Saturday, November 23, 2024
Saturday, November 23, 2024

Klive Special Article ಸ್ವಾತಂತ್ರ್ಯದ ಹಬ್ಬ.ಮನೆಯಲ್ಲಿ ಸಡಗರ ಗೀತ ಗಾಯನ

Date:

Klive Special Article ಒಂದು ಕಾರ್ಯಕ್ರಮವಾಗಿ ಬಹುದಿನಗಳವರೆಗೂ ಜನರು ಅದನ್ನು ಸಂಭ್ರಮಿಸುತ್ತ ಮೆಲುಕು ಹಾಕುತ್ತಿದ್ದಾರೆ ಎಂದರೆ ಅದರ ಕುರಿತಾಗಿ ಬರೆಯಲೇಬೇಕೆಂಬ ಹಂಬಲ ಸಹಜ.

ಸ್ವಾತಂತ್ರ್ಯ ದಿನಾಚರಣೆ ಒಂದು ರಾಷ್ಟ್ರೀಯ ಹಬ್ಬವಾಗಿ ಅದು ಬರಿ ಸರ್ಕಾರಿ ಕಚೇರಿಗಳು, ಶಾಲಾ ಕಾಲೇಜುಗಳಿಗಷ್ಟೇ ಸೀಮಿತ ಎಂದುಕೊಂಡಿದ್ದ ದಿನಗಳು ಇದ್ದವು. ಆದರೆ ಅದು ಈಗ ನಮ್ಮ ಹೆಮ್ಮೆಯ ಪ್ರಧಾನಿ ಮೋದಿಜಿ ಅವರ ಕಾರಣದಿಂದ ‘ಹರ್ ಘರ್ ತಿರಂಗಾ’ ಎಂದೂ ಮನೆ ಮನೆಯಲ್ಲಿ ಸಂಭ್ರಮಿಸುವಂತಾಯಿತು. ಈ ನಡುವೆ ಕಳೆದ 14 ವರ್ಷಗಳಿಂದಲೂ ನಿರಂತರವಾಗಿ ತಾಯಿ ಭಾರತಿಯ ಪಾದ ಪದ್ಮಗಳ ಪೂಜಿಸೋಣ ಬನ್ನಿ ಎಂದು ಎಲ್ಲರಿಗೂ ಕರೆ ಕೊಡುತ್ತಾ ತಮ್ಮ ಮನೆ ಅಂಗಳದಲ್ಲೇ ಸ್ವಾತಂತ್ರ್ಯೋತವವನ್ನು ಹಬ್ಬವಾಗಿ ಆಚರಿಸುತ್ತಾ ಬಂದಿರುವ ಕುಟುಂಬವು ಒಂದಿದೆ. ಬಾಯರ್ಸ್ ಕಂಪ್ಯೂಟರ್ಸ್ ನ ಮಾಲೀಕರಾದ ಶ್ರೀಯುತ ಚಂದ್ರಶೇಖರ್ ಬಾಯರ್ ಹಾಗೂ ಅವರ ಪತ್ನಿ ಶ್ರೀಮತಿ ಜ್ಯೋತಿ ಬಾಯರ್ ತಾವು ವಿವಾಹವಾದ ದಿನದಿಂದಲೂ ಮನೆಯಲ್ಲಿ
ದೀಪಾವಳಿ, ನವರಾತ್ರಿ ಹಬ್ಬ, ಜನ್ಮದಿನಾಚರಣೆ ಹಾಗೂ ವಿವಾಹ ವಾರ್ಷಿಕೋತ್ಸವವೇ ಮೊದಲಾದ ಇತರೆ ಹಬ್ಬಗಳನ್ನು ವಿಶೇಷವಾಗಿ ಆಚರಿಸಿಕೊಳ್ಳದೆ ಸ್ವಾತಂತ್ರ್ಯೋತ್ಸವ ಮತ್ತು ಸತ್ಯನಾರಾಯಣ ಪೂಜೆ ಎಂದು ಕರೆದು ನೂರಾರು ಜನರಿಗೆ ದೇಶಪ್ರೇಮದ ಸುಧೆಯನ್ನು ಹರಿಸುತ್ತಾ ಬಂದಿದ್ದಾರೆ. ಅನೇಕ ಮಹನೀಯರನ್ನು ಕರೆಸಿ ಉಪನ್ಯಾಸ ಮಾಡಿದ್ದಾರೆ. ಅಲ್ಲದೆ ಸಾಮಾನ್ಯ ಕೆಲಸವನ್ನು ನಿಷ್ಠೆಯಿಂದ ಮಾಡಿದ ಜನರನ್ನು ಗುರುತಿಸಿ, ಅವರಿಗೆ ಸ್ವದೇಶಿ ವಸ್ತುಗಳನ್ನೇ ಉಡುಗೊರೆಯಾಗಿ ನೀಡಿ ಸನ್ಮಾನಿಸುತ್ತಾ ಬಂದಿದ್ದಾರೆ. ಕಾರ್ಯಕ್ರಮದ ನಂತರ ಪುಷ್ಕಳ ಭೋಜನವನ್ನು ಸಹ ಹಾಕಿಸುತ್ತಾರೆ.

Klive Special Article ಇದರಲ್ಲೇನು ವಿಶೇಷ ಎಂದರೆ ಈ ಬಾರಿ ಆಯೋಜಿಸಿದ “ತಾಯಿ ಭಾರತಿಗೆ ಗೀತನಮನ” ಎಂಬ ಕಾರ್ಯಕ್ರಮ. ಯಾವಾಗಲೂ ಉಪನ್ಯಾಸ ಏರ್ಪಡಿಸಿ ಬಂದಂತಹ ಜನರಿಗೆ ದೇಶಪ್ರೇಮದ ಕುರಿತಾಗಿ ತಿಳಿಸುತ್ತಿದ್ದ ಅವರು ಸಂಗೀತದ ಸುಧೆಯೊಂದಿಗೆ ತಾಯಿ ಭಾರತಿಗೆ ಗಾನ ನಮನವನ್ನು ಸಲ್ಲಿಸಿದ್ದು ವಿಶೇಷ. ಅದಕ್ಕೆ ಖ್ಯಾತವಾಗ್ಮಿಗಳು, ಚಿಂತಕರು, ಲೇಖಕರು, ಕವಿ, ವಿಮರ್ಶಕರೂ ಆದಂತಹ ಶ್ರೀ ವಿನಯ್ ಶಿವಮೊಗ್ಗ ಅವರ ನವಿರಾದ ನಿರೂಪಣೆಯೊಂದಿಗೆ ಮಲೆನಾಡಿನ ಹೆಮ್ಮೆಯ ಪ್ರತಿಭೆ ಶ್ರೀ ಪೃಥ್ವಿ ಗೌಡ ಅವರ ಅದ್ಭುತವಾದ ರಾಗ ಲಹರಿ ಕೇಳುಗನ ಹೃನ್ಮನ ತಣಿಸಿತು.
ಅವರ ಆಯ್ಕೆಯ ಹಾಡುಗಳು ರೋಮಾಂಚನ ತರಿಸುವಂತಿತ್ತು ಮತ್ತು ಮನಸ್ಸಿನಾಳ ಇಳಿದ್ದು ಕೇಳುಗನಿಗೆ ರಸಗಂಗೆಯಲ್ಲಿ ಮಿಂದೆದ್ದ ಅನುಭವ ತಂದಿತು. ಒಂದೊಂದು ಹಾಡುಗಳೂ ನಮ್ಮನ್ನು ಮಂತ್ರಮುಗ್ಧರನ್ನಾಗಿಸಿ ಸುಮ್ಮನೆ ಆಲಿಸುವಂತೆ ಮಾಡಿದ್ದೇ ಅಲ್ಲದೆ ದೇಶಪ್ರೇಮದ ಚಿಂತನೆ ಇನ್ನಷ್ಟು ಆವರಿಸುವಂತೆ ಮಾಡಿತುಕೂಡ. ಪೃಥ್ವಿ ಗೌಡ ಅವರ ಅದ್ಭುತವಾದ ಕಂಠಸಿರಿಯಿಂದ ಮೂಡಿಬಂದ ಹಾಡೆಲ್ಲವೂ ಮತ್ತೆ ಮತ್ತೆ ಆಲಿಸಬೇಕೆಂಬ ಭಾವ ಮೂಡಿಸುವಂತಿತ್ತು.

