Saturday, November 23, 2024
Saturday, November 23, 2024

sangeet samarapan trust shimoga ಭಾವ ನವನವೀನ…ರಸಿಕರ ಮನಸೂರೆ ಮಾಡಿದ ಗಾಯಕಿ ಸುರೇಖಾ ಹೆಗಡೆ ಸ್ವರಧಾರೆ

Date:

sangeet samarapan trust shimoga ಶಿವಮೊಗ್ಗದ ಕುವೆಂಪು ರಂಗಮoದಿರದಲ್ಲಿ ನಗರದ ಸಂಗೀತ ಸಮರ್ಪಣ್ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದ್ದ ಸ್ವರಧಾರ-ಆವೃತ್ತಿ 2 ಕಾರ್ಯಕ್ರಮ ಕಿಕ್ಕಿರಿದು ಸೇರಿದ್ದ ಶ್ರೋತೃಗಳ ಮನ ತಣಿಸುವಲ್ಲಿ ಯಶಸ್ವಿಯಾಯಿತು.

ಸುಮಾರು 70 ಹಾಗೂ 90ರ ದಶಕಗಳ ನಡುವಿನ ಜನಪ್ರಿಯ ಹಾಗೂ ಸುಮಧುರ ಗೀತೆಗಳನ್ನು ಈ ಕಾರ್ಯಕ್ರಮದಲ್ಲಿ ಪ್ರಸ್ತುತ ಪಡಿಸಲಾಗಿತ್ತು.

ಹಾಡು ಹಳೆಯದಾದರೇನು ಭಾವ ನವನವೀನ ಎನ್ನುವಂತೆ, ಹಳೆಯ ಹಾಡುಗಳನು ಕೇವಲ ಮಧುರವಾಗಿದ್ದಷ್ಟೇ ಅಲ್ಲ, ಮಧುರ ನೆನಪುಗಳನ್ನೂ ತೆರೆದಿಟ್ಟಿದ್ದವು.

ಸಾಂಪ್ರದಾಯಿಕ ಗಣಪತಿ ಸ್ತುತಿಯೊಂದಿಗೆ ಆರಂಭಗೊ0ಡ ಈ ಕಾರ್ಯಕ್ರಮದಲ್ಲಿ ದ. ರಾ. ಬೇಂದ್ರೆಯವರ ಉತ್ತರ ದೃವದಿಂದ ದಕ್ಷಿಣ ದೃವಕೂ ಗೀತೆ ಆರಂಭ ಗೀತೆಯಾಗಿ ಕೇಳುಗರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿತ್ತು.

ನಂತರ ಒಂದಾದ ಮೇಲೊಂದರoತೆ ತೇಲಿ ಬಂದ ಗೀತೆಗಳ ಸಾಲಿನಲ್ಲಿ 1976ರಲ್ಲಿ ತೆರೆಕಂಡ ಡಾ. ರಾಜ್‌ಕುಮಾರ್-ಆರತಿ ಜೋಡಿಯ ರಾಜಾ ನನ್ನ ರಾಜಾ ಚಿತ್ರದ ನಿನದೇ ನೆನಪು, 1974ರಲ್ಲಿ ತೆರೆ ಕಂಡ ರಾಜೇಶ್ ಖನ್ನಾ, ಶರ್ಮಿಳಾ ಠಾಗೋರ್ ತಾರಾಗಣದ ಅಜನಭಿ ಚಿತ್ರ ಭೀಗಿ ಭೀಗಿ ರಾತೋಮೆ, 1978ರಲ್ಲಿ ತೆರೆಗೆ ಬಂದ ಡಾ. ರಾಜ್‌ಕುಮಾರ್-ಪದ್ಮಪ್ರಿಯಾ ತಾರಾಗಣದ ಆಪರೇಷನ್ ಡೈಮಂಡ್ ರಾಕೇಟ್ ಚಿತ್ರದ ಅಲ್ಲಿ ಇಲ್ಲಿ ನೋಡುವೆ ಏಕೆ, 1981ರಲ್ಲಿ ತೆರೆಗೆ ಬಂದ ರೇಖಾ ಅಭಿನಯದ ಉಮ್ರಾವ್ ಜಾನ್ ಸಿನಿಮಾದ ಇನ್ ಆಖೋಂಖಿ ಮಸ್ತಿಕೆ, 1972ರಲ್ಲಿ ಬಾಂಬೆ ಟು ಗೋವಾ ಚಿತ್ರದ ತೀರಾ ಜೋಷ್‌ನಲ್ಲಿ ಮೂಡಿ ಬಂದ ದೇಖಾ ನ ಹಾಯರೇ, 1996ರಲ್ಲಿ ತೆರೆಗೆ ಬಂದ ಶಿವರಾಜ್‌ಕುಮಾರ್, ಪ್ರೇಮಾರವರ ಅಭಿನಯದ ನಮ್ಮೂರ ಮಂದಾರ ಹೂವೇ ಚಿತ್ರದ ಹೇಳೇ ಕೋಗಿಲೇ, 1975ರಲ್ಲಿ ತೆರೆಗೆ ಬಂದ ಚಿತ್ರದ ಸಂಜೀವ್ ಕಮಾರ್, ಸುಚಿತ್ರಾಸೆನ್ ತಾರಾಗಣದ ಆಂಽ ಚಿತ್ರದ ತೆರೆ ಬೀನಾ ಜಿಂದಗೀ ಸೇ, 1987ರಲ್ಲಿ ತೆರೆಗೆ ಬಂದ ರವಿಚಂದ್ರನ್-ಖುಷ್ಬು ಜೋಡಿಯ ರಣಧೀರ ಚಿತ್ರದ ಮೀನಾಕ್ಷಿ ನಿನ್ನ ಕಣ್ಣ, 1969ಲ್ಲಿ ರಾಜೇಶ್ ಖನ್ನಾ, ಶರ್ಮಿಳಾ ಠಾಗೂರ್ ಜೋಡಿಯ ಆರಾಧನಾ ಚಿತ್ರದ ರೂಪ್ ತೇರಾ ಮಸ್ತಾನ, 1981ರಲ್ಲಿ ತೆರೆಗೆ ಬಂದ ಶಂಕರ್ ನಾಗ್, ಪದ್ಮ ರಾವ್ ಜೋಡಿಯ ಗೀತಾ ಚಿತ್ರದ ಏನೇ ಕೇಳು ಕೊಡುವೆ ನಿನಗೆ ನಾನೀಗ, 1984ರಲ್ಲಿ ತೆರೆಗೆ ಬಂದ ಕಾಶೀನಾಥ್, ಅಭಿನಯ ಜೋಡಿಯ ಅನುಭವ ಚಿತ್ರದ ಹೋದೆಯ ದೂರ ಓ ಜೊತೆಗಾರ, 1991ರಲ್ಲಿ ತೆರೆಗೆ ಬಂದ ವಿಷ್ಣುವರ್ಧನ್, ರೂಪಿಣಿ, ವಿನಯಾ ಪ್ರಸಾದ್ ತಾರಾಗಣದ ನೀನು ನಕ್ಕರೆ ಹಾಲು ಸಕ್ಕರೆ ಚಿತ್ರದ ಬಾರೆ ಸಂತೆಗೆ ಹೋಗೋಣ ಬಾ.., ಪ್ರೇಕ್ಷಕರ ಒತ್ತಾಸೆಯ ಮೇರೆಗೆ ಹಾಡಿದ 1969ರಲ್ಲಿ ತೆರೆಗೆ ಬಂದ ರಾಜೇಶ್ ಖನ್ನಾ, ಶರ್ಮಿಳಾ ಠಾಗೋರ್ ತಾರಾಗಣದ ಆರಾಧನಾ ಚಿತ್ರದ ಮೇರಿ ಸಪನೋಂಕಿ ರಾಣಿ.. 1981ರಲ್ಲಿ ತೆರೆಗೆ ಬಂದು ಅಂಬರೀಷ್‌ರವರಿಗೆ ತಾರಾಮೌಲ್ಯ ತಂದುಕೊಟ್ಟ ಅಂತ ಚಿತ್ರದ ನಾನು ಯಾರು, ಯಾವ ಊರು, 1993ರಲ್ಲಿ ತೆರೆಗೆ ಬಂದ ಡಾ. ರಾಜ್‌ಕುಮಾರ್ ನಾಯತ್ವದ ನಾಗಾಭರಣ ನಿರ್ದೇಶನದ ಆಕಸ್ಮಿಕ ಚಿತ್ರದ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಹಾಗೂ ಕೊನೆಯಲ್ಲಿ ಭಾವನಾತ್ಮಕವಾಗಿ ಜಿ.ಎಸ್. ಶಿವರುದ್ರಪ್ಪರವರ ರಚನೆಯ ಎದೆ ತುಂಬಿ ಹಾಡಿದೆನು ಇಂದು ನಾನು ಗೀತೆಗಳು ಭಾವಗೀತೆ ತೀವ್ರತರವಾದ ಭಾವಾಭಿವ್ಯಕ್ತಿಗೆ ಸಾಕ್ಷಿಯಾಗಿದ್ದವು.

