Gajunuru News 1930 ರ ಡೆಸೆಂಬರ್ 19 ರಂದು ವೀರಶೈವ ಸಮಾಜದಲ್ಲಿ ಜನಿಸಿದ ಶ್ರೀ ಎ.ಆರ್.ಮಲ್ಲೇಶಪ್ಪ ಗಾಜನೂರು, ಇವರು ಸಾರ್ಥಕ ಜೀವನ ನಡೆಸಿ 2024 ರ ಸೆಪ್ಟೆಂಬರ್ 05 ರ ಬೆಳಗ್ಗೆ ನಿಧನರಾದರು.
ಇವರು ಮೂಲತಃ ಕೃಷಿ ಕುಟುಂಬದವರಾಗಿದ್ದು, ಕೃಷಿಯಲ್ಲೇ ತಮ್ಮನ್ನು ತೊಡಗಿಸಿಕೊಂಡು ಪ್ರಗತಿ ಪರ ಕೃಷಿಕರೆಂದು ಸಮಾಜದಲ್ಲಿ ಗುರುತಿಸಿಕೊಂಡಿದ್ದರು. 80 ರ ದಶಕದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದಲ್ಲಿ ಸಕ್ರಿಯರಾಗಿದ್ದು, ಶ್ರೀಯುತ ಎನ್.ಡಿ.ಸುಂದರೇಶ್ ಹಾಗೂ ಇತರೆ ರೈತ ಮುಖಂಡರ ಒಡನಾಡಿಯಾಗಿದ್ದು, 1982 ರಲ್ಲಿ ರೈತ ಸಂಘದ ಜೈಲ್ ಭರೋ ರಸ್ತೆ ತಡೆ ಚಳುವಳಿಯಲ್ಲಿ ಮೊದಲು ಗಾಜನೂರಿನಿಂದ ಇವರ ನಾಯಕತ್ವದಲ್ಲಿ ನಡೆದು ಸುಮಾರು 20 ದಿನ ಬಳ್ಳಾರಿ ಜೈಲ್ ವಾಸ ಅನುಭವಿಸಿದ್ದರು.
Gajunuru News ಗಾಜನೂರು ವ್ಯವಸಾಯ ಸಹಕಾರಿ ಸಂಘದ ಗೌರವ ಕಾರ್ಯದರ್ಶಿಯಾಗಿ ಹಲವಾರು ವರ್ಷ ಸೇವೆ ಸಲ್ಲಿಸಿದ್ದಾರೆ. ಶಿವಮೊಗ್ಗ ಎ.ಪಿ.ಎಂ.ಸಿ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು. ಕೃಷಿ ಕ್ಷೇತ್ರದಲ್ಲಿ ಇವರ ಸಾಧನೆಗಾಗಿ ಹಲವಾರು ಸಂಘ ಸಂಸ್ಥೆಗಳಿಂದ ಪ್ರಶಸ್ತಿ ಪುರಸ್ಕøತರಾಗಿದ್ದರು.
ಮೃತರು ಧರ್ಮಪತ್ನಿ ಗೌರಮ್ಮ, ಗಂಡು ಮಕ್ಕಳಾದ ಉದಯಕುಮಾರ್.ಎ.ಎಂ, ಮಹೇಶ್.ಎ.ಎಂ, ಲಿಂಗರಾಜ್.ಎ.ಎಂ, ಗಣೇಶ್ ಎಂ ಅಂಗಡಿ, ಹೆಣ್ಣು ಮಕ್ಕಳಾದ ಪಾರ್ವತಿ ಓಂಕಾರ್, ಶಾರದಾ ಶಂಕರ್, ಮೊಮ್ಮಕ್ಕಳು ಮತ್ತು ಕುಟುಂಬ ವರ್ಗ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.