Sunday, November 24, 2024
Sunday, November 24, 2024

KLive Special Article ಸಂವಿಧಾನಕ್ಕೆ ವಚನಸಾಹಿತ್ಯದ ಹಿನ್ನೆಲೆಯೂ ಕಾಣಬಹುದು-ಡಾ.ಆರ್.ನಾಗರಾಜು

Date:

KLive Special Article  ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರ ಪ್ರಜೆಗಳೇ ಆಳುವ ಸರಕಾರವು ಪ್ರಜಾಪ್ರಭುತ್ವ ವಾಗಿರುತ್ತದೆ. ಈ ಪ್ರಜಾಪ್ರಭುತ್ವದ ಆಶಯಗಳು ಸಂವಿಧಾನದಲ್ಲಿ ಅಡಗಿರುತ್ತವೆ. ಇಂತಹ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಪರಿಕಲ್ಪನೆಗಳನ್ನು ನಾವು 12 ನೇ ಶತಮಾನದಲ್ಲಿ ಕ್ರಾಂತಿ ಉಂಟುಮಾಡಿದ ವಚನ ಚಳವಳಿಯಲ್ಲಿ ಹಾಗೂ ವಚನ ಸಾಹಿತ್ಯದಲ್ಲಿ ಕಾಣಬಹುದು. ವಚನ ಚಳವಳಿ ವಿಶ್ವದ ಶ್ರೇಷ್ಠ ಪ್ರಜಾಪ್ರಭುತ್ವವಾಗಿದೆ.

ವಚನ ಸಾಹಿತ್ಯ ಶ್ರೇಷ್ಠ ಸಂವಿಧಾನವಾಗಿದೆ.
ವಚನ ಮತ್ತು ಸಂವಿಧಾನ ಒಂದೇ. ಅವು ಬೇರೆ ಬೇರೆ ಅಲ್ಲ. ವಚನಗಳಲ್ಲಿರುವ ಅಂಶಗಳು ಸಂವಿಧಾನದಲ್ಲಿವೆ. ದೇಶದ ಪ್ರಗತಿಯಲ್ಲಿ ವಚನ ಸಾಹಿತ್ಯ ಮತ್ತು ಸಂವಿಧಾನದ ತತ್ವಗಳು ಪ್ರಮುಖ ಪಾತ್ರ ವಹಿಸುತ್ತವೆ. ದೇಶದ ಸಂವಿಧಾನವು ಪ್ರತಿಯೊಬ್ಬ ವ್ಯಕ್ತಿಗೂ ಸಮಾನತೆಯ ಸ್ವಾತಂತ್ರ್ಯ ನೀಡಿದೆ. ವಚನಗಳು ಬದುಕಿನ ಸಾರ್ಥಕತೆಯ ದಾರಿದೀಪಗಳಾಗಿವೆ. ವಚನ ಚಳುವಳಿಯ ಮುಂಚೂಣಿಯಲ್ಲಿದ್ದ ಬಸವಣ್ಣ ಒಳ್ಳೆಯ ಅರ್ಥಶಾಸ್ತ್ರಗ್ನನಾಗಿದ್ದನು. ಸಾಮಾಜಿಕ ನ್ಯಾಯ ಮತ್ತು ಮಾನವ ಹಕ್ಕುಗಳ ಪ್ರತಿಪಾದಕ ನಾಗಿದ್ದನು.ಇವನನ್ನುಪ್ರಜಾಪ್ರಭುತ್ವದ ಪಿತಾಮಹ ಎಂದು ಸಹ ಕರೆಯಬಹುದು.

ಸಂವಿಧಾನ ನಮ್ಮ ದೇಶದ ಗ್ರಂಥ. “ಭಾರತವೇ ಧರ್ಮ.ಸಂವಿಧಾನವೇ ಧರ್ಮಗ್ರಂಥ” ಎಂದು ನಾವು ಒಪ್ಪಿಕೊಂಡು ನಡೆಯುತ್ತಿದ್ದೇವೆ.
ವಚನಸಾಹಿತ್ಯವು ಸಂವಿಧಾನದಂತೆ ಸರ್ವರಿಗೂ ಸಮಬಾಳು ಸಮಪಾಲು ಎಂಬ ತತ್ತ್ವವನ್ನು ನೀಡುತ್ತದೆ. ಸರ್ವಸಮಾನತೆಯ ಸಮಾಜ ನಿರ್ಮಾಣವೇ ವಚನ ಸಾಹಿತ್ಯದ ಪ್ರಮುಖ ತತ್ವವಾಗಿದೆ. ಇದರಿಂದಾಗಿಯೇ 9೦೦ ವರ್ಷಗಳು ಕಳೆದರೂ ವಚನ ಸಾಹಿತ್ಯ ಜೀವಂತವಾಗಿದೆ.

ಹಾಗಾಗಿ ಬಸವಣ್ಣನವರ ದೃಷ್ಟಿಯಲ್ಲಿ ಪ್ರಜಾಪ್ರಭುತ್ವ ಅಂದರೆ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಜನಸಾಮಾನ್ಯರಿಗೆ ಮುಕ್ತವಾಗಿ ಸಿಗಬೇಕು ಎಂಬ ನಿಲುವು ಅವರದಾಗಿತ್ತು.ಬಸವಣ್ಣನವರು ಕಾಯಕ ನಿಷ್ಠೆಗೆ ಮಾನವೀಯತೆಗೆ ಭದ್ರ ಬುನಾದಿ ಹಾಕಬೇಕೆಂದು ನಂಬಿ ಅದರಂತೆ ನಡೆದವರು ಹಾಗೆ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಗಳ ಸೇವೆಗಳು ಅನುಭವ ಮಂಟಪದ ಅಡಿಯಲ್ಲಿ ಸಾಗಿದವು.

ಶರಣರೆಲ್ಲರೂ ಸೇರಿ ಆದರ್ಶ ಸಮಾನತೆಯಸಮಾಜವನ್ನು ಕಟ್ಟಿದರು. ವಚನ ಸಾಹಿತ್ಯವನ್ನುರಚಿಸಿದರು ಹಾಗೂ ಬಸವಣ್ಣನವರು, ಅವರ ಆತ್ಮ ಬಂಧ ಅನುಭವದ ವೈಜ್ಞಾನಿಕ ಮನೋ ಧರ್ಮದ ದೃಷ್ಟಿಯಿಂದ ಲಿಂಗಾಯತ ಧರ್ಮವನ್ನು ಸ್ಥಾಪಿಸಿ ಬೆಳೆಸಿ ವಚನಗಳನ್ನು ರಚಿಸಿ ವಚನ ಚಳವಳಿಯನ್ನು ರೂಪಿಸಿ ಇಂದಿನ ಪೀಳಿಗೆಗೆ ಬಿಟ್ಟು ಹೋಗಿದ್ದಾರೆ.
12 ನೇ ಶತಮಾನದ ಬಸವಾದಿಶರಣರು ರಚಿಸಿದ ವಚನಗಳಲ್ಲಿ ಇಂದಿನ 21 ನೇ ಶತಮಾನದ ವಿಶ್ವಸಂಸ್ಥೆ ಘೋಷಿಸಿದ ಎಲ್ಲಾ ಮಾನವ ಹಕ್ಕುಗಳು ಎಲ್ಲಾ ವಿಚಾರಗಳು ಸೇರಿವೆ ಸ್ಥಾವರಲಿಂಗಕ್ಕೆ ಪರ್ಯಾಯವಾಗಿ ಇಷ್ಟಲಿಂಗ. ಶಿವಾಲಯಕ್ಕೆ ಪರ್ಯಾಯವಾಗಿ ಅನುಭವ ಮಂಟಪ. ದಾನಕ್ಕೆ ಪರ್ಯಾಯವಾಗಿ ದಾಸೋಹ. ಕರ್ಮ ಸಿದ್ಧಾಂತ ಕ್ಕೆ ಪರ್ಯಾಯವಾಗಿ ಕಾಯಕ ಸಿದ್ಧಾಂತ.

ಹೀಗೆ ಎಲ್ಲಾ ರೀತಿಯಿಂದಲೂ ಬಸವಣ್ಣನವರು ಪ್ರಜಾಪ್ರಭುತ್ವದಮೌಲ್ಯಗಳನ್ನು ಎತ್ತಿ ಹಿಡಿದು ಕೊಳ್ಳುವುದರ ಮೂಲಕ ಬದುಕಿನುದ್ದಕ್ಕೂ ಚ್ಯುತಿ ಬರದಂತೆ ಕಾಪಾಡಿಕೊಂಡು ಬಂದಿದ್ದರು. ಇದನ್ನು ನಾವೆಲ್ಲರೂ ಉಳಿಸಿಕೊಂಡು ಬೆಳೆಸಿಕೊಂಡು ಹೋಗುವ ಹೊಣೆಗಾರಿಕೆ ಪ್ರತಿಯೊಬ್ಬ ದೇಶವಾಸಿಗಳ ಮೇಲಿದೆ ಎಂದರೆ ತಪ್ಪಾಗಲಾರದು. ಇಂತಹ ಪ್ರಜಾಪ್ರಭುತ್ವದ ಮೂಲ ಆಶಯ ಗಳನ್ನು ಸೃಷ್ಟಿಸಿ ಬೆಳೆಸಿ ಪೋಷಿಸಿದ ಕೀರ್ತಿ ವಚನ ಚಳವಳಿಗಿದೆ. ಪ್ರಜಾಪ್ರಭುತ್ವದ ತತ್ತ್ವಗಳಾದ ಧಾರ್ಮಿಕ ಸಮಾನತೆ ಸ್ತ್ರೀ ಸಮಾನತೆ ನೈತಿಕ ಸಮಾನತೆ ಆರ್ಥಿಕ ಸಮಾನತೆ ಶೈಕ್ಷಣಿಕ ಸಮಾನತೆ ರಾಜಕೀಯ ಸಮಾನತೆ ಇನ್ನೂ ಮುಂತಾದ ಮಾನವೀಯ ಮೌಲ್ಯಗಳುಳ್ಳ ಸಮಾನತೆಯ ತತ್ತ್ವಗಳನ್ನು ಬಸವಾದಿ ಶರಣರು ಆ ಕಾಲದಲ್ಲೇಜನಮಾನಸದಲ್ಲಿ ಬಿತ್ತಿದ್ದರು ಕರ್ನಾಟಕದ ಇತಿಹಾಸದಲ್ಲಿ ಹನ್ನೆರಡನೆಯ ಶತಮಾನ ಒಂದು ವಿಶಿಷ್ಟವಾದ ಕಾಲಘಟ್ಟ.ಜಡ್ಡು ಹಿಡಿದಿದ್ದ ಸಮಾಜಕ್ಕೆ ವೈಚಾರಿಕ ಸ್ಪರ್ಶ ನೀಡುವ ಮೂಲಕ ಹೊಸ ಸಮಾಜದ ಸೃಷ್ಟಿಯ ಕನಸನ್ನು ಕಂಡಂತಹ ಶರಣರು ಬಸವಣ್ಣನವರ ನೇತೃತ್ವದಲ್ಲಿ ನಡೆಸಿದಂತಹ ಕ್ರಾಂತಿ ಪರಿಪೂರ್ಣವಾದುದು ಬಸವಣ್ಣನವರಸಾರಥ್ಯದಲ್ಲಿ ನಡೆದ ಸುಧಾರಣೆಯ ಪ್ರಯತ್ನ ಸಾಮಾಜಿಕ ಚಳವಳಿಯಾಗಿರೂಪುಗೊಂಡು ಸಾಮಾನ್ಯ ಬದುಕಿನ ಎಲ್ಲಾ ಸ್ತರಗಳುಚಳುವಳಿಯ ಭಾಗವಾಗಿದ್ದು ಶರಣರ ಪೂರ್ಣ ದೃಷ್ಟಿಯಸಂಕೇತ.ಜ್ಯಾತ್ಯಾತೀತ ಸಮಾಜದ ಕನಸು ಬಸವಣ್ಣನವರದ್ದಾಗಿತ್ತು.
