Tungabhadra Dam ಶಿವಮೊಗ್ಗದ ಭದ್ರಾ ಹಾಗೂ ತುಂಗಾ ಜಲಾಶಯ ಅಭಿವೃದ್ಧಿ, ಭದ್ರಾವತಿ ವ್ಯಾಪ್ತಿ ಕೆರೆಗಳ ಅಭಿವೃದ್ಧಿಗೆ ಸರ್ಕಾರ ಒತ್ತು ನೀಡಬೇಕು ಎಂದು ಜನ್ನಾಪುರದ ಡಿ.ದೇವರಾಜ ಅರಸು ಜನಸ್ಪಂದನ ಸೇವಾ ಟ್ರಸ್ಟ್ ಹಾಗೂ ಸುವರ್ಣ ಮಹಿಳಾ ವೇದಿಕೆಯು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ, ಜಲಾಶಯ ಹಾಗೂ ಕೆರೆಗಳ ಅಭಿವೃದ್ಧಿ ಕರಿತ ಸಭೆ ಕರೆಯಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಮನವಿಯಲ್ಲಿ ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು, ಬಳ್ಳಾರಿ ಜಿಲ್ಲೆ ಸೇರಿದಂತೆ ಇತರೆ ಜಿಲ್ಲೆಗಳ ರೈತರ ಗದ್ದೆ ತೋಟಗಳಿಗೆ ನಗರ ಹಾಗೂ ಗ್ರಾಮಾಂತರ ಪ್ರದೇಶದ ಕುಡಿಯುವ ನೀರಿನ ಯೋಜನೆಗಳಿಗೆ ಭದ್ರಾ ಜಲಾಶಯದಿಂದ ಸಮರ್ಪಕವಾಗಿ ಯಾವುದೇ ಅಡೆತಡೆ ಇಲ್ಲದೇ ಸಮೃದ್ಧಿಯಾಗಿ ನಿರಂತರವಾಗಿ ನೀರನ್ನು ಹರಿಸಲು ಹಾಗೂ ಕೆರೆಗಳ ಅಭಿವೃದ್ಧಿಗೆ ಸಂಬಂಧಪಟ್ಟಂತೆ ಪ್ರಮುಖ ಬೇಡಿಕೆಗಳ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಿ ಈ ಸಂಬಂಧ ಅಧಿಕಾರಿವರ್ಗದವರ ಒಂದು ಸಭೆಯನ್ನು ಭದ್ರಾಜಲಾಶಯ ಸಮೀಪವಿರುವ ಅತಿಥಿಗೃಹದಲ್ಲಿ ಕರೆಯಬೇಕೆಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಆಗ್ರಹಿಸಲಾಗಿದೆ.
Tungabhadra Dam ಸುಮಾರು 10ಕ್ಕೂ ಅಧಿಕ ವರ್ಷಗಳಿಂದ ತುಂಗಾ ಜಲಾಶಯದಿಂದ (ಗಾಜನೂರು ಡ್ಯಾಂ) ಹೆಚ್ಚುವರಿ ನೀರು ಕಾಲುವೆಗಳ ಮೂಲಕ ಭದ್ರಾ ಜಲಾಶಯಕ್ಕೆ ಜೋಡಣೆ ಮಾಡುವ ಕಾಮಗಾರಿ (ಭದ್ರಾ ಮೇಲ್ದಂಡ ಯೋಜನೆ ಪ್ಯಾಕೇಜ್ ನಂ.೧)ಬಹಳ ಮಂದಗತಿಯಲ್ಲಿ ನಡೆಯುತ್ತಿದ್ದು, ರೈತರ ಸರ್ವತೋಮುಖ ಅಭಿವೃದ್ಧಿ ದೃಷ್ಟಿಯಿಂದ ೨೦೨೫ ನೇ ಇಸವಿ ಮಳೆಗಾಲ ಪ್ರಾರಂಭವಾಗುವ ಮೊದಲು ಸದರಿ ಕಾಮಗಾರಿಯನ್ನು ತುರ್ತಾಗಿ ಮುಗಿಸಬೇಕು ಎಂದು ತಿಳಿಸಲಾಗಿದೆ