Summer Camp ತಾಳಗುಪ್ಪ ಸಮೀಪದ ಗ್ರಾಮೀಣ ಶಾಲಾ ಮಕ್ಕಳಿಗಾಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸುಳ್ಳೂರು ಆವರಣದಲ್ಲಿ ಮಕ್ಕಳ ಸಾಹಿತ್ಯ ಪರಿಷತ್ತು ಮತ್ತು ಕರ್ನಾಟಕ ಹಸೆ ಚಿತ್ತಾರ ಪರಿಷತ್ತಿನ ಸಹಯೋಗದೊಂದಿಗೆ ಬೇಸಿಗೆ ಸಂಭ್ರಮ ಕಲಿಕಾ ಶಿಬಿರವನ್ನು ಏಳು ದಿನಗಳ ಕಾಲ ಸ ಹಿ ಪ್ರಾ ಶಾಲೆ ಸೂಳ್ಳೂರು ಇಲ್ಲಿ ಆಯೋಜಿಸಲಾಗಿದ್ದು ಶ್ರೀ ಸಿದ್ದವೀರ ಮಹಾಸ್ವಾಮಿಗಳು ಉದ್ಘಾಟಿಸಿ ವ್ಯಕ್ತಿತ್ವ ವಿಕಸನ ಕುರಿತು ಮಾಹಿತಿ ಹಂಚಿಕೊಂಡರು.
ಶಾಲೆ ಎಂದರೆ ಕೇವಲ ನೋಟ್ಸ್, ಹೋಮವರ್ಕ್ ಅಂಕಗಳಿಕೆಯಲ್ಲ. ಅದರಿಂದಚೆ ಮಕ್ಕಳು ರಚನಾತ್ಮಕವಾಗಿ ತೊಡಗಿಕೊಳ್ಳಬೇಕು. ಮಕ್ಕಳನ್ನು ಸೃಜನಶೀಲತೆ ಮತ್ತು ಅನ್ವೇಷಣಾ ಮನೋಭಾವದತ್ತ ಬೆಳೆಸಲು ವಿಶೇಷ ಕಲಿಕ ಶಿಬಿರಗಳು ಅವಶ್ಯಕವಾಗಿವೆ ಎಂದು ಶಿಬಿರ ನಿರ್ದೇಶಕರು ಮುಖ್ಯ ಗುರುಗಳಾದ ರವಿಚಂದ್ರರವರು ಮಾತನಾಡಿದರು.
Summer Camp ಎಸ್ ಡಿ ಎಂ ಸಿ ಅಧ್ಯಕ್ಷರಾದ ರಘು ಬಿ, ಉಪಾಧ್ಯಕ್ಷರಾದ ಜಾನಕಿ ಗಣಪತಿ, ಅಂಗನವಾಡಿ ಶಿಕ್ಷಕಿ ಜಯಲಕ್ಷ್ಮಿ, ಮಂಜುನಾಥ್ ಮಂಡಗಳಲೆ, ಶಿಕ್ಷಕಿ ಕಲ್ಪನಾ ಮತ್ತು ದಿವ್ಯ, ಹಾಗೂ ಗ್ರಾಮಸ್ಥರು ಹಾಜರಿದ್ದರು.
ವಿವಿಧ ಶಾಲಾ ಮಕ್ಕಳು ಹಾಜರಿದ್ದು ವಿವಿಧ ಸೃಜನಶೀಲ ಚಟುವಟಿಕೆಯಲ್ಲಿ ಪಾಲ್ಗೊಂಡರು.