Sunday, November 24, 2024
Sunday, November 24, 2024

Kimmane Rathnakar ರಾಜ್ಯ ಸರ್ಕಾರದ ಗ್ಯಾರಂಟಿಯ ಹಣವು ಫಲಾನುಭವಿಗಳ ಬದುಕಿನ ಖರ್ಚಿಗೆ ತಲುಪುತ್ತದೆ- ಕಿಮ್ಮನೆ ರತ್ನಾಕರ್

Date:

Kimmane Rathnakar ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಹಾಸ್ಯ ಮಾಡಿದ ಬಿಜೆಪಿ ಹಾಗೂ ಬೌದ್ಧಿಕ ದಿವಾಳಿತನದ ಈ ದೇಶದ ಪ್ರಧಾನಿ ನರೇಂದ್ರ ಮೋದಿ ರಾಜ್ಯದ ಬಡವರ್ಗ ಹಾಗೂ ಕೆಳವರ್ಗದ ಜನರ ವಿರೋಧಿಗಳು. ಕೆಲವು ಮಾಧ್ಯಮಗಳು ಮೋದಿ ಮತ್ತು ಬಿಜೆಪಿಯನ್ನು ಪ್ರಶ್ನೆ ಮಾಡಬಾರದು ಎಂಬ ವಾತಾವರಣವನ್ನು ಸೃಷ್ಠ್ಠಿಸಿದ್ದಾರೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು.

ತೀರ್ಥಹಳ್ಳಿ, ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಯಶಸ್ವಿ ಐದು ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಶಿವಮೊಗ್ಗ ಜಿಲ್ಲಾ ಸಮಾವೇಶ ಫೆಬ್ರವರಿ 24ರಂದು ಶಿವಮೊಗ್ಗದ ಅಲ್ಲಮಪ್ರಭು ಪಾರ್ಕ್‌ನಲ್ಲಿ ನಡೆಯಲಿದ್ದು,ಜಿಲ್ಲೆಯ ಫಲಾನುಭವಿಗಳು ಹಾಗೂ ಯೋಜನೆಗಳು ತಲುಪದ ಜನರು ಆಗಮಿಸಿ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಹಣ ಯಾವುದೇ ಬಂಗಲೆ,ಐಶಾರಾಮಿ ಕಾರಿಗೆ,ಬ್ಯಾಂಕ್ ಗಳಿಗೆ ಹೋಗಿ ಸೇರುವುದಿಲ್ಲ,ಫಲಾನುಭವಿಗಳ ಬದುಕಿನ ಖರ್ಚಿನ ಆಸ್ಪತ್ರೆ,ದಿನಸಿ ಅಂಗಡಿ ಮುಂತಾದ ಖರ್ಚಿಗಾಗಿ ಸೇರುತ್ತದೆ.ಇದರ ಬಗ್ಗೆ ಬಡವರ ವಿರೋಧಿ ಬಿಜೆಪಿ ಸುಳ್ಳು ಅಪಪ್ರಚಾರ ಮಾಡುತಿದೆ.ಕೇಂದ್ರ ಸರ್ಕಾರದ ಭ್ರಷ್ಟಾಚಾರವನ್ನು ಮುಚ್ಚಿಹಾಕಲು ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಲು ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಚುನಾವಣಾ ಆಯೋಗ,ಇಡಿ,ಐಟಿ,ಸಿಐಡಿ ಅಂತಹ ಸಂಸ್ಥೆಗಳನ್ನು ತನ್ನ ಕೈವಶದಲ್ಲಿ ಇಟ್ಟುಕೊಂಡ ಬಿಜೆಪಿ ಇವಿಎಂ ಯಂತ್ರದ ಮೂಲಕ ಮುಂದಿನ ಲೋಕಸಭಾ ಚುನಾವಣೆಯಲ್ಲಿ ನಾವು ಗೆದ್ದೇ ಗೆಲ್ಲುತ್ತೇವೆ ಎಂಬ ಅಹಂ ಪ್ರದರ್ಶಿಸುತ್ತಿದೆ. ಈ ದೇಶದ ಕೊನೆಯ ಪ್ರಜಾಪ್ರಭುತ್ವದ ಲೋಕಸಭಾಚುನಾವಣೆ ಆಗಲಿದ್ದು,ಮೋದಿಯವರ ಹಿಟ್ಲರ್ ಮನಸ್ಥಿತಿಯ ಅಧಿಕಾರ ದೇಶವನ್ನು ಅಧೋಗತಿಗೆ ತರುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.
ಬರಲಿರುವ ಲೋಕಸಭಾ ಚುನಾವಣೆಯಲ್ಲಿ ಮತಚೀಟಿ ವ್ಯವಸ್ಥೆ ಇದ್ದರೆ ಮಾತ್ರ ಕಾಂಗ್ರೆಸ್ ಅಧಿಕಾರ ಹಿಡಿಯುವುದು ಖಚಿತ. ಇವಿಎಂ ಯಂತ್ರ ಮುಂದುವರೆದರೆ ಬಿಜೆಪಿಯು ಅನ್ಯಾಯದ ಮೂಲಕ ಅಧಿಕಾರ ಹಿಡಿಯುವುದರಲ್ಲಿ ಸಂಶಯವಿಲ್ಲ ಎಂದರು.

Kimmane Rathnakar ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಕೆಸ್ತೂರು ಮಂಜುನಾಥ್, ಮುಡುಬ ರಾಘವೇಂದ್ರ,ಪ.ಪಂ.ಅಧ್ಯಕ್ಷೆ ಗೀತಾ ರಮೇಶ್,ಯುವ ಕಾಂಗ್ರೇಸ್ ರಾಷ್ಟ್ರೀಯ ವಕ್ತಾರ ಆದರ್ಶ ಹುಂಚದಕಟ್ಟೆ,.ಯುವ ಕಾಂಗ್ರೆಸ್ ಅಧ್ಯಕ್ಷ ಅಮರನಾಥ ಶೆಟ್ಟಿ,ಮುಖಂಡರಾದ ಡಿ.ಎಸ್.ವಿಶ್ವನಾಥ ಶೆಟ್ಟಿ,ರಹಮತ್ ಅಸಾದಿ,ಜಯಪ್ರಕಾಶ್ ಶೆಟ್ಟಿ,ಮಂಜುಳಾ ನಾಗೇಂದ್ರ,ಬಿ.ಗಣಪತಿ ,ವಿಲಿಯಂ ಮಾರ್ಟಿಸ್ ಮುಂತಾದವರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Priyanka Gandhi ಕೇರಳ ವಯನಾಡು ಕ್ಷೇತ್ರದಿಂದ ಪ್ರಿಯಾಂಕಾ ಗಾಂಧಿ ಅತ್ಯಧಿಕ ಮತಗಳಿಂದ ಆಯ್ಕೆ

Priyanka Gandhi ಪ್ರಿಯಾಂಕಾ ಗಾಂಧಿ ವಾದ್ರಾ 4,10,931 ಮತಗಳ ಅಂತರದಿಂದ ಗೆದ್ದಿದ್ದಾರೆ,...

SP Mithun Kumar ಮದ್ಯವರ್ಜನ ಶಿಬಿರ ಚಾಲನೆ, ಸಮಾಜಕ್ಕೆ ಹೆಚ್ಚು ಉಪಯುಕ್ತ- ಎಸ್.ಪಿ .ಮಿಥುನ್ ಕುಮಾರ್

SP Mithun Kumar ಶಿವಮೊಗ್ಗ,ನ.22 ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ...

Kuvempu Birthday ಕುವೆಂಪು ಜನ್ಮದಿನದ ವಿಶೇಷ ಷಿಕಾರಿಪುರದಲ್ಲಿ ನಾಟಕ ಸ್ಪರ್ಧೆ

Kuvempu Birthday ಸಹ್ಯಾದ್ರಿ ರಂಗತರಂಗ ನಾಟಕ ಸ್ಪರ್ಧೆ ಶಿವಮೊಗ್ಗ ನಗರದ ಸಹಾದ್ರಿ...

Dargah Shah Aleem Deewan ಶಿವಮೊಗ್ಗದ ದಿವಾನ್ ಭಾಬಾ ದರ್ಗಾದಲ್ಲಿ ನ.24 ರಿಂದ 26 ವರೆಗೆ ಉರುಸ್

Dargah Shah Aleem Deewan ಶಿವಮೊಗ್ಗದ ಹಜ್ರತ್ ಸೈಯದ್ ಶಾ ಅಲೀಮ್...