KLive Special Article ರಾಜ್ಯಸಭೆಗೆ ನಡೆದ ಚುನಾವಣೆ ಒಂದಿಷ್ಟು ಆಸಕ್ತಿಯ ವಿಚಾರಗಳನ್ನ ಬಿಂಬಿಸುತ್ತದೆ.
ಕಾಂಗ್ರೆಸ್ ನಲ್ಲಿದ್ದು ಮತ್ತೆ ಬಿಜೆಪಿ ಗೆ ಬಂದು ಎಸ್.ಟಿ.ಸೋಮಶೇಖರ್ ಸಚಿವ ಸ್ಥಾನ ಅನುಭವಿಸಿದ್ದರು.
ಹಾಗೆಯೇ ಶಾಸಕ ಶಿವರಾಮ್ ಹೆಬ್ಬಾರ್ ಅವರೂ ಕೂಡ ಸಚಿವರಾಗಿದ್ದರು.
ಗಾಲಿ ಜನಾರ್ಧನ ರೆಡ್ಡಿ ಅವರು ಕಟ್ಟಾ ಕಾಂಗ್ರೆಸ್ ವಿರೋಧಿ ಯಾಗಿದ್ದವರು ಮೆದು ಧೋರಣೆ ತಾಳಿದ್ದಾರೆ.
ಕೊನೇ ತನಕ ಬಿಜೆಪಿ ಪಾಳೆಯದಲ್ಲಿದ್ದರು ಆಮೇಲೆ ಕೈ ಕೊಟ್ಟರು ಎಂದು ವಿಪಕ್ಷ ನಾಯಕ ಆರ್. ಅಶೋಕ್ ಪ್ರತಿಕ್ರಿಯೆ ನೀಡಿದ್ದಾರೆ.
ಇನ್ನು ಐದನೇ ಅಭ್ಯರ್ಥಿಯಾಗಿ ಕುಪೇಂದ್ರರೆಡ್ಡಿ ಅವರ ಉಮೇದುವಾರಿಕೆ ಕೇವಲ ಜೆಡಿಎಸ್ ಶಾಸಕರ ಮತಗಳ ಚದುರುವಿಕೆ ತಪ್ಪಿಸಲು
ಅಷ್ಟೆ.
ಆದರೆ ಕಾಂಗ್ರೆಸ್ ಮತ್ತೆ ಗಟ್ಟಿಯಾಗಿ ನಿಂತಿರುವ ಸಂದೇಶ ನೀಡಿದೆ.
ವಿರೋಧ ಪಕ್ಷಗಳು ಇನ್ಮೂ ತಮ್ಮ ವಾದಗಳ ವಾಸ್ತವ ನೆಲೆಗಟ್ಟಿನಲ್ಲೇ ನಿಂತಿಲ್ಲ . ಬಹಳ ತೆಳುವಾದ ವಿಚಾರಗಳನ್ನೇ ದೊಡ್ಡದು ಮಾಡಲು ಉತ್ಸುಕತೆ ತೋರುತ್ತಿವೆ.
ಇನ್ನು ನಾಸಿರ್ ಹುಸೇನ್ ರಾಜ್ಯಸಭೆಗೆ ಆಯ್ಕೆಯಾದ ಸುದ್ದಿ ಕೇಳುತ್ತಲೇ ಬೆಂಬಲಿಗರು
ಪಾಕಿಸ್ತಾನ್ ಜಿಂದಾಬಾದ್ ಅಂತ ಕೂಗಿರುವುದೂ ನಮ್ಮ
ರಾಜಕೀಯ ನಾಯಕರ ಬುದ್ಧಿಮತ್ತೆಯನ್ನು ಕೆಣಕುವಂತಿದೆ.
ಅಸಮಾಧಾನ ಬಿಜೆಪಿ ಮತ್ತು ಕಾಂಗ್ರೆಸ್ ಅಷ್ಟೇಕೆ ಜೆಡಿಎಸ್ ನಲ್ಲೂ ಇದೆ ಎಂಬುದು ನಿರ್ವಿವಾದ.
ಒಟ್ಟಿನಲ್ಲಿ ರಾಜಕೀಯ
ನೈತಿಕತೆ ಜಾರುತ್ತಿರುವ
ಬಗ್ಗೆ ಪ್ರಬಲವಾದ ಮಾದರಿಗಳು ವರ್ತಮಾನದಲ್ಲಿ ಸಿಗುತ್ತಿವೆ. ಅತ್ತ ಉತ್ತರಪ್ರದೇಶ, ಹಿಮಾಚಲ ಪ್ರದೇಶದಲ್ಲೂ ಇಂತಹ ಅಚ್ಚರಿ ನಡೆದಿದೆ.
ಎರಡೂ ರಾಜ್ಯಗಳ
11 ಸ್ಥಾನಗಳ ಪೈಕಿ ಬಿಜೆಪಿ 9 ಸ್ಥಾನಗಳಿಸಿತು.
ದುರಾದೃಷ್ಟವೆಂದರೆ ಕಾಂಗ್ರೆಸ್ ನ ಮನು ಸಿಂಘ್ವಿ ಮತ್ತು ಬಿಜೆಪಿ ಹರ್ಷ ಮಹಾಜನ್ ತಲಾ 34 ಮತ ಪಡೆದರು. ಸಮವಾದ ಕಾರಣ ಟಾಸ್ ಹಾಕಲಾಯಿತು.
ಬಿಜೆಪಿ ಅಭ್ಯರ್ಥಿ ಗೆದ್ದರು.
KLive Special Article ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷ 108 ಶಾಸಕರ ಬಲಹೊಂದಿದೆ. ಮೂರು ಸ್ಥಾನಗಳನ್ನ ಸುಲಭವಾಗಿ ಗೆಲ್ಲಲು ಸಾಧ್ಯವಿತ್ತು.
ಆದರೆ 7 ಸಮಾಜವಾದಿ ಪಕ್ಷದ ಶಾಸಕರ ಅಡ್ಡ ಮತದಾನದ ಕಾರಣ ಮೂರನೇ ಅಭ್ಯರ್ಥಿ ಸೋಲು ಕಂಡಿದ್ದಾರೆ.
ಅಡ್ಡ ಮತದಾನ ರಾಜಕೀಯ ನೈತಿಕತೆಯನ್ನೇ ಪ್ರಶ್ನೆ ಮಾಡುತ್ತದೆಯೆ? ಇಲ್ಲವೆ? ಮುಂಬರುವ ದಿನಗಳಲ್ಲಿ ಪರಿಣಿತರು
ಈ ಬಗ್ಗೆ ಟೀಕೆ ಮಾಡಬೇಕಷ್ಟೆ.