Vidhusekhara Bharathi Swamiji ಶೃಂಗೇರಿ ಶಾರದ ಪೀಠಾಧೀಶರರಾದ ವಿದುಶೇಖರ್ ಭಾರತಿ ಮಹಾಸ್ವಾಮಿಗಳು ಜೂನ್ 24ರಿಂದ 26ರವರೆಗೆ ಶಿವಮೊಗ್ಗದಲ್ಲಿ ವಿವಿಧ ದಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವರು.
ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಶಿವಮೊಗ್ಗ ಶೃಂಗೇರಿ ಶಂಕರ ಮಠದ ಧರ್ಮಾಧಿಕಾರಿ ಡಾ|| ಪಿ. ನಾರಾಯಣ, ೨೪ ರ ಸಂಜೆ ೬ ಗಂಟೆಗೆ ಕೋಟೆ ಭೀಮೇಶ್ವರ ದೇವಸ್ಥಾನಕ್ಕೆ ಸ್ವಾಮೀಜಿ ಆಗಮಿಸುವರು.
ಅಲ್ಲಿಂದ ಶೋಭಾಯಾತ್ರ್ರೆ ಮೂಲಕ ಶಂಕರಮಠಕ್ಕೆ ಆಗಮಿಸುವರು. ಪೂರ್ಣಕುಂಭ ಸ್ವಾಗತ, ಪಾದಪೂಜೆಯನ್ನು ನಡೆಸಲಾಗುವುದು. 8 ಗಂಟೆಗೆ ಚಂದ್ರಮೌಳೇಶ್ವರನ ಪೂಜೆಯಲ್ಲಿ ಸ್ವಾಮೀಜಿ ಪಾಲ್ಗೊಳ್ಳುವರು ಎಂದರು.
25ರಂದು ನಾರಿಕೇಳ ಹೋಮ ಬೆಳಗ್ಗೆ ೬ರಿಂದ ಆರಂಭವಾಗಲಿದೆ. 6 ಗಂಟೆಗೆ ಪೂರ್ಣಾಹುತಿ ನಡೆಯಲಿದೆ. ಸಂಜೆ 5ಕ್ಕೆ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಸ್ತೋತ್ರಗಳ ಮಹಾಸಮರ್ಪಣೆ ನಡೆಯಲಿದೆ. ನಂತರ ಗುರುವಂದನೆ , ಸ್ವಾಮೀಜಿಯಿಂದ ಆಶೀರ್ವಚನ ನಡೆಯಲಿದೆ ಎಂದರು.
Vidhusekhara Bharathi Swamiji 26ರಂದು ಬೆಳಗ್ಗೆ 9ಕ್ಕೆ ಶಂಕರ ಮಠದ ಪಕ್ಕದಲ್ಲಿರುವ ಅಭಿನವ ವಿದ್ಯಾತೀರ್ಥ ಮಂಟಪದ ಪುನನಿರ್ಮಾಣಕ್ಕೆ ಶಿಲಾನ್ಯಾಸ ನಡೆಯಲಿದೆ. ಇದು ಕೇವಲ ಧಾರ್ಮಿಕ ಮಂದಿರವಾಗಿರಲಿದೆ. ಯಜ್ಞ,, ಯಾಗಾದಿ, ಧಾರ್ಮಿಕ ಪಠಣ ಮೊದಲಾದವುಗಳಿಗೆ ಬಳಕೆಯಾಗಲಿದೆ. ಸುಮಾರು 3 ಕೋಟಿ ರೂ. ವೆಚ್ಚದಲ್ಲಿ ಇದು ಪುನರ್ನಿರ್ಮಾಣವಾಲಿದೆ.
11ರಿಂದ ಗಾಯತ್ರಿ ಕಲ್ಯಾಣ ಮಂದಿರದಲ್ಲಿ ಸ್ವಾಮೀಜಿಯಿಂದ ಭಕ್ತರಿಗೆ ಮಂತ್ರಾಕ್ಷತೆ ವಿತರನೆ ಇರಲಿದೆ. ಮದ್ಯಾಹ್ನ ಪ್ರಸಾದ ವಿನಿಯೋಗ ನಡೆಯಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಬ್ರಾಹ್ಮಣ ಸಮಾಜದ ಅಧ್ಯಕ್ಷ ನಟರಾಜ ಭಾಗವತ್, ಮುಖಂಡರಾದ ಶಿವಶಂಕರ್, ಚಂದ್ರಶೇಖರ್, ಕೇಶವಮೂರ್ತಿ, ಲಕ್ಷ್ಮೀ ಶ್ರೀಧರ್, ಎಚ್ ಎಸ್ ರವೀಂದ್ರನಾಥ, ಚೇತನ್, ಮಂಜುನಾಥ ಮೊದಲಾದವರಿದ್ದರು.