Govt First Grade College ನಮ್ಮ ವಿದ್ಯಾವಂತರಲ್ಲಿ ಮೌಢ್ಯ ಜಾಸ್ತಿಯಾಗಿದೆ. ನಾವು ಆರೋಗ್ಯವಾಗಿದ್ದರೆ ದೇಶವೂ ಆರೋಗ್ಯ ವಾಗಿರುತ್ತದೆ. ಅಂತಹ ಆರೋಗ್ಯಕ್ಕೆ ಕುವೆಂಪು ಹೇಳಿದ ನಿತ್ಯವೂ ಅವತರಿಪ ಸತ್ಯಾವತಾರವನ್ನು ಕಾಣಬೇಕು. ನಾವು ಮೌಢ್ಯದ ಅದೀನದಲ್ಲಿದ್ದೇವೆ. ಸತ್ಯವನ್ನು ನಮಗೆ ಯಾರೂ ಹೇಳುತ್ತಿಲ್ಲ. ವೈಚಾರಿಕತೆ ಮೌಢ್ಯದ ನಿವಾರಣೆಗೆ ರೂಢಿಸಿಕೊಳ್ಳುವ ಅಗತ್ಯವನ್ನು ಸಾಹಿತಿಗಳು, ವಿಶ್ರಾಂತ ಪ್ರಿನ್ಸಿಪಾಲರಾದ ಡಾ. ಎಚ್. ಟಿ. ಕೃಷ್ಣಮೂರ್ತಿ ವಿವರಿಸಿದರು.
ಹೊಳೆಹೊನ್ನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಎನ್. ಎಸ್.ಎಸ್. ವಾರ್ಷಿಕ ಶಿಬಿರವು ಅಗಸನಹಳ್ಳಿಯಲ್ಲಿ ನಡೆಯುತಿದ್ದು, ಈ ಶಿಬಿರದಲ್ಲಿ ಏರ್ಪಡಿಸಿದ್ದ ದತ್ತಿ ನಿಧಿ ಕಾರ್ಯಕ್ರಮದಲ್ಲಿ ಕುವೆಂಪು ಸಾಹಿತ್ಯದಲ್ಲಿನ ವೈಚಾರಿಕ ಪ್ರಜ್ಞೆ ವಿಚಾರವಾಗಿ ಮಾತನಾಡಿದರು..
ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಅಧ್ಯಕ್ಷರಾದ ಡಿ. ಮಂಜುನಾಥ ಮಾತನಾಡಿ, ವಿದ್ಯಾರ್ಥಿಗಳು ಆತ್ಮ ವಿಶ್ವಾಸದಿಂದ ಬದುಕನ್ನು ನಿರ್ವಹಿಸುವುದು ಕಲಿಯಬೇಕು. ಈ ಶಿಬಿರದ ಸದುಪಯೋಗ ವಾಗಲಿ ಎಂದು ಹಾರೈಸಿದರು.
ಹೊಳೆಹೊನ್ನೂರು ಕಸಾಪ ಹೋಬಳಿ ಅಧ್ಯಕ್ಷರಾದ ಹ. ಬ. ಸಿದ್ದಪ್ಪ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿಗಳು ಗಾಂಜಾ, ಡ್ರಗ್ಸ್, ನಶೆಗೆ ಮಾರುಹೋಗದೆ ಉತ್ತಮ ವಿಚಾರ, ಜೀವನ ಪದ್ದತಿ ಅಳವಡಿಸಿಕೊಳ್ಳಲು ಕುವೆಂಪು ಅವರ ಸಾಹಿತ್ಯ ಓದಿ ಎಂದರು.
Govt First Grade College ತಾಲ್ಲೂಕು ಕಸಾಪ ಅಧ್ಯಕ್ಷರಾದ ಕೋಡ್ಲು ಯಜ್ಞಯ್ಯ, ರೈತ ಮುಖಂಡರಾದ ಕೃಷ್ಣಮೂರ್ತಿ, ಕಸಾಪ ಉಪಾಧ್ಯಕ್ಷರಾದ ಶ್ರೀನಿವಾಸ್, ಕಾಲೇಜು ಉಪನ್ಯಾಸಕರಾದ ಚಂದ್ರಪ್ಪ, ಸುರೇಶ್, ಸೌಮ್ಯ, ಗಾಯತ್ರಿ, ಅಂಬಿಕಾ, ತಾ. ಕಾರ್ಯದರ್ಶಿ ಎಚ್. ತಿಮ್ಮಪ್ಪ, ಹೋಬಳಿ ಕಾರ್ಯದರ್ಶಿ ಚಂದ್ರಪ್ಪ ಉಪಸ್ಥಿತರಿದ್ದರು.
ಕು. ಚಂದನ ಮತ್ತು ಸಂಗಡಿಗರು ಪ್ರಾರ್ಥನೆ ಹಾಡಿದರು. ಕು. ಮಾನಸ ಸ್ವಾಗತಿಸಿದರು, ಕು. ಚಂದನ ನಿರೂಪಿಸಿದರು. ಪ್ರಿಯಾ ವಂದಿಸಿದರು. ರಾ. ಸೇ. ಯೋ. ಕಾರ್ಯಕ್ರಮಾಧಿಕಾರಿಗಳಾದ ಎಚ್. ರುದ್ರಮುನಿ, ಡಾ. ರಾಜುನಾಯ್ಕ ಎಸ್. ನಿರ್ವಹಿಸಿದರು.