಬಹುದು.
ಕಳೆದ 2014 ಚುನಾವಣೆಯಲ್ಲಿ ಸು.
ಶೇ 20 ರಷ್ಟಿದ್ದ ಬಿಜೆಪಿಗೆ ಈಗ ಶೇ25.64 ಏರಿಕೆಯಾಗಿದೆ.
ಚುನಾವಣೆಯಲ್ಲೆ ಶೇ67 ಮತದಾನವಾಗಿದೆ. ಅಂದರೆ ಜನತೆ ಪ್ರಜಾಪ್ರಭುತ್ವಕ್ಕೆ ಒಲವು ತೋರಿದ್ದಾರೆ.

ಜಮ್ಮು ಮತ್ತು ಕಾಶ್ಮೀರ ಎರಡೂ ಪ್ರದೇಶಗಳಲ್ಲಿ ಕ್ರಮವಾಗಿ
ಜಮ್ಮು ನಲ್ಲಿ( 43)
ನ್ಯಾಷನಲ್ ಕಾನ್ಫರೆನ್ಸ್ 8 ಮತ್ತು ಬಿಜೆಪಿ‌ 29
ಹಾಗೂ ಕಾಶ್ಮೀರದಲ್ಲಿ( 47)
ನ್ಯಾಷನಲ್ ಕಾನ್ಫರೆನ್ಸ್ 41
ಮತ್ತು ಬಿಜೆಪಿ 0.
ಕಾಶ್ಮೀರದಲ್ಲಿ ಯಾಕೆ ಶೂನ್ಯ ಸಾಧನೆ ಬಿಜೆಪಿ ತಲೆಕೆರೆದುಕೊಳ್ಳಬೇಕಿದೆ.

ಇಲ್ಲಿನ ಗೆಲುವಿನ ಬಗ್ಗೆ ಪ್ರಧಾನಿ ಮೋದಿ ನಿರಾಶೆ ವ್ಯಕ್ತಪಡಿಸಿಲ್ಲ.
ಆದರೆ ” ಜಮಗಮು ಮತ್ತು ಕಾಶ್ಮೀರದಲ್ಲಿ ಸಂವಿಧಾನಾತ್ಮಕ ಚುನಾವಣೆ ಪ್ರಕ್ರಿಯೆ ನಡೆಸಿದ ಕೇಂದ್ರ ಸರ್ಕಾರದ ನೀತಿಯು
ಡಾ.ಬಾಬಾ ಸಾಹೇಬ್ ಅಂಬೆಡ್ಕರ್ ಅವರಿಗೆ ಸಲ್ಲಿಸಿದ ಗೌರವವಾಗಿದೆ” ಎಂದಿರುವುದು ಗಮನಾರ್ಹ.
ರಾಜ್ಯಭಾರ ಯಾರೇ ಮಾಡಲಿ. ಭಾರತೀಯ ರಾಜ್ಯಗಳ ಸಂವಿಧಾನಾತ್ಮಕ ಚೌಕಟ್ಟಿಗೆ ಒಳಪಟ್ಟಂತೆ ಈಗ ಗೆದ್ದಿರುವ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ನಾಯಕರು ಮರುಮಾತಿಲ್ಲದೇ ತಾವು ಭಾರತ ಗಣರಾಜ್ಯದ ಒಂದು ಭಾಗ ಎಂದು ಒಪ್ಪಿಕೊಂಡಂತಾಗಿದೆ.
370 ನೇ ವಿಧಿ ರದ್ದತಿ‌ ಈಗ ಇತಿಹಾಸ.
ಮುಂದೆ ಕಾಲಪಕ್ವವಾದಾಗ
ರಾಜ್ಯ ಸ್ಥಾನಮಾನವೂ ದಕ್ಕಲಿ.
ಸದಾ ಕಾಶ್ಮೀರ ಸಮಸ್ಯೆ ಮುಂದಿಟ್ಟು ಕಾಲುಕೆರೆದು ಜಗಳ ಮಾಡುವ ಪಾಕಿಸ್ತಾನಕ್ಕೆ ದಿಟ್ಟ ಉತ್ತರ ಕೊಡುವಂತಾಗಲಿ
ಎಂಬುದೇ ಎಲ್ಲರ ಆಶಯ.

ಡಾ.ಸುಧೀಂದ್ರ
ಪ್ರಧಾನ ಸಂಪಾದಕರು
ಕೆ ಲೈವ್ ನ್ಯೂಸ್
ಶಿವಮೊಗ್ಗ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Akhila Bharatiya Sahitya Parishad ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ “ರಾಜ್ಯೋತ್ಸವ ಕವಿಗೋಷ್ಠಿ”

Akhila Bharatiya Sahitya Parishad ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಕರ್ನಾಟಕ...

Mohare Hanumantharaya Award ಪ್ರಶಸ್ತಿ ಪುರಸ್ಕೃತ ಪತ್ರಕರ್ತ, ‘ಕ್ರಾಂತಿ ದೀಪ ‘ಮಂಜುನಾಥ್ ಅವರಿಗೆ ಸನ್ಮಾನ

Mohare Hanumantharaya Award ಪತ್ರಿಕೋದ್ಯಮದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾದ ಮೊಹರೆ ಹಣಮಂತರಾಯ...

MESCOM ನವೆಂಬರ್ 23 .ಹೊಳಲೂರು ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ

MESCOM ಹೊಳಲೂರು ಗ್ರಾಮದ 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ...

Rotary Club Shimoga ಪ್ರೌಢಾವಸ್ಥೆಯು ದೇಹದಲ್ಲಿ ಅನೇಕ ಬದಲಾವಣೆ ತರುತ್ತದೆ.ಅದನ್ನ ಗಮನಿಸಬೇಕು- ಡಾ.ಮೋಕ್ಷಾ

Rotary Club Shimoga ರೋಟರಿ ಸಂಸ್ಥೆಯು ನಿಸ್ವಾರ್ಥವಾಗಿ ವಿಶ್ವದ ಎಲ್ಲ ಭಾಗಗಳಲ್ಲಿ...