Saturday, November 23, 2024
Saturday, November 23, 2024

Actor Dwarakeesh ಕನ್ನಡ ಸಿನಿಮಾಗಳ ಪ್ರಸಿದ್ಧ “ಪ್ರಚಂಡಕುಳ್ಳ” ಇನ್ನಿಲ್ಲ

Date:

Actor Dwarakeesh ಕನ್ನಡ ಸಿನಿಮಾಗಳ ಪ್ರಸಿದ್ಧ “ಪ್ರಚಂಡಕುಳ್ಳ” ಇನ್ನಿಲ್ಲ ಕನ್ನಡದ ಹಿರಿಯ ನಟ ,ನಿರ್ಮಾಪಕ ನಿರ್ದೇಶಕ ದ್ವಾರಕೀಶ್(81) ನಿಧನರಾಗಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ದ್ವಾರಕೀಶ್
ಬೆಂಗಳೂರಿನ ಸ್ವಗೃಹದಲ್ಲಿ ಕೊನೆಯುಸಿರೆಳೆದರು.

ಮಾಧ್ಯಮಗಳಿಗೆ ದ್ವಾರಕೀಶ್ ಪುತ್ರ ಯೋಗೇಶ್ ಮಾಹಿತಿ ನೀಡಿದರು.
400 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟನೆ, ಸ್ವಾಂಡಲ್ ವುಡ್ ನಲ್ಲಿ ಹೆಸರಾಗಿದ್ದ ಯಶಸ್ವಿ ಚಿತ್ರಗಳ ನಿರ್ಮಾಪಕರಾಗಿದ್ದರು.

ಹಾಸ್ಯನಟರಾಗಿ ತಮ್ಮದೇ ಅಭಿನಯದ ಛಾಪು ಹೊಂದಿದ್ದರು. ಬಾಲಕೃಷ್ಣ, ನರಸಿಂಹರಾಜು ನಂತರದಲ್ಲಿ ತಮ್ಮ “ಕುಳ್ಳ” ಪರ್ಸನಾಲಿಟಿಯಿಂದ
‘ರಾಜಾಕುಳ್ಳ ‘ಆಗಿ ಪ್ರಸಿದ್ಧರಾಗಿದ್ದರು.

19 ಆಗಸ್ಟ್ 1942 ರಲ್ಲಿ
ಮೈಸೂರು ಜಿಲ್ಲೆ ಹುಣಸೂರಿನಲ್ಲಿ ಜನನ.
ತಂದೆ ಶಾಮ್ ರಾವ್,ತಾಯಿ ಜಯಮ್ಮ.

Actor Dwarakeesh ಕನ್ನಡ ಸಿನಿಮಾಗಳ ಪ್ರಸಿದ್ಧ “ಪ್ರಚಂಡಕುಳ್ಳ” ಇನ್ನಿಲ್ಲ ಮೊದಲ ಸಿನಿಮಾ ವೀರ ಸಂಕಲ್ಪ.(1964).
ಡಾ.ರಾಜ್ ಕುಮಾರ್,
ಶಂಕರ್ ನಾಗ್,‌ ವಿಷ್ಣುವರ್ಧನ್.
ಅಂಬರೀಶ್ ಮುಂತಾದ ಹಿರಿಯ ನಟರೊಂದಿಗೆ ಲೀಲಾಜಾಲವಾಗಿ
ಹಾಸ್ಯಾಭಿನಯ ಹಂಚಿಕೊಂಡಿದ್ದ ” ಪ್ರಚಂಡ ಕುಳ್ಳ” ದ್ವಾರಕೀಶ್.

ಮೇಯರ್ ಮುತ್ತಣ್ಣ ,*1966) ದ್ವಾರಕೀಶ್ ನಿರ್ಮಿಸಿದ ಮೊದಲ ಸಿನಿಮಾ. ನಂತರ 40 ಕ್ಕೂ ಹೆಚ್ಚು ಸಿನಿಮಾ ನಿರ್ಮಾಣ.
ಅವರ ತಯಾರಿಕೆಯ ಚಿತ್ರಗಳು ಬಹುತೇಕ ಗಲ್ಲಾಪಟ್ಟಿಗೆ
ಬಾಚಿದ್ದವು.

“ದ್ವಾರಕೀಶ್ ಚಿತ್ರ”..ನಿರ್ಮಾಣ ಸಂಸ್ಥೆಯಡಿಯಲ್ಲಿ
ಕನ್ನಡದಲ್ಲಿ “ಸೂಪರ್ ಹಿಟ್” ಚಿತ್ರಗಳನ್ನ ನೀಡಿದ್ದರು.

ಈಗ ನಮ್ಮನ್ನಗಲಿದ್ದಾರೆ.
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಅವರ ಪಾರ್ಥಿವ ಶರೀರ ಅಂತಿಮ ದರ್ಶನಕ್ಕಿರಿಸಲಾಗಿದೆ

ಕನ್ನಡದ ಅಪಾರ ಅಭಿಮಾನಿಗಳು,ನಟರು ಅವರ ನಿಧನಕ್ಕೆ ಕಂಬನಿ ಮಿಡಿದ್ದಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Dinesh Gundurao ಜಿಲ್ಲೆಯಲ್ಲಿನ ಮಂಗನ ಕಾಯಿಲೆ ಪೀಡಿತ ಪ್ರದೇಶಕ್ಕೆ ಆರೋಗ್ಯ ಸಚಿವ ದಿನೇಶ್ ಗುಂಡುರಾವ್ ಭೇಟಿ

Dinesh Gundurao ಗುಂಡುರಾವ್‌ರವರು ನ.26 ಮತ್ತು 27 ರಂದು ಜಿಲ್ಲೆಯಲ್ಲಿ ಪ್ರವಾಸ...

Shanthala Spherocast Private Limited ವಿದ್ಯಾರ್ಥಿಗಳು ಉತ್ತಮ ಯೋಚನೆಯೊಂದಿಗೆತಮ್ಮ ಜೀವನ ರೂಪಿಸಿಕೊಳ್ಳಬೇಕು- ಟಿ.ಎಸ್.ಹೂವಯ್ಯ

Shanthala Spherocast Private Limited ಶಿವಮೊಗ್ಗದ ಹೆಸರಾಂತ ಸಂಸ್ಥೆಯಾದ ಶಾಂತಲಾ ಸ್ಟೆರೋಕ್ಯಾಸ್ಟ್...