sangeet samarapan trust shimoga ಕಾರ್ಯಕ್ರಮದ ಆಯೋಜಕಿ, ಪ್ರಸಿದ್ಧ ಗಾಯಕಿ ಸುರೇಖಾ ಹೆಗಡೆಯವರೊಂದಿಗೆ ಪ್ರಸಿದ್ಧ ಗಾಯಕರಾದ ಬೆಂಗಳೂರಿನ ಹ್ಯಾರಿಸ್, ಶಶಿಕಿರಣ್ ಈ ಸುಮಧುರ ಗೀತೆಗಳನ್ನು ಪ್ರಸ್ತುತ ಪಡಿಸಿದರು.

ಇವರಿಗೆ ಪಕ್ಕ ವಾದ್ಯದಲ್ಲಿ ಮೆಲ್ವಿನ್ ಲೀಮಾ, ಬಸವರಾಜ್ ರಾಣಿಬೆನ್ನೂರು, ರಾಮರಾವ್ ರಂಗಧೋಳ್, ವಿಠಲ್ ರಂಗಧೋಳ್, ಸಂದೀಶ್ ಹೊಸಪೇಟೆ ಪರಿಣಾಮಕಾರಿಯಾಗಿಯೇ ಸಹಕಾರ ನೀಡಿದ್ದರು.

ಸಮನ್ವಯ ಕಾಶಿ ಕಾರ್ಯಕ್ರಮವನ್ನು ನಿರೂಪಿಸಿದ್ದರು.

ಸುಮಧುರ ಗೀತೆಗಳ ಈ ಕಾರ್ಯಕ್ರಮವನ್ನು ಶಾಸಕ, ರಂಗಕರ್ಮಿ ಎಸ್. ಎನ್. ಚನ್ನಬಸಪ್ಪ ಉದ್ಘಾಟಿಸಿ, ಸಂದರ್ಭೋಚಿತವಾಗಿ ಮಾತನಾಡಿದರು.

ಕಲಾಪೋಷಕ ಲಕ್ಷ್ಮೀನಾರಾಯಣ ಕಾಶಿಯವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
ಅಧ್ಯಕ್ಷತೆಯನ್ನು ಸುರೇಖಾ ಹೆಗಡೆ ವಹಿಸಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Akhila Bharatiya Sahitya Parishad ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ “ರಾಜ್ಯೋತ್ಸವ ಕವಿಗೋಷ್ಠಿ”

Akhila Bharatiya Sahitya Parishad ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಕರ್ನಾಟಕ...

Mohare Hanumantharaya Award ಪ್ರಶಸ್ತಿ ಪುರಸ್ಕೃತ ಪತ್ರಕರ್ತ, ‘ಕ್ರಾಂತಿ ದೀಪ ‘ಮಂಜುನಾಥ್ ಅವರಿಗೆ ಸನ್ಮಾನ

Mohare Hanumantharaya Award ಪತ್ರಿಕೋದ್ಯಮದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾದ ಮೊಹರೆ ಹಣಮಂತರಾಯ...

MESCOM ನವೆಂಬರ್ 23 .ಹೊಳಲೂರು ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ

MESCOM ಹೊಳಲೂರು ಗ್ರಾಮದ 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ...

Rotary Club Shimoga ಪ್ರೌಢಾವಸ್ಥೆಯು ದೇಹದಲ್ಲಿ ಅನೇಕ ಬದಲಾವಣೆ ತರುತ್ತದೆ.ಅದನ್ನ ಗಮನಿಸಬೇಕು- ಡಾ.ಮೋಕ್ಷಾ

Rotary Club Shimoga ರೋಟರಿ ಸಂಸ್ಥೆಯು ನಿಸ್ವಾರ್ಥವಾಗಿ ವಿಶ್ವದ ಎಲ್ಲ ಭಾಗಗಳಲ್ಲಿ...