ಇದಕ್ಕೆ ತಕ್ಕನಾಗಿಯೇ ಅತಿ ಹೆಚ್ಚು ಅಲ್ಲದ ಅತಿ ಕಡಿಮೆಯೂ ಅಲ್ಲದ ಸೊಗಸಾದ ನಿರೂಪಣೆಯಂತೂ ಮತ್ತೊಂದು ವಿಶಿಷ್ಟ. ಮಕ್ಕಳಿಗೆ ತಾಯಿ ಮುದ್ದು ಮಾಡುತ್ತಲೇ ಮೌಲ್ಯದ ಪಾಠವನ್ನು ಕಲಿಸುವಂತೆ ವಿನಯ್ ಶಿವಮೊಗ್ಗ ಅವರು ಕಾರ್ಯಕ್ರಮದ ಔಚಿತ್ಯತೆ, ದೇಶದ ಹಿರಿಮೆ ಹಾಡಿನ ಕುರಿತಾಗಿ ಹೇಳುವುದೇ ಅಲ್ಲದೆ ಪರಿಸರ ಕಾಳಜಿಯೊಂದಿಗೆ ಮುಂದಿನ ತಲೆಮಾರಿಗೆ ನಾವು ದಾಟಿಸುವ ಮೌಲ್ಯಗಳ ಕುರಿತಾಗಿ ತಿಳಿಸಿದಂತೆ ಕಾರ್ಯಕ್ರಮದ ಶ್ರೇಷ್ಠತೆಯನ್ನು ಹೆಚ್ಚಿಸುವಂತಿತ್ತು. ಏಕೆಂದರೆ ಬರಿ ಹಾಡಿನ ರಸಾಸ್ವಾದದಲ್ಲಿಯೇ ಕಳೆಯುವಂತೆ ಮಾಡದೆ ಎಚ್ಚರಿಕೆಯನ್ನು ಸಹ ಮಾತಿನ ನಡು ನಡುವೆ ನೀಡಿ ಬಂದಿದ್ದವರಿಗೆ ಮೌಲ್ಯದ ಅರಿವು ಮತ್ತು ಪರಿಸರ, ಜಲ ಇತ್ಯಾದಿಗಳ ಸಂರಕ್ಷಣೆಗೆ ನಾವೇನು ಮಾಡಬಹುದೆಂಬುದನ್ನು ತಿಳಿಸಿಕೊಟ್ಟರು. ಹಾಗಾಗಿ ತಾಯಿ ಭಾರತಿಗೆ ಗೀತನಮನ ಯಶಸ್ವಿಯಾಯಿತು. ಆಯ್ಕೆ ಮಾಡಿಕೊಂಡಿದ್ದ ಪ್ರತಿಯೊಂದು ಹಾಡೂ ಅಷ್ಟೇ ಮಧುರವಾಗಿತ್ತಲ್ಲದೆ ನಾನು ಇರಲಿ ಇಲ್ಲದಿರಲಿ ನನ್ನ ಭಾರತ ಬೆಳಗುತಿರಲಿ… ಎನ್ನುವುದನ್ನು ಸಾಕಾರಗೊಳಿಸುವಂತಿತ್ತು. ಹಾಗಾಗಿ ವಿನಯ್ ಶಿವಮೊಗ್ಗ ಹಾಗೂ ಪೃಥ್ವಿ ಅವರು ನಡೆಸಿಕೊಟ್ಟ ಗೀತ ಮನ ಸಾರ್ಥಕವಾಯಿತು. ಇದೊಂದು ನಿಜಕ್ಕೂ ಶಕ್ತಿಯುತ ಸಭಾ ಕಾರ್ಯಕ್ರಮವೇ ಆಯಿತು.

