ಕೇರಳದ ಕೋಝಿಕ್ಕೋಡ್‌ನಲ್ಲಿ ನಿಪಾ ವೈರಸ್‌ಗೆ ಚಿಕಿತ್ಸೆ ಪಡೆಯುತ್ತಿದ್ದ 14 ವರ್ಷದ ಬಾಲಕ ಮೃತಪಟ್ಟಿದ್ದಾನೆ ಎಂದು ರಾಜ್ಯ ಆರೋಗ್ಯ ಸಚಿವ ವೀಣಾ ಜಾರ್ಜ್ ಹೇಳಿದ್ದಾರೆ.
ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆಯು ಬಾಲಕನ ಮಾದರಿಯನ್ನು ವಿಶ್ಲೇಷಿಸಿದ ನಂತರ ನಿಪಾ ಸೋಂಕನ್ನು ದೃಢಪಡಿಸಿದೆ.
Nipah virus ಭಾನುವಾರ ಬೆಳಿಗ್ಗೆ 10:50 ಕ್ಕೆ ಪಾಂಡಿಕ್ಕಾಡ್‌ನ ಬಾಲಕನಿಗೆ ತೀವ್ರ ಹೃದಯ ಸ್ತಂಭನ ಸಂಭವಿಸಿದೆ; ಆತನನ್ನು ಉಳಿಸಲು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ ಎಂದು ವೀಣಾ ಹೇಳಿದರು.
“ಆತ ವೆಂಟಿಲೇಟರ್ ಬೆಂಬಲದಲ್ಲಿದ್ದ; ಇಂದು ಬೆಳಿಗ್ಗೆ ಮೂತ್ರದ ಉತ್ಪಾದನೆಯು ಕಡಿಮೆಯಾಗಿದೆ. ಭಾರೀ ಹೃದಯ ಸ್ತಂಭನದ ನಂತರ, ಆತನನ್ನು ಉಳಿಸುವ ಪ್ರಯತ್ನಗಳು ವಿಫಲವಾದವು. ಅವಬು 11.30ಕ್ಕೆ ನಿಧನನಾಗಿದ್ದಾನೆ” ಎಂದು ಸಚಿವರು ಹೇಳಿದರು.
ಅಂತಾರಾಷ್ಟ್ರೀಯ ಶಿಷ್ಟಾಚಾರದ ಪ್ರಕಾರ ಅಂತ್ಯಕ್ರಿಯೆ ನಡೆಯಲಿದೆ. ಜಿಲ್ಲಾಧಿಕಾರಿಗಳು ಬಾಲಕನ ಪೋಷಕರು ಮತ್ತು ಕುಟುಂಬದೊಂದಿಗೆ ಚರ್ಚೆ ನಡೆಸಿದ ನಂತರವೇ ಅಂತ್ಯಕ್ರಿಯೆಯ ಕುರಿತು ಹೆಚ್ಚಿನ ವಿಷಯಗಳನ್ನು ನಿರ್ಧರಿಸಲಾಗುತ್ತದೆ” ಎಂದರು.