ಏಕೆಂದರೆ ಆ ಕಾಲದ ಸಮಾಜದಲ್ಲಿ ನಡೆಯುತ್ತಿದ್ದ ಶೋಷಣೆ ಮಹಿಳೆಯರ ಮೇಲೆ ನಡೆಯುತ್ತಿದ್ದ ಕ್ರೌರ್ಯ ಇವೆಲ್ಲವನ್ನೂ ಘಾಸಿಗೊಳಿಸಿದ್ದವು.ಈ ಎಲ್ಲವನ್ನು ಅರಿತ ಬಸವಣ್ಣನವರು ಇಂತಹ ಬದಲಾವಣೆಗೆ ಬರಹವೇ ಮುಖ್ಯವೆಂದು ಅರಿತು ಎಲ್ಲಾ ಜಾತಿಯ ಜನರನ್ನು ಒಟ್ಟುಗೂಡಿಸಿ ಅವರನ್ನು ಒಂದೇ ವೇದಿಕೆಯಲ್ಲಿ ತಂದು ಶರಣರು ಎಂಬ ಮಾನವ ಧರ್ಮದ ಅಡಿಯಲ್ಲಿ ಕೂಡಿಸಿ ಬರಹದ ಮೂಲಕ ಬದಲಾವಣೆ ಮಾಡಲು ಬಯಸಿದರು.ಅದರಲ್ಲಿಯಶಸ್ವಿಯಾದರು. ಬರಹವೇ ಬದಲಾವಣೆಗೆ ನಾಂದಿಯಾಯಿತು ಚಳವಳಿಯಾಗಿ ರೂಪುಗೊಂಡು ಸಮಾಜ ಬದಲಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಿತು.
ಆದರೆ ಈಗಿನ ಸಮಾನತೆ ಕೇವಲ ನೆಪಮಾತ್ರಕ್ಕೆ ಇದೆ ಅಂದರೆ ಲೋಕತಂತ್ರಕ್ಕೆ ಮಾತ್ರ ಸೀಮಿತವಾಗಿದೆ. ಎನ್ನುವುದಂತೂ ಸತ್ಯ ಹಾಗಾಗಿ ಲೋಕ ತಂತ್ರವೂ ಸ್ವತಂತ್ರವಾಗಿ ನಿಷ್ಪಕ್ಷಪಾತವಾಗಿ ಕೆಲಸ ಮಾಡಲು ವಚನ ಸಾಹಿತ್ಯ ಕಾಲದ ಅನುಭವ ಮಂಟಪ ಮತ್ತು ಶೂನ್ಯ ಸಿಂಹಾಸನದ ಆಶಯಗಳುಳ್ಳ ಪ್ರಜಾಪ್ರಭುತ್ವದಿಂದ ಸಾಧ್ಯ ಎಂದು ಹೇಳಬಹುದು.ಈ ಸನ್ನಿವೇಶವು ದೇಶಕ್ಕೆ ಒಳ್ಳೆಯ ಭವಿಷ್ಯವನ್ನು ತಂದುಕೊಡುತ್ತದೆ ಎಂದು ತಿಳಿದುಕೊಂಡು ನಡೆದರೆ ಅದೊಂದು ಉತ್ತಮ ಹೆಜ್ಜೆ ಎನ್ನಬಹುದು ಹಾಗೆ ಬಸವಣ್ಣನವರು ಕಲ್ಯಾಣದಲ್ಲಿ ಮಾಡಿದ ಎಲ್ಲ ಪ್ರಬಲ ಪ್ರಜಾಪ್ರಭುತ್ವ ಪ್ರಯೋಗಗಳಲ್ಲಿ ಬಹಳಷ್ಟು ಪ್ರಯೋಗಗಳು, ಇಂದಿನ ಶತಮಾನದ ಜಗತ್ತಿನಲ್ಲಿ ನಡೆದ ಮೊದಲ ಪ್ರಯೋಗಗಳೇ ಆಗಿವೆ.

ಬಸವಣ್ಣನವರು ಎಲ್ಲಾ ಸಮಾಜಮುಖಿ ಸೇವೆಗಳ ಕಾರ್ಯಕ್ಕೆ ಪರ್ಯಾಯ ವ್ಯವಸ್ಥೆ ಮಾಡಿದರು. ರಾಜ್ಯ ಸಿಂಹಾಸನವನ್ನು ಅವರು ಏರಲಿಲ್ಲ. ಬದಲಾಗಿ ಶೂನ್ಯ ಸಿಂಹಾಸನ ವನ್ನ ಸೃಷ್ಟಿಸಿ ಪ್ರಜಾಪ್ರಭುತ್ವದ ಕನಸು ಬಿತ್ತಿದರು. ಅವರ ಅನುಭವ ಮಂಟಪದ ಅಮರ ಗಣಗಳಲ್ಲಿ ಎಲ್ಲಾ ಜಾತಿಯ ಶರಣರಿದ್ದರು.ಮಹಿಳೆಯರಿದ್ದರು ಅವರೆಲ್ಲಾ ಅನುಭವ ಮಂಟಪ ಎಂಬ ಧಾರ್ಮಿಕ ಸಮಾಜೊ ಎಂಬ ಸಂಸತ್ತಿನ ಸದಸ್ಯರಾಗಿದ್ದರು.
ಅಭಿವ್ಯಕ್ತಿ ಸ್ವಾತಂತ್ರ್ಯ ಪಡೆದವರಾಗಿದ್ದರು ಹೀಗೆ ಸ್ವತಂತ್ರ ಧರ್ಮ ಸಮಾನತೆಯ ವಿಚಾರಧಾರೆಯನ್ನು ಜಗತ್ತಿನಲ್ಲಿ ಹರಿಸಿದವರಲ್ಲಿ ಬಸವಣ್ಣನವರು ಪ್ರಥಮರಾಗಿದ್ದರು. ಅವರು ಪ್ರಾರಂಭಿಸಿದ ಚಳವಳಿಯಿಂದಾಗಿ ಮಹಿಳೆಯರು, ಅಸ್ಪೃಶ್ಯರು ಕೂಡ ಶರಣರಾದರು.
ಶರಣ ಸಾಹಿತ್ಯ ಮತ್ತು ಸಂವಿಧಾನದ ಆಶಯವು ಒಂದೇ ಆಗಿದೆ. ಜಾತಿ ತಾರತಮ್ಯವಿಲ್ಲದ ಸಮಾಜ ನಿರ್ಮಾಣವು ಇವೆರಡರ ಗುರಿಯಾಗಿದೆ. ಸಮಾಜದಲ್ಲಿ ಬದಲಾವಣೆಯನ್ನ ತರಲು ಬಸವೇಶ್ವರರು ಹೋರಾಟ ಮಾಡಿದರು. ಆ ಸಂದರ್ಭದಲ್ಲಿ ಶೂದ್ರ ಸಮುದಾಯ ಮತ್ತು ಮಹಿಳಾ ಸಮುದಾಯ ಶಿಕ್ಷಣದಿಂದ ವಂಚಿತ ಬಡತನ ಮತ್ತು ತಾರತಮ್ಯಕ್ಕೆ ಒಳಗಾದರು. ಇದನ್ನು ಕಂಡ ಬಸವಾದಿ ಶರಣರು ಅನುಭವ ಮಂಟಪದ ಮೂಲಕ ಜಾತಿ ವ್ಯವಸ್ಥೆಯ ಮೇಲು ಕೀಳಿನ ತಾರತಮ್ಯವನ್ನು ಅಳಿಸಿ ಎಲ್ಲರೂ ಒಂದಾಗಿ ಬಾಳುವಂತಹ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟರು. ಇಂತಹ ಆಶಯಗಳನ್ನ ಇಟ್ಟುಕೊಂಡು ರಚಿತವಾದ ಸಂವಿಧಾನವು ಜಾತಿ ವ್ಯವಸ್ಥೆಯನ್ನು ದೂರ ಮಾಡಿ ಮಹಿಳೆಯರು ಮತ್ತು ಶೂದ್ರರಿಗೆಸಮಾನ ಹಕ್ಕುಗಳನ್ನು ಸಮಾನ ಗೌರವವನ್ನುಹೇಳುವಂತಹ ಮತ್ತು ತಪ್ಪಿದಲ್ಲಿ ಪಡೆದುಕೊಳ್ಳುವಂತಹ ಅತ್ಯುನ್ನತವಾದಂತಹ ಸರ್ವತಂತ್ರ ಸ್ವತಂತ್ರತೆಯನ್ನು ಸಂವಿಧಾನ ಕಲ್ಪಿಸಿದೆ.12ನೇ ಶತಮಾನದಲ್ಲಿ ಬಸವಣ್ಣನವರು ರೂಪಿಸಿದ ವಚನ ಸಾಹಿತ್ಯ ಎಂಬ ಸಂವಿಧಾನದ ಆಶಯಗಳನ್ನೇ ಆಧಾರವಾಗಿಟ್ಟುಕೊಂಡಿರುವಂತೆ ಡಾ. ಬಿ ಆರ್ ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನವುಕಂಡುಬರುತ್ತದೆ. ಹಾಗಾಗಿ ವಚನ ಸಾಹಿತ್ಯದಲ್ಲಿರುವ ಎಲ್ಲಾ ಆಶಯಗಳು ನಮ್ಮ ಸಂವಿಧಾನದಲ್ಲಿವೆ. ಆ ತರುವಾಯ ಇವತ್ತಿನ ವ್ಯವಸ್ಥೆಯನ್ನ ನೋಡಿದಾಗ ಆ ಕಾಲದ ಬಸವಣ್ಣನವರು ಉತ್ತಮ ಅರ್ಥ ಮಂತ್ರಿಗಳಾಗಿದ್ದರು.

ಸಮಾಜಕಲ್ಯಾಣ ಮಂತ್ರಿಗಳಾಗಿದ್ದರು ಶಿಕ್ಷಣ ಮಂತ್ರಿಗಳಾಗಿದ್ದರು.ಆರೋಗ್ಯ ಮಂತ್ರಿಗಳಾಗಿದ್ದರು ಸಮಾಜಕ್ಕೆ ಚಿಕಿತ್ಸೆ ನೀಡಿದ ವೈದ್ಯಕೀಯ ಮಂತ್ರಿಗಳಾಗಿದ್ದರು.ಹಾಗೂ ಉತ್ತಮ ಆಡಳಿತ ನಡೆಸಿದ ಮುಖ್ಯಮಂತ್ರಿ ಗಳಾಗಿದ್ದರು ಎಂದು ಈ ಕಾಲದಲ್ಲಿ ಗುರುತಿಸಬಹುದಲ್ಲವೆ?

KLive Special Article  ಈ ಎಲ್ಲಾ ಹಿನ್ನಲೆಯಲ್ಲಿ ಸರ್ಕಾರವು ಸಮಾಜ ಕಲ್ಯಾಣ ಇಲಾಖೆಯ ನೇತೃತ್ವದಲ್ಲಿ ಸಂವಿಧಾನದ ಜಾಗೃತಿ ಜಾಥಾವನ್ನು ಎಲ್ಲೆಡೆ ಹಮ್ಮಿಕೊಂಡಿರುವುದು ಸ್ವಾಗತಾರ್ಹ ಬೆಳವಣಿಗೆ ಆಗಿದೆ.

ಬರಹ : ಡಾ.ಆರ್.ನಾಗರಾಜು

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Maharashtra Election ‘ಮಹಾ’ ಚುನಾವಣೆ.ಮತ್ತೆ ತಲೆಯೆತ್ತಿದ ” ಮಹಾಯುತಿ” ಮಕಾಡೆ ಬಿದ್ದಅಘಾಡಿ

Maharashtra Election ದೇಶದ ಗಮನ ಸೆಳೆದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ...

Police Department ರಾಜ್ಯದ ಜೈಲುಗಳ ವಾರ್ಡನ್ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೇಮಕವಾಗಲು ಆಸಕ್ತ ಮಾಜಿ ಸೈನಿಕರು ಅರ್ಜಿ ಸಲ್ಲಿಸಲು ಅವಕಾಶ

Police Department ಕರ್ನಾಟಕ ರಾಜ್ಯಾದ್ಯಾಂತ ಇರುವ ಜೈಲುಗಳಲ್ಲಿ ವಾರ್ಡನ್‌ ಹುದ್ದೆಗೆ ಗುತ್ತಿಗೆ...

DC Shivamogga ಶಿವಮೊಗ್ಗ ಜಿಲ್ಲೆಯಲ್ಲಿ ಚುನಾವಣಾ ಜನಸಂಖ್ಯೆ ಅನುಪಾತದ ಬಗ್ಗೆ ಡಾ.ತ್ರಿಲೋಕ ಚಂದ್ರ ಅವರಿಂದ ಪರಿಶೀಲನೆ

DC Shivamogga ಶಿವಮೊಗ್ಗ ಜಿಲ್ಲೆಯಲ್ಲಿ ಚುನಾವಣಾ ಜನಸಂಖ್ಯೆ ಅನುಪಾತ (ಇಪಿ ರೇಷಿಯೋ)...