Cricket Match ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯ ರಾಂಚಿಯಲ್ಲಿ ನಡೆಯುತ್ತಿದ್ದು ಈ ಪಂದ್ಯದಲ್ಲಿ ಟೀಂ ಇಂಡಿಯಾದ ದಿಗ್ಗಜ ಸ್ಪಿನ್ ಬೌಲರ್ ಆರ್ ಅಶ್ವಿನ್ ಇತಿಹಾಸ ಸೃಷ್ಟಿಸಿದ್ದಾರೆ.
ಈ ಹಿಂದೆ ಯಾವುದೇ ಬೌಲರ್ ಮಾಡದ ಸಾಧನೆಯನ್ನು ಅವರು ಈ ಬಾರಿ ಭಾರತದಲ್ಲಿ ಮಾಡಿದ್ದು ಖ್ಯಾತಿ ಮಾಜಿ ಸ್ಪಿನ್ನರ್ ಅನಿಲ್ ಕುಂಬ್ಳೆ ಅವರನ್ನು ಹಿಂದಿಕ್ಕಿದ್ದಾರೆ.
ಆರ್ ಅಶ್ವಿನ್ ತಮ್ಮ ಹೆಸರಿನಲ್ಲಿ ಈ ದಾಖಲೆ ಮಾಡಿದ್ದಾರೆ
ರಾಂಚಿ ಟೆಸ್ಟ್ ಪಂದ್ಯದ uಎರಡನೇ ಇನ್ನಿಂಗ್ಸ್‌ನಲ್ಲಿ 2 ವಿಕೆಟ್ ಪಡೆದ ನಂತರ ಆರ್ ಅಶ್ವಿನ್ ಭಾರತದ ನೆಲದಲ್ಲಿ 351 ಟೆಸ್ಟ್ ವಿಕೆಟ್‌ಗಳನ್ನು ಪೂರ್ಣಗೊಳಿಸಿದ್ದಾರೆ. ಇದರೊಂದಿಗೆ ಭಾರತದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ. ಈ ವಿಚಾರದಲ್ಲಿ ಅವರು ಅನಿಲ್ ಕುಂಬ್ಳೆ ಅವರನ್ನು ಹಿಂದಿಕ್ಕಿದ್ದಾರೆ. ಅನಿಲ್ ಕುಂಬ್ಳೆ ಭಾರತದಲ್ಲಿ 350 ಟೆಸ್ಟ್ ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಆದರೆ ಆರ್ ಅಶ್ವಿನ್ 351 ವಿಕೆಟ್ ಪಡೆದಿದ್ದಾರೆ. ಇದರೊಂದಿಗೆ 350ಕ್ಕೂ ಹೆಚ್ಚು ಟೆಸ್ಟ್ ವಿಕೆಟ್ ಪಡೆದ ಭಾರತದ ಮೊದಲ ಬೌಲರ್ ಎನಿಸಿಕೊಂಡಿದ್ದಾರೆ.
Cricket Match ಭಾರತದಲ್ಲಿ ಅತಿ ಹೆಚ್ಚು ಟೆಸ್ಟ್ ವಿಕೆಟ್ ಪಡೆದ ಬೌಲರ್ ಗಳು
*ಆರ್ ಅಶ್ವಿನ್ – 351 ವಿಕೆಟ್
*ಅನಿಲ್ ಕುಂಬ್ಳೆ – 350 ವಿಕೆಟ್
*ಹರ್ಭಜನ್ ಸಿಂಗ್ – 265 ವಿಕೆಟ್
*ಕಪಿಲ್ ದೇವ್ – 219 ವಿಕೆಟ್
*ರವೀಂದ್ರ ಜಡೇಜಾ – 210 ವಿಕೆಟ್