Election bond ಚುನಾವಣಾ ಬಾಂಡ್‌ಗಳ ಎರಡನೇ ಅತಿ ದೊಡ್ಡ ಖರೀದಿದಾರರಾಗಿದ್ದ ಮೇಘಾ ಎಂಜಿನಿಯರಿಂಗ್ ಮತ್ತು ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್ ವಿರುದ್ಧ ಸಿಬಿಐ ಲಂಚ ಪ್ರಕರಣದಡಿಯಲ್ಲಿ ಎಫ್‌ಐಆರ್ ದಾಖಲಿಸಿದೆ.
966 ಕೋಟಿ ರೂಪಾಯಿ ಮೌಲ್ಯದ ಎಲೆಕ್ಟೋರಲ್ ಬಾಂಡ್‌ಗಳ ಎರಡನೇ ಅತಿ ದೊಡ್ಡ ಖರೀದಿದಾರನಾಗಿದ್ದ ಹೈದರಾಬಾದ್ ಮೂಲದ ಮೇಘಾ ಎಂಜಿನಿಯರಿಂಗ್ ವಿರುದ್ಧ ಜಗದಾಲ್ಪುರ ಅಂತರ್ಗತ ಉಕ್ಕು ತಯಾರಿಕಾ ಘಟಕ ನಿರ್ಮಾಣಕ್ಕೆ ಸಂಬಂಧಿಸಿದಂತೆ 174 ಕೋಟಿ ಬಿಲ್ ಮಂಜೂರು ಮಾಡಲು 78 ಲಕ್ಷ ಲಂಚ ನೀಡಿದ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ.
ಇದರಲ್ಲಿ ಭಾಗಿಯಾದ ಎನ್‌ಐಎಸ್‌ಪಿ ಹಾಗೂ ಎನ್‌ಎಂಡಿಸಿ ಹಾಗೂ ಎಂಇಕಾನ್ ಅಧಿಕಾರಿಗಳ ಹೆಸರನ್ನೂ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಾರ್ಚ್ 21 ರಂದು ಚುನಾವಣಾ ಆಯೋಗ ಬಿಡುಗಡೆ ಮಾಡಿದ ಅಂಕಿ ಅಂಶಗಳ ಪ್ರಕಾರ ಮೇಘಾ ಇಂಜಿನಿಯರಿಂಗ್ ಚುನಾವಣಾ ಬಾಂಡ್‌ಗಳ ಎರಡನೇ ಅತಿ ದೊಡ್ಡ ಖರೀದಿದಾರರಾಗಿದ್ದಾರೆ ಮತ್ತು ಬಿಜೆಪಿಗೆ 586 ಕೋಟಿ ರೂ. ದೇಣಿಗೆಯನ್ನು ಈ ಕಂಪೆನಿ ನೀಡಿತ್ತು. ಇದಲ್ಲದೆ ಕಂಪೆನಿಯು ಬಿಆರ್‌ಎಸ್‌ಗೆ ರೂ 195 ಕೋಟಿ, ಡಿಎಂಕೆಗೆ 85 ಕೋಟಿ ರೂ. ಮತ್ತು ವೈಎಸ್‌ಆರ್‌ಸಿಪಿಗೆ 37 ಕೋಟಿ ರೂ. ದೇಣಿಗೆ ನೀಡಿದೆ. ಟಿಡಿಪಿ ಕಂಪನಿಯಿಂದ ಸುಮಾರು 25 ಕೋಟಿ ರೂ., ಕಾಂಗ್ರೆಸ್ 17 ಕೋಟಿ ರೂ. ದೇಣಿಗೆಯನ್ನು ಪಡೆದಿದೆ.
Election bond ದಾಖಲಾದ ಎಫ್‌ಐಆರ್‌ನ ಪ್ರಕಾರ, ಇಂಟೆಕ್‌ವೆಲ್ ಮತ್ತು ಪಂಪ್‌ಹೌಸ್ ಮತ್ತು ಕ್ರಾಸ್ ಕಂಟ್ರಿ ಪೈಪ್‌ಲೈನ್ ಕಾಮಗಾರಿಗೆ ಸಂಬಂಧಿಸಿದ 315 ಕೋಟಿ ರೂ.ಗಳ ಯೋಜನೆಯಲ್ಲಿ ಲಂಚದ ಆರೋಪದ ಬಗ್ಗೆ ಸಿಬಿಐ 2023 ಆಗಸ್ಟ್ 10ರಂದು ಪ್ರಾಥಮಿಕ ತನಿಖೆ ನಡೆಸಿತ್ತು.
ಈ ಕುರಿತ ವರದಿ ಆಧರಿಸಿ ಮಾರ್ಚ್ 18ರಂದು ಪ್ರಕರಣ ದಾಖಲಿಸಲು ನಿರ್ಧರಿಸಲಾಯಿತು. ಅದರಂತೆ ಮಾರ್ಚ್ 31ರಂದು ಪ್ರಕರಣ ದಾಖಲಿಸಲಾಗಿದೆ ಎಂದು ಎಫ್‌ಐಆರ್‌ನಲ್ಲಿ ಹೇಳಲಾಗಿದೆ.