International Women’s Day ಭಾವಸಾರ್ ವಿಜನ್ ಇಂಡಿಯಾ ಶಿವಮೊಗ್ಗ ಪ್ರೇರಣಾದಿಂದ ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಜಿಲ್ಲಾ ಕಾರಾಗೃಹ, ಶಿವಮೊಗ್ಗದ ಮಹಿಳಾ ಬಂದಿಖಾನೆಯ ನಿವಾಸಿಗಳಿಗೆ ಸ್ವಾವಲಂಬಿ ಬದುಕು ಹಾಗೂ ಕೌಶಲ್ಯ ಭರಿತ ಜೀವನ ಕುರಿತು ಕಾರ್ಯಕ್ರಮ ಏರ್ಪಡಿಸಿದ್ದು , ಹಲವು ಆಟೋಟ ಸ್ಪರ್ಧೆಗಳನ್ನು ನಡೆಸಿ ಎಲ್ಲರಿಗೂ ಬಹುಮಾನ ಹಾಗೂ ಸಿಹಿ ವಿತರಿಸಿ, ಬಂದೀಖಾನೆಯ ಅಸಿಸ್ಟೆಂಟ್ ಜೈಲರ್ ಶಾಂತಮ್ಮ ನವರು ಹಾಗೂ ಮಹಿಳಾ ಸಿಬ್ಬಂದಿಗಳನ್ನು ಗೌರವಿಸಲಾಯಿತಿ.
ಜೀವನದ ಕೆಲವು ಸಂದರ್ಭಗಳಲ್ಲಿ ನಮಗರಿವಿಲ್ಲದೆ ಅಪರಾಧಗಳನ್ನು ಎಸಗಿ ಶಿಕ್ಷೆಗೆ ಒಳಪಡುತ್ತೇವೆ. ಆದರೆ ಈ ಅವಧಿಯ ದಿನಗಳನ್ನು ಬದುಕಿನ ಬದಲಾವಣೆಯ ಹಾದಿ ಎಂದು ಪರಿಗಣಿಸಿ, ಜೈಲ್ ನಿವಾಸಿಗಳಿಗೆ ವಿವಿಧ ಕೌಶಲ್ಯಗಳನ್ನು ಹಲವು ಎನ್.ಜಿ.ಓ. ಗಳಿಂದ ಏರ್ಪಡಿಸಿ ನಿವಾಸಿಗಳ ಮಾನಸಿಕ ಸ್ಥಿಮಿತ, ಏಕಾಗ್ರತೆ ಹಾಗೂ ಅವರ ಆರ್ಥಿಕ ಅಭಿವೃದ್ಧಿಗೂ ಸಹಕಾರ ನೀಡುವ ಹಲವು ಯೋಜನೆಗಳನ್ನು ಶಿವಮೊಗ್ಗ ಜಿಲ್ಲಾ ಬಂದಿಖಾನೆ ಅಳವಡಿಸಿರುವುದು ನಿಜಕ್ಕೂ ಅಭಿನಂದನೀಯ. ನೀಡುವ ಅವಕಾಶವನ್ನು ಸದುಪಯೋಗ ಮಾಡಿಕೊಂಡು, ಶಿಕ್ಷೆಯ ಅವಧಿ ಮುಗಿದು ಹೊರಬಂದ ನಂತರ ಗುಡಿ ಕೈಗಾರಿಕೆ,ಮಡಿಕೆ, ಕುಡಿಕೆ, ಹೂದಾನಿ, ಬಟ್ಟೆ ನೇಯ್ಗೆ, ಬ್ಯಾಗ್ ಹೆಣಿಕೆ, ಬ್ಯೂಟಿಪಾರ್ಲರ್, ವೇಷಭೂಷಣಗಳ ಮಾರಾಟ ಮಳಿಗೆ ಹೀಗೆ ಹಲವು ಕೌಶಲ್ಯ ಕಲೆಗಳ ಯೋಜನೆಗಳನ್ನು ಗೃಹ ಕೈಗಾರಿಕೆಗಳ ಮೂಲಕ ಅಳವಡಿಸಿಕೊಳ್ಳಿ. ವಿಶೇಷವಾಗಿ ಕೇಂದ್ರ ಮತ್ತು ರಾಜ್ಯ ಸರಕಾರ ಈ ಸಂಬಂಧ ನೀಡುವ ಸವಲತ್ತುಗಳನ್ನು ಬಳಸಿಕೊಂಡು ಸ್ವಾವಲಂಬಿ ಬದುಕಿನತ್ತ ಮುನ್ನಡೆಯಬಹುದು. ಇದೊಂದು ಪರಿವರ್ತನೆಯ ಆಲಯವೆಂದು ಭಾವಿಸಿ. ಬದುಕಿನ ಪುಟಗಳು ನಮ್ಮದು ಆ ಪುಟಗಳನ್ನು ಸುಂದರ, ಸಂಭ್ರಮ ಆಗಿಸಿಕೊಳ್ಳು ಜವಾಬ್ದಾರಿ ನಮ್ಮ ಹಣೆಬರಹ ರೂಪಿಸುವ ಹೊಣೆ ನಮ್ಮದೆ ಎಂಬ ಹಲವು ವಿಚಾರಗಳನ್ನು ಕಥೆಗಳ ಮೂಲಕ ವಿವರಿಸಿದರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀರಂಜಿನಿ ದತ್ತಾತ್ರಿ ಯವರು.
International Women’s Day ದೀಪ ಬೆಳಗಿ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡುತ್ತಾ ಬಟ್ಟೆನೇಯ್ಗೆ, ಮಣ್ಣಿನಿಂದ ವಸ್ತುಗಳ ತಯಾರಿಕೆ, ಹೂಗಿಡಗಳ ನರ್ಸರಿ, ಬುಟ್ಟಿ ಹೆಣೆಯುವುದು, ಪರಿಸರ ಸ್ನೇಹಿ ವಸ್ತುಗಳಿಂದ ನೂರಾರು ವಸ್ತುಗಳನ್ನು ತಯಾರಿಸುವ ಮೂಲಕ ಆರ್ಥಿಕ ಅಭಿವೃದ್ಧಿಗೆ ಅನುಕೂಲ ಮಾಡಿಕೊಳ್ಳುವ ಹಲವು ಯೋಜನೆಗಳನ್ನು ಬಳಸಿಕೊಂಡು ಸ್ವಾವಲಂಬಿ ಬದುಕನ್ನು ಮುನ್ನಡೆಸಲು ಸಿದ್ದರಾಗಿರಿ. ಆತ್ಮ ನಿರ್ಭರ ಭಾರತದ ಹಿರಿಮೆಗೆ ಸಹಕಾರಿಗಳಾಗಿರಿ, ಅತ್ಯುತ್ತಮ ಕೌಶಲ್ಯ ಕಲಿಕೆಗೂ ಅವಕಾಶ ನೀಡುವ ಈ ಸಮಯದ ಸದುಪಯೋಗ ಮಾಡಿಕೊಳ್ಳುವ ಧೃಡತೆ ನಿಮ್ಮೊಳಗಿರಲಿ ಎಂದು
ಶ್ರೀರಂಜಿನಿ ದತ್ತಾತ್ರಿ, ಲೇಖಕಿ , ರಾಜ್ಯ ಮಹಿಳಾ ಪ್ರತಿನಿಧಿ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು.
ಇವರು ಮುಖ್ಯ ಅತಿಥಿಗಳ ಮಾತುಗಳನಾಡಿದರು.
