ಶಿವಮೊಗ್ಗ: ಲೋಕಸಭಾ ಚುನಾವಣೆಯ ಮುನ್ನ ಅಂದರೆ 02.02.2024 ರಂದು ಮೋದಿಯವರ ಸರ್ಕಾರ ಪ್ರಾರಂಭಿಸಿದ್ದ ಶ್ರೀಸಾಮಾನ್ಯನಿಗೆ ಅಗ್ಗದ ದರದಲ್ಲಿ ಉತ್ತಮ ಗುಣಮಟ್ಟದ ಪಡಿತರ ವಿತರಿಸುವ ಭಾರತ್ ರೈಸ್ ಯೋಜನೆಯನ್ನು ಸ್ಥಗಿತಗೊಳಿಸಿರುವುದು ಅತ್ಯಂತ ಖಂಡನೀಯ ಸಂಗತಿ ಎಂದು ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್ ಹೇಳಿದೆ.
ಶುಕ್ರವಾರ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,
ಎನ್.ಡಿ.ಎ ಅಂಗಪಕ್ಷಗಳ ಮುಖಂಡರಾದ ಆಂಧ್ರಪ್ರದೇಶದ ತೆಲುಗುದೇಶಂ ಪಕ್ಷದ ಚಂದ್ರಬಾಬು ನಾಯ್ಡು ಮತ್ತು ಬಿಹಾರದ ಜೆ.ಡಿ.ಯು ಪಕ್ಷದ ಮುಖಂಡರಾದ ನಿತೀಶ್‌ಕುಮಾರ್ , ಮತ್ತು ಜೆಡಿಎಸ್ ಪಕ್ಷದ ಕುಮಾರಸ್ವಾಮಿ ಮುಂತಾದವರು ಈ ಜನಪ್ರಿಯ ಭಾರತ್ ರೈಸ್ ಯೋಜನೆಯನ್ನು ಕೂಡಲೇ ಮುಂದುವರೆಸಲು ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಮೇಲೆ ಒತ್ತಡ ತರಲು ಆಗ್ರಹಿಸಿದರು.
ನ್ಯಾಷನಲ್ ಕೋ ಆಪರೇಟಿವ್
ಮಾರ್ಕೆಟಿಂಗ್ ಫೆಡರೇಷನ್ ಆಫ್ ಇಂಡಿಯಾ ಅಮಿಟೆಡ್ (ನಾಫೆಡ್) ರಿಯಾಯಿತಿ ದರದಲ್ಲಿ ಭಾರತ್ ಅಕ್ಕಿ, ಬೇಳೆ, ಗೋದಿ ಹಿಟ್ಟಿನ ಮಾರಾಟದ ಜವಾಬ್ದಾರಿ ಹೊತ್ತಿತ್ತು. ಈ ಜನಪ್ರಿಯ ಯೋಜನೆ ಅಡಿಯಲ್ಲಿ 29/- ರೂ.ಗೆ 1 ಕೆ.ಜಿ. ಅಕ್ಕಿಯನ್ನು, 27.50 ರೂ.ಗಳಿಗೆ 1 ಕೆಜಿ ಗೋಧಿ ಹಿಟ್ಟನ್ನು ಹಾಗೂ 60/ವಿತರಿಸಲಾಗುತ್ತಿತ್ತು. 1 ಕೆ.ಜಿ. ಕಡ್ಲೆಬೇಳೆಯನ್ನು ರೂ.ಗಳಿಗೆ ಬಿ.ಪಿ.ಎಲ್, ಎ.ಪಿ.ಎಲ್ ಇಲ್ಲದ ಶ್ರೀಸಾಮಾನ್ಯರಿಗೆ ಈ ಅಗ್ಗದ ಪಡಿತರ ಯೋಜನೆಗೆ ಕೇಂದ್ರ ಸರ್ಕಾರ ಸಂಚಕಾರ ತಂದಿರುವುದು ಅತ್ಯಂತ ಬೇಸರದ ಸಂಗತಿ ಎಂದರು.
ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜು ಸಮೀಪದ ನಾಫೆಡ್ ಕಛೇರಿ ಆವರಣ, ರಿಲಯನ್ಸ್ ಮಾರ್ಟ್, ಜಿಯೋ ಮಾರ್ಟ್ ಸೇರಿದಂತೆ, ಕೆಲವು ಮಾಲ್‌ಗಳು ಅಲ್ಲದೇ ಮೊಬೈಲ್ ವ್ಯಾನ್‌ಗಳ ಮೂಲಕ ದೇಶಾದ್ಯಂತ ಬಾರತ್ ಅಕ್ಕಿಯನ್ನು ಮಾರಾಟ ಮಾಡಲಾಗುತ್ತಿತ್ತು. ಪ್ರಾರಂಭದಲ್ಲಿ ರಾಜ್ಯದಲ್ಲಿ ಬಿ.ಪಿ.ಎಲ್. ಕಾರ್ಡ್ ಇರುವವರಿಗೆ ಉಚಿತವಾಗಿ 5 ಕೆ.ಜಿ. ಅಕ್ಕಿಯನ್ನು ಅಲ್ಲದೇ ಎ.ಪಿ.ಎಲ್ ಪಡಿತರ ಚೀಟಿ ಹೊಂದಿದವರಿಗೆ ಪ್ರತಿ ಕೆ.ಜಿ.ಗೆ ರೂ.15/- ರಂತೆ 10 ಕೆ.ಜಿ. ಅಕ್ಕಿ ವಿತರಿಸಲಾಗುತ್ತಿತ್ತು. ಈ ಎರಡೂ ಬಗೆಯ ಪಡಿತರ ಚೀಟಿ ಇಲ್ಲದ ಲಕ್ಷಾಂತರ ಕುಟುಂಬಗಳು ರಾಜ್ಯದಲ್ಲದೆ, ಬಡತನದಿಂದ ಬಳಲುವವರು, ನಾನಾ ಕಾರಣಗಳಿಂದ ವಲಸೆ ಬಂದವರು, ಪಡಿತರ ಚೀಟಿ ಹೊಂದಿಲ್ಲದವರು ರೂ.29/- ಗಳಿಗೆ ಭಾರತ್ ಅಕ್ಕಿ ದೊರೆಯುತ್ತದೆ ಎಂದು ಖುಷಿ ಪಟ್ಟಿದ್ದರು ಎಂದರು.
Shivamogga News ಭಾರತ್ ಅಕ್ಕಿ ಬಂದ್: ಖಂಡನೀಯ
Date: