Varun Gandhi ವರುಣ್ ಗಾಂಧಿಯವರಿಗೆ ಈ ಬಾರಿ ಬಿಜೆಪಿ ಪಕ್ಷದಿಂದ ಲೋಕಸಭೆಗೆ ಸ್ಪರ್ಧಿಸಲು ಟಿಕೆಟ್ ನೀಡಿಲ್ಲ.
ಆದರೂ ಅವರು ಯಾವುದೇ ಅಸಮಾಧಾನ ವ್ಯಕ್ತಪಡಿಸದೇ ಮೂರು ಬಾರಿ ಎಂಪಿ ಆಗಿ ಆಯ್ಕೆ ಮಾಡಿದ ಫಿಲ್ಬಿತ್ ಕ್ಷೇತ್ರದ ಜನತೆಗೆ ಹೃದಯಂಗಮ ಪತ್ರ ಬರೆದಿದ್ದಾರೆ. ಓರ್ವ ಲೋಕಸಭಾ ಸದಸ್ಯ
ತನ್ನ ಜನತೆಗೆ ಋಣಿಯಾಗಿರಬೇಕಾದ ಸಂವೇದನೆಗಳು ಇಲ್ಲಿವೆ.
“ಪಿಲಿಭಿತ್‌ನ ಮಹಾನ್ ಜನರಿಗೆ ವರ್ಷಗಳ ಕಾಲ ಸೇವೆ ಸಲ್ಲಿಸಲು ನನಗೆ ಅವಕಾಶ ಸಿಕ್ಕಿರುವುದು ನನ್ನ ಅದೃಷ್ಟ ಎಂದು ನಾನು ಭಾವಿಸುತ್ತೇನೆ” ಎಂದು ಅವರು ಬರೆದಿದ್ದಾರೆ.
ಅವರು ಮತದಾರರಿಂದ ಪಡೆದ ಆದರ್ಶಗಳು, ಸರಳತೆ ಮತ್ತು ದಯೆಯ ಅಮೂಲ್ಯ ಪಾಠಗಳನ್ನು ಅವರು ಒಪ್ಪಿಕೊಂಡರು, ಇದು Varun Gandhi ಸಂಸತ್ತಿನ ಸದಸ್ಯರಾಗಿ ಅವರ ಪಾತ್ರವನ್ನು ಮಾತ್ರವಲ್ಲದೆ ಅವರ ವೈಯಕ್ತಿಕ ಬೆಳವಣಿಗೆಯನ್ನೂ ರೂಪಿಸಿತು ಎಂದಿದ್ದಾರೆ.
“ಸಂಸದರಾಗಿ ನನ್ನ ಅಧಿಕಾರಾವಧಿಯು ಕೊನೆಗೊಳ್ಳುತ್ತಿದ್ದರೂ, ಪಿಲಿಭಿತ್‌ನೊಂದಿಗಿನ ನನ್ನ ಸಂಬಂಧವು ನನ್ನ ಕೊನೆಯ ಉಸಿರು ಇರುವವರೆಗೂ ಕೊನೆಗೊಳ್ಳುವುದಿಲ್ಲ” ಎಂದು ವರುಣ್ ಗಾಂಧಿ ಬರೆದಿದ್ದಾರೆ. 2983 ರಲ್ಲಿ
ಮೂರು ವರ್ಷದ ಮಗುವಾಗಿ ಅಮ್ಮನ ಕೈಬೆರಳು ಹಿಡಿದುಕೊಂಡು ಫಿಲ್ಬಿತ್ ಗೆ ಬಂದೆ.
ಮುಂದೆ ಈ ಸ್ಥಳವೇ ನನ್ನ ಸಮಾಜಸೇವೆಯ ಕಾರ್ಯಕ್ಷೇತ್ರವಾಗುತ್ತದೆಂದು ನಿರೀಕ್ಷಿಸಿರಲಿಲ್ಲ.
ನನ್ನ ಲೋಕಸಭಾ ಸದಸ್ಯತ್ವ ಅವಧಿ ಕೊನೆಗಾಣುತ್ತಿದೆ. ಆದರೆ ಫಿಲ್ಬಿತ್ ಜನತೆಯನ್ನ ನನ್ನ ಉಸಿರಿರುವರೆಗೂ ಮರೆಯುವುದಿಲ್ಲ.
ಎಂದು ಕಳಕಳಿ ವ್ಯಕ್ತಪಡಿಸಿದ್ದಾರೆ.