ಶಿವಮೊಗ್ಗ ಭಾವಸಾರ್ ವಿಜನ್ ಪ್ರೇರಣದ ಅಧ್ಯಕ್ಷರಾದ ಶ್ರೀಮತಿ ಉಮಾ ವೆಂಕಟೇಶ್ ರವರು ಕೌಶಲ್ಯ ಕಲಿಕೆ ಪ್ರತಿಯೊಬ್ಬರಲ್ಲು ಸಹಜವಾಗಿ ಇರುತದ್ದು ಅದನ್ನು ಅಳವಡಿಸಿಕೊಳ್ಳುವ ಚಿತ್ತ ಮತ್ತು ಆತ್ಮವಿಶ್ವಾಸ ನಾವು ಹೊಂದಬೇಕು ಎಂದರು. ಮನಸ್ಸಿದ್ದರೆ ಮಾರ್ಗ ಎಂದರಿತು ನಡೆಯಿರಿ ಎಂದರು.
ಕಾರ್ಯಕ್ರಮದ ಅಧ್ಯಕ್ಷೀಯ ನುಡಿಗಳನ್ನು ಮಹಿಳಾ ಬಂದಿಖಾನೆಯ ಅಸಿಸ್ಟೆಂಟ್ ಜೈಲರ್ ಶ್ರೀಮತಿ ಶಾಂತಾರವರು ನೆರವೇರಿಸಿ, ಸ್ವಾವಲಂಬಿ ಬದುಕಿಗೆ ಬೇಕಾದಷ್ಟು ಮಾರ್ಗಗಳನ್ನು ನಮ್ಮ ಬಂದೀಖಾನೆ ನಿತ್ಯ ಕಲಿಸುತ್ತಲೇ ಇದೆ. ಸಮಾಜಕ್ಕೆ, ಕುಟುಂಬಕ್ಕೆ ಆಧಾರವಾಗುವ ಜೀವನ ಕಲಿಕೆ ಹಾಗೂ ಆರ್ಥಿಕ ಸದೃಢ ಹೊಂದಲು ಬೇಕಾದ ಕೌಶಲ್ಯ ಕಲಿಕೆಗಳನ್ನು ಮತ್ತಷ್ಟು ಗಮನವಿಟ್ಟು ಕಲಿಯಿರಿ. ಜನಜೀವನ ದ ಪ್ರತಿ ಪುಟಗಳನ್ನು ಅತ್ಯುತ್ತಮ ಆಗಿಸಿಕೊಳ್ಳುವ ಜವಾಬ್ದಾರಿ ನಮ್ಮದೇ ಎಂದು ಹಿತ ನುಡಿದರು.
ಭಾವಸಾರ್ ವಿಜನ್ ಇಂಡಿಯಾ ಶಿವಮೊಗ್ಗ ಪ್ರೇರಣಾ.
ಕಾರ್ಯದರ್ಶಿ ಕವಿತ ಹರೀಶ್, ಸಹ ಕಾರ್ಯದರ್ಶಿ ಸುಮಾ ನವಲೆ, ನಿರ್ದೆಶಕರಾದ ಸ್ನೇಹ ಪ್ರಶಾಂತ್, ವೀಣಾ ನಂಜುಂಡ, ವನಿತಾ ನವಲೆ, ಕಾವ್ಯ ಅವಿನಾಶ್,
ಇಂದು ನವಲೆ, ದೀಪಿಕಾ ಹರೀಶ್ ಮೊದಲಾದವರು ವಿವಿಧ ಆಟೋಟ ಸ್ಪರ್ಧೆಗಳನ್ನು ಆಡಿಸಿ ಬಹುಮಾನ ಮತ್ತು ಸಿಹಿ ವಿತರಿಸಿದರು.
ಬಂದೀಖಾನೆಯ ಶಾಂತಾರವರು ಹಾಗೂ ಎಲ್ಲ ಸಿಬ್ಬಂದಿಯವರಿಗೂ ಮಹಿಳಾ ದಿನಾಚರಣೆ ಅಂಗವಾಗಿ ಗೌರವಿಸಲಾಯಿತು.