Hosanagara Police ಹೊಸನಗರ ತಾಲೂಕಿನಲ್ಲಿ ಮಳೆಗೆ ಓರ್ವ ಮಹಿಳೆ ಸಾವನ್ನಪ್ಪಿದ್ದಾರೆ.
ಬೈಸೆ ಗ್ರಾಮದಲ್ಲಿ ಈ ಘಟನೆ ಸಂಭವಿಸಿದ್ದು. ಮೃತಳನ್ನು ಚಿಕಳಿ ನಿವಾಸಿ ಶಶಿಕಲಾ (43) ಎಂದು ಗುರುತಿಸಲಾಗಿದೆ ಬೆಳಗ್ಗೆ ತಮ್ಮ ಗದ್ದೆ ಹೋಗುತ್ತಿದ್ದ ಮಹಿಳೆ ಹಳ್ಳಕ್ಕೆ ಅಡ್ಡಲಾಗಿ ಹಾಕಿದ್ದ ಕಾಲು ಸಂಕ ದಾಟುವಾಗ ಜಾರಿ ಹಳ್ಳಕ್ಕೆ ಬಿದ್ದಿದ್ದಾರೆ.
ಆ ಬಳಿಕ ನೀರಿನಲ್ಲಿ ಕೊಚ್ಚಿಹೋಗಿದ್ದಾರೆ. ಮಹಿಳೆ ಹಳ್ಳದಲ್ಲಿ ಬಿದ್ದು ಕೊಚ್ಚಿ ಹೋದ ಬಳಿಕ ಸ್ಥಳೀಯರು ಹುಡುಕಾಟ ನಡೆಸಿದ್ದಾರೆ. ಮಧ್ಯಾಹ್ನದ ಹೊತ್ತಿಗೆ ಮಹಿಳೆಯ ಶವ ಪತ್ತೆಯಾಗಿದೆ.
ನಗರ ಪೊಲೀಸ್ ಠಾಣೆ ಪೊಲೀಸರು ಮಹಜರ್ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಘಟನೆಯ ವಿವರ :
ಬೈಸೆ ಗ್ರಾಮದ ಬಳಿಯಲ್ಲಿ ಜಾಮಿಜೆಡ್ಡು ಗುಡ್ಡದ ಕಡೆಯಿಂದ ರಭಸವಾಗಿ ಮಳೆ ನೀರು ಹಳ್ಳದ ರೀತಿಯಲ್ಲಿ ಹರಿಯುತ್ತದೆ. ಅಕ್ಕಪಕ್ಕದ ರೈತರು ಈ ಹಳ್ಳಕ್ಕೆ ಅಡ್ಡಲಾಗಿ ಅಡಿಕೆ ದಬ್ಬೆ ಬಳಸಿ ಸಾರ ಅಥವಾ ಸಂಕ ಕಟ್ಟಿ ತಮ್ಮ ತಮ್ಮ ಹೊಲಕ್ಕೆ, ತೋಟಕ್ಕೆ ಹೋಗುತ್ತಾರೆ. ಅದೇ ರೀತಿ ಶಶಿಕಲಾ ಸಹ ಬೆಳಗ್ಗೆ ಒಂಭತ್ತು ಗಂಟೆಗೆ ಜಮೀನಿನ ಹತ್ತಿರ ಹೋಗಿ ಅಗೆ ಹಾಕಲು ಸಿದ್ಧತೆ ನೋಡಿಕೊಂಡು ಬರಲು ಹೊರಟಿದ್ದರು. ಆ ಬಳಿಕ ಮನೆಗೆ ಅವರು ವಾಪಾಸ್ ಮನೆಗೆ ಬಂದಿರಲಿಲ್ಲ.
Hosanagara Police ಹೀಗಾಗಿ ಮನೆಯವರು ಶಶಿಕಲಾರಿಗಾಗಿ ಹುಡುಕಾಟ ನಡೆಸಿದ್ದಾರೆ. ಕಾಲು ಸಂಕದಿಂದ ಹಳ್ಳದಲ್ಲಿ ಮುಂದೆ ಹುಡುಕುತ್ತಾ ಹೋದ ಮನೆಯವರಿಗೆ ಒಂದು ಕಿಲೋಮೀಟರ್ ದೂರದಲ್ಲಿ ಮೃತದೇಹ ಸಿಕ್ಕಿದೆ. ಗದ್ದೆಯ ಕಾಲು ಸೇತುವೆ ಹತ್ತಿರ ಹಳ್ಳದಲ್ಲಿ ಶಶಿಕಲಾ ರವರ ಮೃತದೇಹ ಮರಕ್ಕೆ ಸಿಕ್ಕಿ ಹಾಕಿಕೊಂಡಿತ್ತು.
ಇದನ್ನು ನೋಡಿದ ಮನೆಯವರು ಮೃತದೇಹವನ್ನು ಮೇಲಕ್ಕೆತ್ತಿದ್ದಾರೆ.