ನಂತರ ಗುರುವಿಗೆ ನಮನ ಎಂದು ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀಮತಿ ನಿರ್ಮಲಾ ನಾಯಕ್, ಸಂಸ್ಕೃತದ ಕಾರ್ಯ ಮಾಡುತ್ತಿರುವ ಶ್ರೀಮತಿ ಮನು ಚೌಹಾಣ್, ದೇಶ ಕಾಯ್ದ ಯೋಧ ಅದರಲ್ಲೂ ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ ಶ್ರೀ ಸುಧೀರ್ ಅವರಿಗೆ, ನಂತರ ಅಧ್ಯಾತ್ಮ ಸಾಧನೆ ಮಾಡಿ ಭಜನಾ ಪರಿಷತ್ ನ ಕಾರ್ಯದರ್ಶಿಗಳಾದ ಶ್ರೀ ಶಬರೀಶ್ ಕಣ್ಣನ್ ಇವರುಗಳಿಗೆ ಮಾಡಿದ ಸನ್ಮಾನವು ಯೋಗ್ಯವಾಗಿಯೇ ಇತ್ತು.

ಈ ಎಲ್ಲವನ್ನು ಮಾಡಿ ಸಾರ್ಥಕತೆ ಪಡೆದ ಶ್ರೀ ಚಂದ್ರಶೇಖರ್ ಬಾಯರ್ ದಂಪತಿಗಳಿಗೆ ಶತಕೋಟಿ ಪ್ರಣಾಮಗಳು. ಇಂತಹ ದಂಪತಿಗಳ ಸಂಖ್ಯೆ ಇನ್ನು ಬೆಳೆಯುವಂತಾಗಲಿ ಎಂದು ಆಶಿಸುತ್ತಾ ಕಾರ್ಯಕ್ರಮಕ್ಕೆ ಬರಲಾಗದವರಿಗೆ ನೋಡಬೇಕೆಂಬ ಆಸೆ ಉಳ್ಳವರಿಗೆ ಶಿವಮೊಗ್ಗದ ಯುಟ್ಯೂಬ್ ಚಾನೆಲ್ ಆದ ಸಮುದ್ಯತ ಭಾರತದ https://youtu.be/7f5WXZaJsYo?si=582NKdpO-2HgNjJm ಈ ಲಿಂಕ್ ನಲ್ಲಿ ಸದಾ ಲಭ್ಯವಿದೆ. ಇದನ್ನು ನೋಡಿ ನಮ್ಮದೇಶ ನಮ್ಮ ಹೆಮ್ಮೆ ಎಂಬಂತೆ ಬದುಕ ನಡೆಸೋಣ ಅಲ್ಲವೆ!!!!

ಡಾ. ಮೈತ್ರೇಯಿ ಆದಿತ್ಯಪ್ರಸಾದ್
ಉಪನ್ಯಾಸಕರು
ಪೇಸ್ ಕಾಲೇಜು

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shanthala Spherocast Private Limited ವಿದ್ಯಾರ್ಥಿಗಳು ಉತ್ತಮ ಯೋಚನೆಯೊಂದಿಗೆತಮ್ಮ ಜೀವನ ರೂಪಿಸಿಕೊಳ್ಳಬೇಕು- ಟಿ.ಎಸ್.ಹೂವಯ್ಯ

Shanthala Spherocast Private Limited ಶಿವಮೊಗ್ಗದ ಹೆಸರಾಂತ ಸಂಸ್ಥೆಯಾದ ಶಾಂತಲಾ ಸ್ಟೆರೋಕ್ಯಾಸ್ಟ್...

State Central Library ಕೇಂದ್ರ ಗ್ರಂಥಾಲಯಕ್ಕೆ ಪುಸ್ತಕ ಆಯ್ಕೆ ಪ್ರಕ್ರಿಯೆಗೆ ಅರ್ಜಿ‌ಆಹ್ವಾನ

State Central Library 2024ನೇ ವರ್ಷದಲ್ಲಿ ಪ್ರಥಮ ಮುದ್ರಣಗೊಂಡು ಪ್ರಕಟವಾಗಿರುವ ಸಾಹಿತ್ಯ,...

Karnataka Congress ರಾಜ್ಯ ವಿಧಾನಸಭಾ ಉಪಚುನಾವಣೆ ಫಲಿತಾಂಶ

Karnataka Congress ರಾಜ್ಯದಲ್ಲಿ ನಡೆದ ವಿಧಾನಸಭಾ ಉಪಚುನಾವಣೆಯಲ್ಲಿ ಸಂಡೂರು ಕ್ಷೇತ್ರದ ಕಾಂಗ್ರೆಸ್...