Amrit Bharat Station scheme ಆಧುನೀಕರಿಸಿದ ಮತ್ತು ವೇಗವಾದ ರೈಲ್ವೆ ಮೋದಿ ಸರ್ಕಾರದ ಗ್ಯಾರಂಟಿ ಅಮೃತ ಭಾರತ ಸ್ಟೇಷನ್ ಯೋಜನೆಯಡಿಯಲ್ಲಿ ರೂ. 41,000 ಕೋಟಿ ವೆಚ್ಚದಲ್ಲಿ 554 ರೈಲ್ವೆ ನಿಲ್ದಾಣಗಳ ಪುನರಾಭಿವೃದ್ಧಿ ಮತ್ತು 1500 ರಸ್ತೆಯ ಮೇಲ್ ಸೇತುವೆ / ಕೆಳಸೇತುವೆಗಳ ಶಿಲಾನ್ಯಾಸ / ಉದ್ಘಾಟನೆ / ರಾಷ್ಟ್ರಕ್ಕೆ ಸಮರ್ಪಣೆ,31 ರೈಲ್ವೆ ನಿಲ್ದಾಣಗಳ ಪುನರಾಭಿವೃದ್ಧಿ,
ಕರ್ನಾಟಕದಾದ್ಯಂತ 24 ರಸ್ತೆ ಮೇಲ್ಸೇತುವೆ / ಕೆಳ ಸೇತುವೆಗಳ ನಿರ್ಮಾಣ ಕಾಮಗಾರಿಗೆ, ರೈಲ್ವೆ ನಿಲ್ದಾಣ ಅಭಿವೃದ್ಧಿ ಕಾಮಗಾರಿಗೆ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರು ವರ್ಚುಯಲ್ ಮೂಲಕ ನೇರವೇರಿಸಿದರು.
ಶಿವಮೊಗ್ಗ ರೈಲ್ವೇ ನಿಲ್ದಾಣ ಅಭಿವೃದ್ಧಿಗೆ 24.37ಕೋಟಿ, ಸಾಗರ ರೈಲ್ವೆ ನಿಲ್ದಾಣ ಅಭಿವೃದ್ಧಿಗೆ 26.44 ಕೋಟಿ, ತಾಳಗುಪ್ಪ ರೈಲ್ವೆ ನಿಲ್ದಾಣ ಅಭಿವೃದ್ಧಿಗೆ 27.86 ಕೋಟಿ, ಅರಸಾಳು ರಸ್ತೆ ಮೇಲ್ ಸೇತುವೆ ಅಭಿವೃದ್ಧಿಗೆ 2.17 ಕೋಟಿ ಅನುದಾನ ನೀಡಿದೆ. ವಿಧಾನ ಪರಿಷತ್ ಶಾಸಕರು ಮತ್ತು ರಾಜ್ಯ ಬಿಜೆಪಿ ಕಾರ್ಯದರ್ಶಿಗಳಾದ ಶ್ರೀ ಡಿ ಎಸ್ ಅರುಣ್ ಅವರು ಅರಸಾಳು ರೈಲ್ವೇ ನಿಲ್ದಾಣದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿದರು.
Amrit Bharat Station scheme ಮುಖಂಡರಾದ ಅರ್ ಟಿ ಗೋಪಾಲ್, ನಾಗಾರ್ಜುನ ಸ್ವಾಮಿ, ರಾಜು, ದೇವರಾಜ್, ರಿಪ್ಪನಪೇಟೆ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಅರಸಾಳು ಗ್ರಾಮ ಪಂಚಾಯಿತಿ ಅಧ್ಯಕ್ಷರು ,ಸದಸ್ಯರು ಕೆಂಚನಾಲ ಗ್ರಾಮ ಪಂಚಾಯಿತಿ ಅಧ್ಯಕ್ಷರು ಸದಸ್ಯರು, ಸ್ಥಳಿಯರು ಗ್ರಾಮಸ್ಥರು, ರೈಲ್ವೆ ಅಧಿಕಾರಿಗಳು, ಉಪಸ್ಥಿತರಿದ್ದರು.