Phone Hacking News ನಗರದ ಮಹಿಳೆಯೊಬ್ಬರಿಗೆ ಮುಂಬೈ ಪೊಲೀಸರೆಂದು ನಂಬಿಸಿ ೭೯,೧೩೯ ರೂ. ವಂಚಿಸಿರುವ ಘಟನೆ ನಡೆದಿದೆ.
ಶಿವಮೊಗ್ಗದ ಮಹಿಳೆಗೆ ಅಪರಿಚಿತನೊಬ್ಬ ಮೊಬೈಲ್ ಗೆ ಕರೆಮಾಡಿ, ಅಪರಿಚಿತ ವ್ಯಕ್ತಿಯು ನಿಮಗೆ ಕೋರಿಯರ್ ಬಂದಿದೆ. ೫ ಕೆಜಿ ಬಟ್ಟೆ, ೪ ಪೆನ್ ಡ್ರೈವ್ ಮತ್ತು ಎಟಿಎಂ ಬಂದಿದೆ ಎಂದು ತಿಳಿಸಿದ್ದಾನೆ. ನಮಗೆ ಯಾವ ಕೋರಿಯರ್ ಮಾಡಿಲ್ಲ ಎಂದು ಮಹಿಳೆ ಉತ್ತರಿಸಿದ್ದಾರೆ.
ಅದು ಕಾನೂನು ಬಾಹಿರ ಕೋರಿಯರ್ ಆಗಿದೆ. ನೀವು ಪೊಲೀಸ್ ಠಾಣೆಗೆ ಭೇಟಿ ಮಾಡಬೇಕು. ಎಂದು ಆತನೇ ಪೊಲೀಸರಿಗೆ ಕರೆ ಮಾಡುವುದಾಗಿ ಹೇಳಿ ಮುಂಬೈ ಪೊಲೀಸ್ ಎನ್ ಸಿಬಿಗೆ ಕರೆ ಮಾಡುವುದಾಗಿ ಹೇಳಿ ಯಾವನೋ ಪೊಲೀಸರೆಂದು ಮಾತನಾಡಿಸಿದ್ದಾನೆ. ಪ್ರದೀಪ್ ಪೊಲೀಸ್ ಎಂಬ ಐಡಿ ಕಾರ್ಡ್ ಕಳುಹಿಸಿ ವಿಡಿಯೋ ಕಾಲ್ ಮಾಡಿದ್ದಾನೆ
ಪೊಲೀಸ್ ಎಂದು ಹೇಳಿಕೊಂಡವ ನಿಮ್ಮ ಬ್ಯಾಂಕ್ ಅಕೌಂಟ್ ನಲ್ಲಿ ಕಾನೂನುಬಾಹಿರ ಚಟುವಟಿಕೆ ನಡೆದಿದೆ. ನಿಮಗೆ ಈತ ಗೊತ್ತ ಎಂದು ಯಾವನದೋ ಫೊಟೊ ತೋರಿಸಿದ್ದಾರೆ. ಆತ ಪರಿಚಯವಿಲ್ಲವೆಂದು ಮಹಿಳೆ ತಿಳಿಸಿದ್ದಾರೆ. ಈತನಿಂದಲೇ ಕಾನೂನು ಬಾಹಿರ ಚಟುವಟಿಕೆ ನಡೆದಿದೆ ಎಂದು ಮಹಿಳೆಗೆ ನಂಬಿಸಿ ಅಕೌಂಟ್ ಗೆ ೭೯,೧೩೨ ರೂ ಕಳುಹಿಸಿ ಎಂದು ಹೇಳಿ ಅಕೌಂಟ್ ಗೆ ಹಣಹಾಕಿಸಿಕೊಂಡಿದ್ದಾರೆ.
Phone Hacking News ಹಣ ಹಾಕಿದ ಮಹಿಳೆಗೆ ಅನುಮಾನ ಬಂದು ವಾಪಾಸ್ ಮೊಬೈಲ್ ಗೆ ಬಂದ ಅಪರಿಚಿತನ ನಂಬರ್ ಗೆ ಕರೆ ಮಾಡಿದಾಗ ಕರೆಹೋಗದೆ ಇದ್ದಕಾರಣ ಮಹಿಳೆ ತುಂಗಾ ನಗರ ಪೊಲೀಸ್‌ಗೆ ದೂರು ನೀಡಿದ್ದಾರೆ.
Phone Hacking News ಮಹಿಳೆಯರೇ ಮೊಬೈಲ್ ಕರೆಗೆ ಮೋಸಹೋಗಿ ವಂಚನೆಗೆ ಸಿಲುಕ ಬೇಡಿ
Date: