Ayanur Manjunath ಡಾ|| ಧನಂಜಯ ಸರ್ಜಿಗೆ ರಾಜಕೀಯ ಇತಿಹಾಸ ಗೊತ್ತಿಲ್ಲ. ಬಿಜೆಪಿಯಲ್ಲಿ ಅವರಿನ್ನೂ ಎಲ್.ಕೆ.ಜಿ. ನಾನು ಬರಗಾಲದಲ್ಲಿ ಬಿತ್ತಿ ಬೆಳೆದುಕೊಂಡು ಬಂದವನು. ಸ್ವಂತಬಲದಲ್ಲಿ ನಾನು ಬೆಳೆದು ಬಂದವನು. ಸರ್ಜಿ ಒಳ್ಳೆಯವರು. ಅವರಿಗೆ ಎಲ್ಲೂ ಮಾನ್ಯತೆ ಸಿಕ್ಕಿಲ್ಲ. ನನ್ನ ಬಗ್ಗೆ ಮಾತನಾಡಬೇಕಾದರೆ ಇನ್ನಷ್ಟು ರಾಗಿ ಬೀಸಿ ಬರಲಿ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭದ್ರಾವತಿಯಲ್ಲಿ ಸ್ಪರ್ಧಿಸಿ ಸೋತಿದ್ದೇನೆ. ನೀರಿಲ್ಲದ ಜಾಗದಲ್ಲಿ ನನಗೆ ಜಮೀನು ಕೊಟ್ಟಿದ್ದು, ಸರ್ಜಿ ಬಂದಿದ್ದು ನೀರಾವರಿ ಜಮೀನಿಗೆ. ಡಾ|| ಸರ್ಜಿ ತಿಳಿಯದೆ ಕಾಮೆಂಟ್ಸ್ ಮಾಡಬಾರದು. ನನ್ನ ಬಗ್ಗೆ ಮಾತನಾಡಬೇಕಾದರೆ ಇನ್ನಷ್ಟು ಅರಿತುಕೊಳ್ಳಲಿ ಎಂದರು.
Ayanur Manjunath ಡಾ|| ಸರ್ಜಿಗೆ ಬಿಜೆಪಿ ಅರ್ಥವಾಗಿಲ್ಲ. ನಾನು ಫಲಾನು¨sವಿ ಎಂದಿದ್ದಾರೆ. ೧೯೯೪ ರಲ್ಲಿ ಹೊಸನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದೆ. ಒಬ್ಬ ಗ್ರಾಪಂ ಸದಸ್ಯನೂ ಇರದ ಸಂದರ್ಭದಲ್ಲಿ ಸ್ಪರ್ಧಿಸಿರುವೆ. ಗೆದ್ದಿರುವೆ. ಲೋಕಸಭಾದಲ್ಲಿ ಬಿಎಸ್ ವೈ, ಆನಂದರಾವ್, ಶಂಕರಮೂರ್ತಿ ಅವರು ಬಂಗಾರಪ್ಪ ವಿರುದ್ಧ ಸೋತಿದ್ದರು. ನಾನು ಮೊದಲ ಬಾರಿಗೆ ೧೯೯೮ ರಲ್ಲಿ ಬಂಗಾರಪ್ಪನವರನ್ನು ಸೋಲಿಸಿ ಗೆದ್ದಿರುವೆ ಎಂದರು.
ಲೋಕಸಭಾ ಚುನಾವಣೆ ಕ್ಷೇತ್ರದಲ್ಲಿ ಗೀತಾ ಗೆದ್ದು ಬರುತ್ತಾರೆ. ನಾಳೆ ಗೀತಾ ಬೈಂದೂರಿನಿAದ ಪ್ರಚಾರ ಆರಂಬಿಸುವರು ಎಂದರು.
Ayanur Manjunath ನನ್ನ ಬಗ್ಗೆ ಮಾತಾಡ ಬೇಕಾದರೆ ಸರ್ಜಿ ಇನ್ನಷ್ಟೂ ರಾಗಿ ಬೀಸಿ ಬರಲಿ- ಆಯನೂರು
Date: