Davangere University ದೇಶದ ಪ್ರಜೆಗಳು ಎಲ್ಲದಕ್ಕೂ ಸರ್ಕಾರವನ್ನು ಅವಲಂಬಿಸದೆ ಸ್ವಾವಲಂಬಿಗಳಾಗಿ ಬದುಕನ್ನು ರೂಪಿಸಿಕೊಳ್ಳುವುದು ರಾಷ್ಟ್ರಾಭಿವೃದ್ಧಿಗೆ ಪೂರಕ ಎಂದು ಹಿರಿಯ ಪತ್ರಕರ್ತ ಡಾ. ಎಚ್ ಬಿ ಮಂಜುನಾಥ ಅಭಿಪ್ರಾಯ ಪಟ್ಟರು. ದಾವಣಗೆರೆ ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪದವಿಗೆ ಭಾಜನರಾಗಿದ್ದಕ್ಕಾಗಿ ಅವರಿಗೆ ನಗರದ ಶ್ರೀ ಕೃಷ್ಣ ಕಲಾಮಂದಿರದಲ್ಲಿ ಶ್ರೀ ಕೃಷ್ಣ ಸೇವಾ ಟ್ರಸ್ಟ್, ಕೂಟ ಮಹಾ ಜಗತ್ತು, ಶ್ರೀ ಕೃಷ್ಣ ಮಿತ್ರವೃಂದ ಹಾಗೂ ಶ್ರೀ ಲಕ್ಷ್ಮಿ ನರಸಿಂಹ ಸಹಕಾರ ಸಂಘ ಇವರುಗಳ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಅಭಿನಂದನಾ ಸನ್ಮಾನ ಸ್ವೀಕರಿಸಿ ಮಾತನಾಡುತ್ತಾ ಅವರು ಅವಿಭಜಿತ ದಕ್ಷಣ ಕನ್ನಡ ಜಿಲ್ಲೆಯ ಜನರು ಬದುಕನ್ನು ಅರಸಿಕೊಂಡು ಪರಸ್ಥಳಗಳಿಗೆ ಹೋದವರು ಸ್ವಉದ್ಯೋಗಿಗಳಾಗಿ ಇತರರಿಗೂ ಉದ್ಯೋಗ ನೀಡುತ್ತಿರುವುದಲ್ಲದೆ ಪ್ರಾಮಾಣಿಕ ದುಡಿಮೆಯಿಂದ ಸರ್ಕಾರಕ್ಕೂ ತೆರಿಗೆಗಳನ್ನು ಪಾವತಿಸುತ್ತಾ ಸಾತ್ವಿಕರಾಗಿ ಬದುಕುತ್ತಿರುವುದು ಪ್ರಶಂಸನೀಯ ಹಾಗೂ ಸಮಾಜದ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಉಚಿತ ವಿದ್ಯಾರ್ಥಿ ನಿಲಯ ಸಹ ನಡೆಸುತ್ತಿರುವುದು ಅನುಕರಣೀಯ ಎಂದರು.
Davangere University ಶ್ರೀಮತಿ ಪೂರ್ಣಿಮಾ ಐತಾಳ್ ನಿರೂಪಿಸಿದ ಕಾರ್ಯಕ್ರಮದಲ್ಲಿ ವೇದಘೋಷವನ್ನು ಸುಮುಖ ಮಾಡಿದರು. ಪ್ರಾರ್ಥನೆಯನ್ನು ಶಾಲಿನಿ ಅಡಿಗ, ದೀಪಾ ಪ್ರಕಾಶ್, ಶಿಲ್ಪಾ ಸುಪ್ರೀತ್ ಹಾಡಿದರು. ಡಿ ಅನಂತಯ್ಯ ಸ್ವಾಗತ ಕೋರಿದರು. ಕೆ ಎ ವಿಠ್ಠಲರಾವ್, ಶ್ಯಾಮಲಾ ಪ್ರಕಾಶ್, ಎಂ ಎಸ್ ಪ್ರಸಾದ್, ಹರೀಶ್ ಆಚಾರ್ಯ, ಮಂಜುನಾಥ ದಾಸ್ ಮುಂತಾದವರು ಉಪಸ್ಥಿತರಿದ್ದು ಸನ್ಮಾನಿತರ ಪರಿಚಯವನ್ನು ಬಾಲಕೃಷ್ಣ ವೈದ್ಯ ಮಾಡಿದರೆ ಅಭಿನಂದನಾ ನುಡಿಗಳನ್ನು ಕೆ ಎಲ್ ಆಚಾರ್ಯ, ಮೋತಿ ಆರ್ ಸುಬ್ರಹ್ಮಣ್ಯ, ಶ್ರೀಮತಿ ಅಡಿಗ, ಡಾ. ಛಾಯಾ, ಪೆ ನಾ ಗೋಪಾಲ್ ರಾವ್, ಡಿ ಕೆ ಸುಬ್ರಹ್ಮಣ್ಯ, ಮೋತಿ ಆರ್ ಗುರುಪ್ರಸಾದ್, ನಿರಂಜನ್, ಪಾವಂಜೆ ನಾರಾಯಣ್, ಸುಬ್ರಹ್ಮಣ್ಯ ಹೊಳ್ಳ ಮುಂತಾದವರು ವ್ಯಕ್ತಪಡಿಸಿದರು. ಗಾಯಕ ಮಲ್ಲಿಕಾರ್ಜುನ್ ಶಾನಭೋಗ್ ಗೀತ ಗಾಯನ ಮಾಡಿದರು.ಗುರುರಾಜ ಭಾಗವತ್, ಪಿ ಎನ್ ರವಿಚಂದ್ರ, ಯಜ್ಞನಾರಾಯಣ ಭಟ್,ಮಂಜುನಾಥ ಬುದ್ಯ, ಶಿವರಾಮ ಕಾರಂತ್,ಪದ್ಮಾತಂತ್ರಿ, ಹೆಚ್ ಎಲ್ ಅಡಿಗ ಮುಂತಾದವರು ಭಾಗವಹಿಸಿದ್ದು ರಂಜನಿ ಮಧುಸೂದನ್ ವಂದನೆ ಸಮರ್ಪಿಸಿದರು