Sunday, November 24, 2024
Sunday, November 24, 2024

Election  Churmuri ಚುನಾವಣಾ ಚುರಮುರಿ

Date:

Election Churmuri ಇನ್ನೇನು ಲೋಕಸಭಾ ಚುನಾವಣೆ ದಿನಾಂಕ ಘೋಷಣೆಗೆ ಕೆಲವೇ ದಿನಗಳು ಬಾಕಿಯಿವೆ.
ಪ್ರಮುಖ ರಾಜಕೀಯ ಪಕ್ಷಗಳಲ್ಲಿ ಟಿಕೆಟ್ ಗಾಗಿ ಸೆಣಸಾಟ,ಲೆಕ್ಕಾಚಾರ ಶುರುವಾಗಿದೆ. ಹಾಲಿ ಎಂಪಿಗಳಿಗೆ ಕೆಲವರಿಗೆ
ಹೈ ಕಮಾಂಡ್ ಕೃಪೆ ಸಿಗದೇ ಇರಬಹುದು.
ಕೆಲವರು ಮತ್ತೆ ಟಿಕೆಟ್ ಪಡೆಬಹುದು.
ಒಟ್ಟಾರೆ ಎಲ್ಲಾ ಪಕ್ಷಗಳಲ್ಲೂ ಬಿರುಸಿನ ಚಟುವಟಿಕೆ ಆರಂಭವಾಗಿದೆ.
ಮಾಧ್ಯಮಗಳಲ್ಲಿ ಬಿಜೆಪಿ,ಕಾಂಗ್ರೆಸ್,
ಜೆಡಿಎಸ್ ಪಕ್ಷಗಳ ಸಂಭಾವ್ಯರ ಹೆಸರುಗಳು ಹರಿದಾಡಲಾರಂಭಿಸಿವೆ.
ಆದರೆ ಕಾಂಗ್ರೆಸ್ ಪಕ್ಷ ಈಗಾಗಲೇ ಅಧೀಕೃತವಾಗಿ ಕೆಲವರ ಹೆಸರು ಪ್ರಟಿಸಿದೆ. ಅತ್ಯಂತ ಕುತೂಹಲ ಕ್ಷೇತ್ರವಾದ ಶಿವಮೊಗ್ಗಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಿನಿತಾರೆ ಶಿವರಾಜ್ ಕುಮಾರ್ ಅವರ ಪತ್ನಿ
ಗೀತಾ ಶಿವರಾಜ್ ಕುಮಾರ್ ಚುನಾವಣಾ ಕಣಕ್ಕೆ ಧುಮುಕಿದ್ದಾರೆ. ಹಿಂದೆ ಸೋತ ಅನುಭವ ಅವರಿಗಿದೆ.ಈಗ ಸಹೋದರ ಮಧು ಬಂಗಾರಪ್ಪ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾರೆ. ಹಿಂದಿನ ಎಲ್ಲಾ ವಿಫಲತೆಗಳ ಹಿನ್ನೆಲೆಯಲ್ಲಿ ನೋಡಿದರೆ. ಅದೊಂದು ಇವತ್ತಿನ ಪ್ಲಸ್ ಪಾಯಿಂಟ್. ಶಿವಮೊಗ್ಗಕ್ಕೆ ಹೋಗಿಬಂದು ಮಾಡಿಕೊಂಡಿದ್ದರೆ ಇಲ್ಲಿನ ಜ್ವಲಂತ ಸಮಸ್ಯೆಗಳ ಬಗ್ಗೆ ಅರಿವಿದೆ ಎನ್ನಲು ಆಗುವುದಿಲ್ಲ. ಇಲ್ಲಿನ ಸಾಮಾಜಿಕ ಸಂಘಸಂಸ್ಥೆಗಳು, ಆಂದೋಲನ ,ಚಳವಳಿಗಳಲ್ಲಿ ಭಾಗವಹಿಸಿದ್ದಿದ್ದರೆ
ಚಲಾವಣೆಯ ನಾಣ್ಯವಾಗುತ್ತಿದ್ದರು.
ಇನ್ನು ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಹಾಲಿ ಸಂಸದ ಬಿ.ವೈ.ರಾಘವೇಂದ್ರ ಅವರಿಗೆ ಟಿಕೆಟ್ ಸಿಗುವುದು ನಿರ್ವಿವಾದ. ಅಂದರೆ ಶಿವಮೊಗ್ಗ ಕ್ಷೇತ್ರದಲ್ಲಿ ಅವರ ರಿಪೋರ್ಟ್ ಕಾರ್ಡ್ ಬಲವಾಗಿಯೇ ಇದೆ.
ಶರಾವತಿ ಸಂತ್ರಸ್ತರ ಪ್ರಮುಖ ಸಮಸ್ಯೆ, ಭದ್ರಾವತಿ ವಿಐಎಸ್ ಎಲ್ ,ಕಾಗದ ಕಾರ್ಖಾನೆ ,ಶಿವಮೊಗ್ಗ ಸಕ್ಕರೆ ಕಾರ್ಖಾನೆ ರೈತರ ಭೂಮಿ, ವಸತಿ
ಸಮಸ್ಯೆಗಳು ಇನ್ನೂ ಬಗೆಹರಿದಿಲ್ಲ. ಯಾವುದೇ ಕೆಲಸ,ಯೋಜನೆಗಳನ್ನ ಅಮೂಲಾಗ್ರವಾಗಿ
ಕೈಗೆತ್ತಿಕೊಂಡು ಪೂರೈಸಿದ ಛಾತಿ ರಾಘವೇಂದ್ರರಲ್ಲಿದೆ.
ಆದರೆ ಈ ಸಮಸ್ಯೆಗಳ ಬಗ್ಗೆ ಅವರು ಪ್ರಯತ್ನನಡೆಸಿದ್ದರೂ
ಟೋಟಲ್ ಔಟ್ ಪುಟ್ ಕಣ್ಣಿಗೆ ಕಾಣುವುದಿಲ್ಲ.
ಆದರೆ ಇದೇ ಅವರಿಗೆ ಹಿನ್ನಡೆ ತರಲು ಸಾಧ್ಯ ಎನ್ನುವಂತಿಲ್ಲ. ಸೇತುವೆಗಳು, ರಸ್ತೆಗಳ, ರೈಲ್ಬೆ ಕಾಮಗಾರಿ, ಇಎಸ್ಐ ಆಸ್ಪತ್ರೆ, ರಕ್ಷಣಾ ವಿವಿ
,ಭದ್ರಾವತಿ ಅರೆ ಸೈನ್ಯಪಡೆ ಶಿಬಿರ ಹೀಗೆ ಅವರ ರಿಪೋರ್ಟ್ ಕಾರ್ಡ್
Strong ಆಗಿದೆ.
ಸದ್ಯ ಹದಿನಾಲ್ಕು ಹೆಸರುಳ್ಳ ಬಿಜೆಪಿಯ ಮೊದಲ ಪಟ್ಟಿಯಲ್ಲಿ ರಾಘವೇಂದ್ರ ಅವರ ಹೆಸರು ಕಾಣಿಸಿಕೊಂಡಿದೆ.
ಮೈಸೂರು-ಯದು ವೀರ ಕೃಷ್ಣದತ್ತ ಚಾಮರಾಜ ಒಡೆಯರ್, ,
ಬೆಂಗಳೂರು .ದಕ್ಷಿಣ – ತೇಜಸ್ವಿ ಸೂರ್ಯ.
ಬೆಂಗಳೂರು,ಗ್ರಾಮಾಂತರ – ಡಾ.ಸಿ.ಎನ್. ಮಂಜುನಾಥ್.( ಜೆಡಿಎಸ್)
ಬೆಂಗಳೂರು ಕೇಂದ್ರ – ಪಿ.ಸಿ.ಮೋಹನ್.
ಶಿವಮೊಗ್ಗ- ಬಿ.ವೈ.ರಾಘವೇಂದ್ರ.
ಕೊಪ್ಪಳ- ಕರಡಿ ಸಂಗಣ್ಣ.
ವಿಯಪುರ-ರಮೇಶ ಜಿಗಜಿಣಗಿ.
ಕಲಬುರಗಿ- ಉಮೇಶ ಜಾಧವ್.
Election Churmuri ಧಾರವಾಡ – ಪ್ರಹ್ಲಾದ ಜೋಷಿ.
ಬಳ್ಳಾರಿ.-ಶ್ರೀರಾಮುಲು.
ಹಾವೇರಿ- ಬಸವರಾಜ ಬೊಮ್ಮಾಯಿ.
ಚಿಕ್ಕೋಡಿ- ಅಣ್ಣಾ ಸಾಹೇಬ ಜೊಲ್ಲೆ.
ಬಾಗಲಕೋಟೆ – ಪಿ.ಸಿ.ಗದ್ದಿಗೌಡರ್.
ಬೆಳಗಾವಿ- ಜಗದೀಶ್ ಶೆಟ್ಟರ್
ಇವರ ಹೆಸರುಗಳು ಇವೆ ಎಂದು ತಿಳಿದು ಬಂದಿದೆ.
ಸದ್ಯ ಮೊದಲ ಪಟ್ಟಿಯಲ್ಲಿ ಜೆಡಿಎಸ್ ಗೆ ಎರಡು ಸೀಟ್ ಬಿಟ್ಟುಕೊಡಲಾಗಿದೆಯಂತೆ.
ಇನ್ನೂ ಎಲ್ಲೆಲ್ಲಿ,ಯಾವಯಾವ ಕ್ಷೇತ್ರಗಳ್ಳಿ ಅಭ್ಯರ್ಥಿಗಳು ದಿಢೀರನೆ ಬದಲಾದರೂ ಆಗಬಹುದು.
ಇಷ್ಟು ಇವತ್ತಿನ ಚುನಾವಣಾ ತಾಜಾ ಸುದ್ದಿ..

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Maharashtra Election ‘ಮಹಾ’ ಚುನಾವಣೆ.ಮತ್ತೆ ತಲೆಯೆತ್ತಿದ ” ಮಹಾಯುತಿ” ಮಕಾಡೆ ಬಿದ್ದಅಘಾಡಿ

Maharashtra Election ದೇಶದ ಗಮನ ಸೆಳೆದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ...

Police Department ರಾಜ್ಯದ ಜೈಲುಗಳ ವಾರ್ಡನ್ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೇಮಕವಾಗಲು ಆಸಕ್ತ ಮಾಜಿ ಸೈನಿಕರು ಅರ್ಜಿ ಸಲ್ಲಿಸಲು ಅವಕಾಶ

Police Department ಕರ್ನಾಟಕ ರಾಜ್ಯಾದ್ಯಾಂತ ಇರುವ ಜೈಲುಗಳಲ್ಲಿ ವಾರ್ಡನ್‌ ಹುದ್ದೆಗೆ ಗುತ್ತಿಗೆ...

DC Shivamogga ಶಿವಮೊಗ್ಗ ಜಿಲ್ಲೆಯಲ್ಲಿ ಚುನಾವಣಾ ಜನಸಂಖ್ಯೆ ಅನುಪಾತದ ಬಗ್ಗೆ ಡಾ.ತ್ರಿಲೋಕ ಚಂದ್ರ ಅವರಿಂದ ಪರಿಶೀಲನೆ

DC Shivamogga ಶಿವಮೊಗ್ಗ ಜಿಲ್ಲೆಯಲ್ಲಿ ಚುನಾವಣಾ ಜನಸಂಖ್ಯೆ ಅನುಪಾತ (ಇಪಿ ರೇಷಿಯೋ)...