Madhu Bangarappa ರಾಜ್ಯದ ಸರಕಾರಿ ಪ್ರಾಥಮಿಕ ಶಾಲಾ ಪಿಎಸ್‌ಟಿ ನೂರಾರು ಶಿಕ್ಷಕರು ತಮಗಾಗುತ್ತಿರುವ ಅನ್ಯಾಯ ಸರಿಪಡಿಸುವಂತೆ ಕೋರಿ ಶಿವಮೊಗ್ಗದ ಸರ್ಕೀಟ್ ಹೌಸ್‌ನಲ್ಲಿ ಭಾನುವಾರ ಪ್ರಾಥಮಿಕ ಶಿಕ್ಷಣ ಹಾಗೂ ಜಿಲ್ಲಾ ಸಚಿವ ಮಧು ಬಂಗಾರಪ್ಪರಿಗೆ ಮನವಿ ಅರ್ಪಿಸಿದರು.
ರಾಜ್ಯ ಸರಕಾರವು ೨೦೧೬-೧೭ ರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಮೂಲ ವೃಂದವನ್ನು ಪಿಎಸ್‌ಟಿ ಮತ್ತು ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕ ಜಿಪಿಟಿ ಎಂಬ ಎರಡು ವೃಂದಗಳನ್ನು ಸೃಷ್ಟಿಸಿ ಅನ್ಯಾಯವೆಸಗಿದೆ. ಇದರಿಂದ ೨೦೧೬ ಕ್ಕೂ ಪೂರ್ವದಲ್ಲಿ ೧ ರಿಂದ ೭ ನೇ ತರಗತಿಗಳಿಗೆ ನೇಮಕವಾದ ಶಿಕ್ಷಕರಿಗೆ ಸೇವಾ ಹಿರಿತನಕ್ಕೆ ಧಕ್ಕೆಯಾಗಿದೆ. ವರ್ಗಾವಣೆಯಲ್ಲಿ ಸ್ಥಳ ಆಯ್ಕೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಪ್ರಾಥಮಿಕ ಶಾಲಾ ಶಿಕ್ಷಕರ ವೃಂದದಿಂದ ಮುಖ್ಯ ಶಿಕ್ಷಕ ವೃಂದಕ್ಕೆ ಬಡ್ತಿ ಹೊಂದಲು ಸಾಧ್ಯವಾಗುತ್ತಿಲ್ಲ. ಪ್ರಾಥಮಿಕ ಶಾಲಾ ಶಿಕ್ಷಕ ವೃಂದದಿಂದ ಪ್ರೌಢಶಾಲಾ ಸಹ ಶಿಕ್ಷಕ ವೃಂದಕ್ಕೆ ಬಡ್ತಿ ಹೊಂದಲು ಆಗುತ್ತಿಲ್ಲ.
Madhu Bangarappa ಆದ್ದರಿಂದ ಪ್ರಾಥಮಿಕ ಶಾಲಾ ಶಿಕ್ಷಕರ ೨೦೧೭ ರ ವೃಂದ ಮತ್ತು ನೇಮಕಾತಿ ಸಿ ಅಂಡ್ ಆರ್ ನಿಯಮಗಳನ್ನು ೨೦೧೬ ಕ್ಕೂ ಮುನ್ನ ೧ ರಿಂದ ೭ ನೇ ತರಗತಿಗೆ ನೇಮಕವಾದ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಪೂರ್ವಾನ್ವಯ ಮಾಡುವಂತೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಡಿ.ಬಿ ರುದ್ರಪ್ಪ ಮತ್ತು ಪ್ರಧಾನ ಕಾರ್ಯದರ್ಶಿ ವೈ.ಎನ್.ಶ್ರೀಧರಗೌಡ ನೇತೃತ್ವದಲ್ಲಿ ನೂರಾರು ಶಿಕ್ಷಕರು ಮನವಿ ಸಲ್ಲಿಸಿದರು. ಸಚಿವರು ಸಹಾ ಮನವಿ ಆಲಿಸಿ ಸೂಕ್ತ ಭರವಸೆ ನೀಡಿದರು
Madhu Bangarappa ಪಿಎಸ್ ಟಿ ಶಿಕ್ಷಕರಿಂದ ಸಚಿವ ಮಧುಬಂಗಾರಪ್ಪ ಅವರಿಗೆ ಮನವಿ ಅರ್ಪಣೆ
Date: