K Raghupati Bhat ನೈಋತ್ಯ ಪದವೀಧರರ ಕ್ಷೇತ್ರ ಟಿಕೆಟ್ ನೀಡಿಕೆ: ಮಾಜಿ ಶಾಸಕ ರಘುಪತಿ ಭಟ್ ಅತೃಪ್ತಿ ನೈರುತ್ಯ ಪದವೀಧರ ಕ್ಷೇತ್ರದಲ್ಲಿ ಬಿಜೆಪಿ ಡಾ!! ಧನಂಜಯ್ ಸರ್ಜಿಗೆ ಟಿಕೆಟ್ ಘೋಷಿಸಿದೆ. ಘೋಷಿಸಿದ ಬೆನ್ನಲ್ಲೇ ಬಿಜೆಪಿಯ ಧುರೀಣ ಹಾಗೂ ಮತ್ತೋರ್ವ ಆಕಾಂಕ್ಷಿ ಉಡುಪಿಯ ಮಾಜಿ ಆಶಕ ರಘುಪತಿ ಭಟ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆ, ಉಡುಪಿ, ಕೊಡಗು ಜಿಲ್ಲೆಯ ಸಾಂಪ್ರದಾಯಿಕ ಮತಗಳನ್ನ ಬಿಜೆಪಿ ನಿರ್ಲಕ್ಷಿಸುತ್ತಿದೆ ಎಂದು ರಘುಪತಿ ಭಟ್ಟ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. 1994 ರಿಂದ ಬಿಜೆಪಿಯಲ್ಲಿ ಸಕ್ರಿಯವಾಗಿರುವ ನಾನು ಹಲವು ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಮೊನ್ನೆ ನಡೆದ ಸಂಸತ್ ಚುನಾವಣೆಗೆ ವೀಕ್ಷಕನಾಗಿ 40 ದಿನ ಜವಬ್ದಾರಿಯುತವಾಗಿ ಕೆಲಸ ಮಾಡಿದ್ದೇನೆ. ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ನನಗೆ ಮಾಹಿತಿ ನೀಡದೆ ಪಕ್ಷ ಬೇರೆಯ ಅಭ್ಯರ್ಥಿಯನ್ನು ಘೋಷಿಸಿದ ಪರಿಣಾಮ ವಿಚಲಿತನಾಗಿದ್ದೆ ಎಂದಿದ್ದಾರೆ.
K Raghupati Bhat ನೈಋತ್ಯ ಪದವೀಧರರ ಕ್ಷೇತ್ರ ಟಿಕೆಟ್ ನೀಡಿಕೆ: ಮಾಜಿ ಶಾಸಕ ರಘುಪತಿ ಭಟ್ ಅತೃಪ್ತಿ ನಂತರ ನೈರುತ್ಯ ಪದವೀಧರ ಕ್ಷೇತ್ರಕ್ಕೆ ಟಿಕೇಟ್ ಕೊಡಿಸುವುದಾಗಿ ಪಕ್ಷದ ವರಿಷ್ಠರು ತಿಳಿಸಿದ್ದರು. ಇದರಿಂದ ಪದವೀಧರ ಕ್ಷೇತ್ರಕ್ಕೆ ಅತಿ ಹೆಚ್ಚು ಓಡಾಡಿ ನೋಂದಣಿ ಮಾಡಿಸಿದ್ದೇನೆ. ಈಗ ಟಿಕೆಟ್ ಘೋಷಣೆ ಆಗಿದೆ. ನಾಲ್ಕು ದಶಕಗಳಿಂದ ಬಿಜೆಪಿ ಸಂಪ್ರದಾಯ ಮುರಿದು ಶಿಕ್ಷಕರ ಕ್ಷೇತ್ರಕ್ಕೆ ನನಗೆ ಟಿಕೆಟ್ ನೀಡದೆ ಮಾಡಿರುವ ಅನ್ಯಾಯಕ್ಕೆ ನ್ಯಾಯ ಕೊಡಿಸುವವರು ಯಾರು ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇದರಿಂದ ಪಕ್ಷದ ಹಿರಿಯರನ್ನು ಬಿಜೆಪಿ ಮೂಲೆಗುಂಪು ಮಾಡುತ್ತಿದೆ ಎಂಬ ಆರೋಪ ಒಂದೆಡೆಯಾದರೆ, ಒಂದೇ ಸಮುದಾಯ ತೃಪ್ತಿಪಡಿಸಲು ಮುಂದಾಗಿದೆ ಹಾಗೂ ಒಬಿಸಿ ಮತ್ತು ಇತರೆ ವರ್ಗಗಳನ್ನ ನಿರ್ಲಕ್ಷಿಸುತ್ತಿದೆ ಎಂಬ ಎರಡು ಆರೋಪಕ್ಕೆ ತುತ್ತಾಗಿದೆ.
ಪಕ್ಷ ತೆಗೆದುಕೊಂಡಿರುವ ನಿಲುವಿನಿಂದ ವಿಚಲಿತನಾಗಿದ್ದೇನೆ. ಇದು ಪಕ್ಷದ ಸಾಮಾನ್ಯ ಕಾರ್ಯಕರ್ತ, ಮತ್ತು ಪಕ್ಷದ ಅಭಿಮಾನಿಗಳು ಚಿಂತಿಸುವ ಕಾಲ, ಚರ್ಚಿಸೋಣ ಮತ್ತು ನಿಮ್ಮ ಸಲಹೆಯ ನಿರೀಕ್ಷೆಯಲ್ಲಿರುವೆ ಎಂದು ಬರೆದು ಮಾಜಿ ಶಾಸಕ ರಘುಪತಿ ಭಟ್ ಫೇಸ್ ಬುಕ್ ನಲ್ಲಿ ಅಸಮಾಧಾನ ಹೊರಹಾಕಿದ್ದಾರೆ.
ಈ ಮೂಲಕ ಬಿಜೆಪಿಯಲ್ಲಿ ಮತ್ತೊಂದು ಬಂಡಾಯ ಏಳುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿದೆ. ಡಾ!! ಧನಂಜಯ ಸರ್ಜಿಗೆ ಟಿಕೇಟ್ ಘೋಷಿಸಿದ್ದಕ್ಕೆ ವಿಕಾಸ ಪುತ್ತೂರು ಎನ್ನುವವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
K Raghupati Bhat ನೈಋತ್ಯ ಪದವೀಧರರ ಕ್ಷೇತ್ರ ಟಿಕೆಟ್ ನೀಡಿಕೆ: ಮಾಜಿ ಶಾಸಕ ರಘುಪತಿ ಭಟ್ ಅತೃಪ್ತಿ
Date: