Saturday, November 23, 2024
Saturday, November 23, 2024

Kimmane Ratnakar ಸಮಾಜದ ಪರಿಸ್ಥಿತಿ ಸರಿಪಡಿಸುವ ಹೊಣೆ ಶಿಕ್ಷಕರ ಮೇಲಿದೆ- ಕಿಮ್ಮನೆ ರತ್ನಾಕರ್

Date:

Kimmane Ratnakar ಇವತ್ತಿನ ವಾಸ್ತವ ಸಮಾಜದ ಪರಿಸ್ಥಿತಿ ಸರಿಪಡಿಸುವ ಗುರತರ ಹೊಣೆಗಾರಿಕೆ ಶಿಕ್ಷಕರ ಮೇಲಿದೆ ಎಂದು ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಹೇಳಿದ್ದಾರೆ.

ಈಸೂರು ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ನಿವೃತ್ತಿ ಹೊಂದಿದ ಪ್ರವೀಣ್ ಮಹಿಷಿ ಅವರ ಸ್ನೇಹ ಬಳಗ ಹೊರತಂದ ಅಮೃತಬಳ್ಳಿ’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಸಮಾಜ ಹೆಚ್ಚು ಹಾಳಾಗುತ್ತಿರುವುದು ವಿದ್ಯಾವಂತರಿಂದಲೇ. ಶಿಕ್ಷಣ ಪಡೆದವರಿಂದಲೇ ಜಾಸ್ತಿ ತಪ್ಪುಗಳು, ಅನಾಹುತಗಳು ಆಗುತ್ತಿರುವ ಈ ಸಂದರ್ಭದಲ್ಲಿ ಸಮಾಜವನ್ನು ಸುಸ್ಥಿತಿಗೆ ತರುವ
ಹೊಣೆ ಶಿಕ್ಷಕರ ಮೇಲೆ ಹೆಚ್ಚಾಗಿದೆ ಎಂದರು.

ನಾವು ಇಂದು ಹೆಚ್ಚಾಗಿ ದೂರುತ್ತಿರುವುದು ದುಡಿವ ವರ್ಗದವರನ್ನು. ಆದರೆ, ಸಮಾಜ ಹಾಳಾಗುತ್ತಿರುವುದು ದುಡಿವ ವರ್ಗದ ಜನರಿಂದ ಅಲ್ಲ, ವಿದ್ಯಾವಂತರಿಂದ ಎಂಬುದನ್ನು ಇತ್ತೀಚೆಗೆ ನಡೆದ ಚುನಾವಣೆಗಳಲ್ಲಿ ನಾವು ನೋಡಿದ್ದೇವೆ. ಈ ಸಂದರ್ಭದಲ್ಲಿ ಆಗುತ್ತಿರುವ ಲೋಪಗಳನ್ನು ಯಾರು, ಯಾವಾಗ ಸರಿಪಡಿಸಬೇಕು ಎಂದು ಪ್ರಶ್ನಿಸಿದ ಅವರು, ಶಿಕ್ಷಣ ಪಡೆದವರು ಸಾಮಾಜಿಕ ಜವಾಬ್ದಾರಿ ಅರಿತುಕೊಳ್ಳಬೇಕು ಎಂದರು. ಶಿಕ್ಷಣ ಸಮಾಜಕ್ಕೇ ಏನಾದರೂ ಕೊಡುತ್ತಿದೆಯಾ?
ಸಮಾಜಕ್ಕೆ ಏನಾದ್ರೂ ಲಾಭ ಆಗ್ತಿದೆಯಾ? ನಾನು ಪಡೆದ ಶಿಕ್ಷಣ ನನಗೆ, ನನ್ನ ಹಾಗೂ ನನ್ನ ಕುಟುಂಬಕ್ಕೆ ಮಾತ್ರ ಲಾಭ ಆಗ್ತಾ ಇದೆ ಅನ್ನೋದಾದ್ರೆ, ಇಂಥ ಶಿಕ್ಷಣದಿಂದ ಯಾವುದೇ ಲಾಭ ಇಲ್ಲ.

ಸಮಾಜಮುಖಿ ಆಗದ ಶಿಕ್ಷಣದಿಂದ ಐದು ಪೈಸೆ ಲಾಭ ಇಲ್ಲ ಎಂದು ಅವರು ವಿಶ್ಲೇಷಿಸಿದರು. ಶಿಕ್ಷಣದಿಂದ ಸಮಾಜಕ್ಕೆ ಒಳ್ಳೆಯದಾಗಬೇಕು. ಶಿಕ್ಷಣದಿಂದ ಮಾತ್ರ ಒಳ್ಳೆಯರಾಗ್ತಿವಿ ಅನ್ನೋರಿಗೆ ಬದ್ಧತೆ ಬೇಕು. ಈ ಪ್ರಪಂಚವನ್ನು, ಸಮಾಜವನ್ನು ಸರಿದಾರಿಯಲ್ಲಿ ಕಟ್ಟಬೇಕು ಎಂಬ ಉದ್ದೇಶ ಹೊಂದಿರುವ ಶಿಕ್ಷಕರು
ಕ್ರಿಯಾಶೀಲರಾಗಲು ಇದು ಸುಸಮಯ.

Kimmane Ratnakar ದಿನೇದಿನೇ ಭಾರೀ ಅವ್ಯವಸ್ಥೆಯತ್ತ ಸಾಗುತ್ತಿರುವ ಸಮಾಜವನ್ನು ಸುಸ್ಥಿತಿಗೆ ತರುವ ಕಾರ್ಯದಲ್ಲಿ ಎಲ್ಲರೂ ಪಾಲ್ಗೊಳ್ಳಬೇಕಿದೆ ಎಂದು ಕರೆ ನೀಡಿದರು. ಅಮೃತಬಳ್ಳಿ’
ಪುಸ್ತಕವನ್ನು ಬೆಂಗಳೂರಿನ ನಿವೃತ್ತ ಪ್ರಾಚಾರ್ಯರಾದ ಅನುರಾಧ ಬಿಡುಗಡೆ ಮಾಡಿದರು.

ಪ್ರವೀಣ್ ಮಹಿಷಿ, ಶೀಲಾ ಮಹಿಷಿ, ಉಪನ್ಯಾಸಕರಾದ ಡಾ. ಸಾಸ್ವೇಹಳ್ಳಿ ಸತೀಶ್, ಗೋಪಾಲಗೌಡ, ರವಿಕುಮಾರ್, ಅನಿತಾ ಜವಳಿ, ಗೋಪಾಲಕೃಷ್ಣ, ಶ್ವೇತಾ, ಶಿಲ್ಪಾ, ಶೃತಿ ಮೊದಲಾದವರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Maharashtra Election ‘ಮಹಾ’ ಚುನಾವಣೆ.ಮತ್ತೆ ತಲೆಯೆತ್ತಿದ ” ಮಹಾಯುತಿ” ಮಕಾಡೆ ಬಿದ್ದಅಘಾಡಿ

Maharashtra Election ದೇಶದ ಗಮನ ಸೆಳೆದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ...

Police Department ರಾಜ್ಯದ ಜೈಲುಗಳ ವಾರ್ಡನ್ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೇಮಕವಾಗಲು ಆಸಕ್ತ ಮಾಜಿ ಸೈನಿಕರು ಅರ್ಜಿ ಸಲ್ಲಿಸಲು ಅವಕಾಶ

Police Department ಕರ್ನಾಟಕ ರಾಜ್ಯಾದ್ಯಾಂತ ಇರುವ ಜೈಲುಗಳಲ್ಲಿ ವಾರ್ಡನ್‌ ಹುದ್ದೆಗೆ ಗುತ್ತಿಗೆ...

DC Shivamogga ಶಿವಮೊಗ್ಗ ಜಿಲ್ಲೆಯಲ್ಲಿ ಚುನಾವಣಾ ಜನಸಂಖ್ಯೆ ಅನುಪಾತದ ಬಗ್ಗೆ ಡಾ.ತ್ರಿಲೋಕ ಚಂದ್ರ ಅವರಿಂದ ಪರಿಶೀಲನೆ

DC Shivamogga ಶಿವಮೊಗ್ಗ ಜಿಲ್ಲೆಯಲ್ಲಿ ಚುನಾವಣಾ ಜನಸಂಖ್ಯೆ ಅನುಪಾತ (ಇಪಿ ರೇಷಿಯೋ)...