Shivamogga Forest Department ಶಿವಮೊಗ್ಗ ತಾಲ್ಲೂಕಿನ ಹೊಳಲೂರು ಹೋಬಳಿಯ ಬಿಕ್ಕೋನಹಳ್ಳಿ ಗ್ರಾಮದ ಸರ್ವೇ ನಂ 09 ರ ಕುಂಚೇನಹಳ್ಳಿ ಮೀಸಲು ಅರಣ್ಯ ಪ್ರದೇಶದಲ್ಲಿ ಅದೇ ಗ್ರಾಮದ ಚಂದ್ರಪ್ಪ, 50 ವರ್ಷ ಇವರು 01 ಎಕರೆ 20 ಗುಂಟೆ ಜಮೀನನ್ನು ಒತ್ತುವರಿ ಮಾಡಿಕೊಂಡಿರುವುದು ಸಾಬೀತಾದ ಕಾರಣ ಆರೋಪಿಗೆ 01 ವರ್ಷ ಸಾದಾ ಶಿಕ್ಷೆ ಮತ್ತು ರೂ.10 ಸಾವಿರ ದಂಡ ವಿಧಿಸಿ ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ ಆದೇಶಿಸಿದೆ.
ದೂರುದಾರರಾದ ಉಪ ವಲಯ ಅರಣ್ಯಾಧಿಕಾರಿ, ಗೆಜ್ಜೇನಹಳ್ಳಿ ಶಾಖೆ, ಶಂಕರ ವಲಯ, ಶಿವಮೊಗ್ಗ ಇವರು ದೂರು ನೀಡಿದ ಅನ್ವಯ Shivamogga Forest Department ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯವು ಈ ಪ್ರಕರಣವನ್ನು ಎಲ್‌ಜಿಸಿ(ಸಿ) ಸಂಖ್ಯೆ 1726/2019 ಎಂದು ದಾಖಲಿಸಿಕೊಂಡು ಸಂಪೂರ್ಣ ಸಾಕ್ಷö್ಯ ವಿಚಾರಣೆಯನ್ನು ನಡೆಸಿದ ನಂತರ ಆರೋಪಿಯು ಅರಣ್ಯ ಜಮೀನನ್ನು ಭೂ ಕಬಳಿಕೆ ಮಾಡಿರುವುದು ಸಾಬೀತಾದ ಕಾರಣ ಆರೋಪಿಗೆ 01 ವರ್ಷ ಸಾದಾ ಶಿಕ್ಷೆ ಮತ್ತು ರೂ.10,000/- ದಂಡವನ್ನು ವಿಧಿಸಿ, ದಂಡ ಪಾವತಿಸಲು ತಪ್ಪಿದಲ್ಲಿ 03 ತಿಂಗಳ ಸಾದಾ ಶಿಕ್ಷೆಯನ್ನು 02ನೇ ವಿಶೇಷ ನ್ಯಾಯಾಲಯದ ನ್ಯಾಯಿಕ ಸದಸ್ಯರಾದ ಪಾಟೀಲ ನಾಗಲಿಂಗನಗೌಡ ಮತ್ತು ಕಂದಾಯ ಸದಸ್ಯರಾದ ಕೆ.ಹೆಚ್.ಅಶ್ವತ್ಥ ನಾರಾಯಣಗೌಡ ಇವರು ಇದ್ದ ಪೀಠವು ದಿ: 11-07-2024 ರಂದು ತೀರ್ಪು ನೀಡಿರುತ್ತದೆ.
ಆರೋಪಿತರು ಒತ್ತುವರಿ ಮಾಡಿಕೊಂಡ ಅರಣ್ಯ ಜಮೀನನ್ನು ಕೂಡಲೇ ತೆರವುಗೊಳಿಸುವಂತೆ ಆದೇಶಿಸಿ, 60 ದಿನಗಳ ಒಳಗಾಗಿ ನ್ಯಾಯಾಲಯಕ್ಕೆ ವರದಿ ಸಲ್ಲಿಸುವಂತೆ ಉಪ ವಲಯ ಅರಣ್ಯಾಧಿಕಾರಿ, ಗೆಜ್ಜೇನಹಳ್ಳಿ, ಶಾಖೆ, ಶಂಕರ ವಲಯ ಇವರಿಗೆ ನಿರ್ದೇಶಿಸಿ ತೀರ್ಪನ್ನು ನೀಡಿರುತ್ತದೆ.
Shivamogga Forest Department ಹೊಳಲೂರು ಹೋಬಳಿ ಬಿಕ್ಕೋನಹಳ್ಳಿ ಮೀಸಲು ಅರಣ್ಯ ಒತ್ತುವರಿ ಅಪರಾಧಕ್ಕೆ ಶಿಕ್ಷೆ ಪ್ರಕಟ
Date: