Rotary Club Shimoga ನೀರಿಗೆ ಸಂಬಂಧಿಸಿದಂತೆ ನಾವು ಇಂದು ಅತ್ಯಂತ ಕೆಟ್ಟ ಪರಿಸ್ಥಿತಿಯಲ್ಲಿ ಇದ್ದೇವೆ. ಬೆಂಗಳೂರು, ಚೆನ್ನೈ ಹಾಗೂ ದೇಶದ ಇತರೆ ಭಾಗಗಳಲ್ಲಿ ನೀರಿನ ಸಮಸ್ಯೆಯ ಕುರಿತು ಮಾಧ್ಯಮಗಳಲ್ಲಿ ವರದಿ ಆಗುತ್ತದೆ ಎಂದು ದಾವಣಗೆರೆ ಜಿಎಫ್‌ಜಿಸಿ ಪರಿಸರ ವಿಜ್ಣಾನ ಸಹ ಪ್ರಾಧ್ಯಾಪಕ ಡಾ. ನಾಗೇಂದ್ರ ನಾಯ್ಕ್.ಕೆ. ಹೇಳಿದರು.
ರಾಜೇಂದ್ರ ನಗರದ ರೋಟರಿ ಸಭಾಂಗಣದಲ್ಲಿ ರೋಟರಿ ಶಿವಮೊಗ್ಗ ಪೂರ್ವ ವತಿಯಿಂದ ವಿಶ್ವ ಜಲ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ನೀರಿನ ಬಗ್ಗೆ ಜಾಗೃತಿ ಕಾರ್ಯಕ್ರಮದಲ್ಲಿ “ಪ್ರಸ್ತುತ ಪರಿಸ್ಥಿತಿಯಲ್ಲಿ ಜಲ ಸಮಸ್ಯೆ” ಕುರಿತು ಮಾತನಾಡಿದರು.
ಭಾರತದ ಹವಾಮಾನ ಇಲಾಖೆ ಇತ್ತೀಚಿಗೆ ಭಾರತದ ಅರ್ಧದಷ್ಟು ನಗರಗಳು ನೀರಿಲ್ಲದಂತಾಗಿವೆ ಎನ್ನುವ ಮಾಹಿತಿಯನ್ನು ನೀಡಿದೆ. ರಾಜ್ಯ ರಾಜ್ಯಗಳ ನಡುವೆ ನದಿ ನೀರಿನ ಹಂಚಿಕೆಗಾಗಿ ಹೋರಾಟ ನಡೆಯುತ್ತಿವೆ. ಮುಂದೆ ಯುದ್ಧಗಳು ಕೂಡ ಆಗಬಹುದು ಹಾಗೂ ಮುಂಬರುವ ದಿನಗಳಲ್ಲಿ ನಗರ ನಗರಗಳ ನಡುವೆ ಹೋರಾಟಗಳು ನಡೆಯಬಹುದು ಎಂದು ತಿಳಿಸಿದರು.
ಭಾರತದ ಅನೇಕ ಪ್ರದೇಶಗಳಲ್ಲಿ ಇಂದು ನೀರಿನ ಟ್ಯಾಂಕರ್‌ಗಳನ್ನು ಪೊಲೀಸ್ ಕಾವಲಿನಲ್ಲಿ ರಕ್ಷಣೆ ಮಾಡಬೇಕಾದ ದುಸ್ಥಿತಿ ಬಂದಿದೆ. ಇವೆಲ್ಲವೂ ಕೂಡ ಪ್ರಸ್ತುತ ಪರಿಸ್ಥಿತಿಯಲ್ಲಿ ನೀರಿನ ಬಿಕ್ಕಟ್ಟಿನ ನಿದರ್ಶನಗಳು ಎಂದು ಅನಿಸಿಕೆ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರೋಟರಿ ಶಿವಮೊಗ್ಗ ಪೂರ್ವದ ಅಧ್ಯಕ್ಷ ಸತೀಶ್ ಚಂದ್ರ ಮಾತನಾಡಿ, ಪ್ರತಿಯೊಬ್ಬರೂ ಕೂಡ ಪರಿಸರ ಜಾಗೃತಿಯನ್ನು ಹೊಂದಬೇಕು. ಪರಿಸರದ ಬಗ್ಗೆ ಸೂಕ್ಷ್ಮತೆಯನ್ನು ಬೆಳೆಸಿಕೊಳ್ಳಬೇಕು ಹಾಗೂ ನಮ್ಮ ನಿತ್ಯ ಜೀವನದಲ್ಲಿ ಸಣ್ಣಪುಟ್ಟ ಬದಲಾವಣೆಗಳನ್ನು ಮಾಡಿಕೊಂಡರೆ ವಿಶೇಷವಾಗಿ ನೀರಿನ ಬಳಕೆಯನ್ನು ಕಡಿಮೆ ಮಾಡಬಹುದು ಎಂದು ತಿಳಿಸಿದರು.
ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್, ಡಾ. ಪರಮೇಶ್ವರ ಡಿ.ಶಿಗ್ಗಾವ್, ಮಾಜಿ ಅಧ್ಯಕ್ಷರಾದ ಶ್ರೀಕಾಂತ್, ಡಾ. ಧನಂಜಯ, ಕೇಶವಪ್ಪ, ಗಣೇಶ್, ಕೃಷ್ಣಮೂರ್ತಿ, ಮುಕುಂದೇಗೌಡ, ರೋಟರಿ ಶಿವಮೊಗ್ಗ ಪೂರ್ವ ಕಾರ್ಯದರ್ಶಿ ಕಿಶೋರ್ Rotary Club Shimoga ಕುಮಾರ್, ಪ್ರದೀಪ್ ವಿ ಎಲಿ ಹಾಗೂ ರೋಟರಿ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು.