Karnataka Police ತೀರ್ಥಹಳ್ಳಿ ತಾಲೂಕಿನ ಸೌಳಿ ಗ್ರಾಮದ ಸಮೀಪ ಮಾಲತಿ ನದಿ ತೀರದಲ್ಲಿ ಮೇ 7ರಂದು ರಾತ್ರಿ ದುಷ್ಕರ್ಮಿಗಳು ನೀರು ಪೂರೈಕೆಯ ಪೈಪ್‌ಗಳನ್ನು ಕತ್ತರಿಸಿದ್ದಾರೆ.
ಹೆಗ್ಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಡಿಯುವ ನೀರು ಪೂರೈಸುವ ಹಾಗೂ ಏಳೆಂಟು ರೈತರ ಸಾಗುವಳಿ ಜಮೀನಿಗೆ ನೀರು ಸರಬರಾಜು ಮಾಡುವ ಪೈಪ್‌ಗಳನ್ನು ದುಷ್ಕರ್ಮಿಗಳು ಕತ್ತರಿಸಿದ್ದಾರೆ. ಈ ಕುರಿತು ಹೆಗ್ಗೋಡು ಗ್ರಾಮ ಪಂಚಾಯಿತಿ ಪಿಡಿಒ ಆಗುಂಬೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಬಹುಗ್ರಾಮ ಕುಡಿಯುವ ನೀರು ಯೋಜನೆಯ ಕೇಂದ್ರೀಕೃತ ಕಾಮಗಾರಿ ಅನುಷ್ಠಾನ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ಗ್ರಾಮದಲ್ಲಿ ಈಗ ಪೈಪ್ ಕತ್ತರಿಸಿದ ಪ್ರಕರಣ ಕುತೂಹಲಕ್ಕೆ ಕಾರಣವಾಗಿದೆ.
Karnataka Police ತೀರ್ಥಹಳ್ಳಿ ತಾಲ್ಲೂಕಿನ ಸೌಳಿ ಮಜರೆ
ಗ್ರಾಮದಲ್ಲಿ ಪೈಪ್ ಕತ್ತರಿಸಿರುವುದು
ಚುನಾವಣಾ ಬಹಿಷ್ಕಾರ ಮಾಡಿದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಅಸಮಾಧಾ ಸೃಷ್ಟಿಯಾಗಿತ್ತು. ಆ ಕಾರಣಕ್ಕೆ ಘಟ ನಡೆದಿರುವ ಶಂಕೆ ಗ್ರಾಮದಲ್ಲಿ ವ್ಯಕ್ತವಾ ಗುತ್ತಿದೆ.
ಆಗುಂಬೆ ಪೊಲೀಸರು ಮಹಜರು ನಡೆಸಿದ್ದು, ಆರೋಪಿ ಪತ್ತೆಗೆ ಮುಂದಾಗಿದ್ದಾರೆ.
Karnataka Police ಸೌಳಿ ಗ್ರಾಮಕ್ಕೆ ನೀರು ಪೂರೈಸುವ ಪೈಪುಗಳ ಅಪಹರಣ
Date: