“Acharya Tulsi National College of Commerce ಉನ್ನತ ಶಿಕ್ಷಣ ಇಂದು ಹೊರಳು ದಾರಿಯಲ್ಲಿದೆ. ಉತ್ತಮ ಗುಣಮಟ್ಟದ ಶಿಕ್ಷಣವನ್ನು ಕೊಡಲು ನಮಗಿಂದು ಸಾಧ್ಯವಾಗುತ್ತಿಲ್ಲ. ಪರೀಕ್ಷೆ,ಸೆಮಿಸ್ಟರ್ ಮುಗಿಸುವ ಒತ್ತಡದಲ್ಲಿ ವಿದ್ಯಾರ್ಥಿಗಳು,ಅಧ್ಯಾಪಕರು ತೊಡಗಿಕೊಳ್ಳುವುದೊಂದೇ ಈಗಿನ ಸಾಧನೆಯಾಗಿದೆ. ಎನ್ಇಪಿ ಯಂತಹ ಶೈಕ್ಷಣಿಕ ಪಠ್ಯ ಯೋಜನೆಗಳು ಶಿಕ್ಷಣ ಕ್ಷೇತ್ರದಲ್ಲಿ ಹೊಸ ಬದಲಾವಣೆಗೆ ನಾಂದಿ ಹಾಡಿದರೂ ಅದರ ಪರಿಣಾಮ ಕಾರ್ಯನಿರ್ವಹಣೆ ಇನ್ನೂ ಸಾಧ್ಯವಾಗಿಲ್ಲ. ಹತ್ತು ಹಲವು ಸವಾಲುಗಳು ನಮ್ಮ ಮುಂದಿರುವಾಗ ಉನ್ನತ ಶಿಕ್ಷಣಕ್ಕೆ ಹಲವು ಬದಲಾವಣೆಗಳು ಅಪೇಕ್ಷಣೀಯವೆನಿಸುತ್ತದೆ” ಎಂದು ಪ್ರೊ. ಸಿ. ರಾಜಶೇಖರ್ ಹೆಬ್ಬಾರ್,ನಿವೃತ್ತ ಹೆಚ್ಚುವರಿ ನಿರ್ದೇಶಕರು ಡಿಸಿಇ ಬೆಂಗಳೂರು ಅಭಿಪ್ರಾಯ ಪಟ್ಟರು.
ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜು ಶಿವಮೊಗ್ಗ ದ ರಾಷ್ಟ್ರೀಯ ಸೇವಾ ಯೋಜನೆ ಮತ್ತು ಐಕ್ಯೂ ಎಸಿ ಇದರ ಸಹಭಾಗಿತ್ವದಲ್ಲಿ “ಉನ್ನತ ಶಿಕ್ಷಣದ ಪುನರುಜ್ಜೀವನ ಮತ್ತು ಭವಿಷ್ಯದ ಸವಾಲುಗಳು” ಕುವೆಂಪು ವಿಶ್ವವಿದ್ಯಾಲಯಮಟ್ಟದ ಒಂದು ದಿನದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿಚಾರ ಸಂಕಿರಣದ ಆಶಯ ನುಡಿಗಳನ್ನಾಡಿದ ಕುವೆಂಪು ವಿಶ್ವವಿದ್ಯಾಲಯದ ಕಾರ್ಯಕ್ರಮ ಸಂಯೋಜನಾಧಿಕಾರಿಗಳಾದ ಡಾ. ಶುಭಾ ಮರವಂತೆಯವರು, ” ಪ್ರಸ್ತುತ ಉನ್ನತ ಶಿಕ್ಷಣ ವ್ಯವಸ್ಥೆಯು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸವನ್ನು ತುಂಬುವ ಕಾರ್ಯವನ್ನು ಮಾಡುತ್ತಿಲ್ಲ. ಉದ್ಯೋಗಾಧಾರಿತ ಕೌಶಲಗಳನ್ನು ಕಲಿಸುವ ಸಾಧ್ಯತೆಗಳು ಶಿಕ್ಷಣದ ಕೆಲವು ಹಂತಗಳಲ್ಲಿ ಸಾಧ್ಯವಾಗುತ್ತಿಲ್ಲ. ಅಧ್ಯಾಪನ ಮತ್ತು ಅಧ್ಯಯನ ಈ ಸಂಬಂಧಗಳು ಪರಸ್ಪರ ಜಟಿಲವಾಗುತ್ತಿದೆ, ಯಾಂತ್ರಿಕವಾಗುತ್ತಿದೆ. ನಮ್ಮ ಪಠ್ಯ ಬೋಧನೆಯ ಕ್ರಮಗಳು ವಿದ್ಯಾರ್ಥಿಯನ್ನು ತಲುಪುವಲ್ಲಿ ವಿಫಲವಾಗುತ್ತಿದೆ. ವಿದ್ಯಾರ್ಥಿಗಳಲ್ಲಿ ಸ್ವ ಅರಿವು, ಪುಸ್ತಕಗಳನ್ನು ಓದುವ ಆಸಕ್ತಿ, ಸ್ವಯಂ ನಿರ್ವಹಣಾ ಕೌಶಲ ಇತ್ಯಾದಿ ಗುಣಗಳು ಬೆಳೆಯದ ಹೊರತು ಬದಲಾವಣೆ ಸಾಧ್ಯವಿಲ್ಲ” ಎಂದರು.
ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನ ಪ್ರಾಚಾರ್ಯರಾದ ಡಾ ಬಿ ಜಿ ಭಾಸ್ಕರ್ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದರು. ರಾಷ್ಟ್ರೀಯ ಶಿಕ್ಷಣ ಸಮಿತಿಯ ನಿರ್ದೇಶಕರಾದ ಶ್ರೀಮತಿ ಎಂ ಆರ್ ಸೀತಾ ಲಕ್ಷ್ಮಿ, ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ಪ್ರೊ ನಾಗರಾಜು ಕೆಎಂ, ಐಕ್ಯೂಎಸಿ ಸಂಚಾಲಕರಾದ ಪ್ರೊ. ಮಂಜುನಾಥ್ ಎನ್.ಉಪಸ್ಥಿತರಿದ್ದರು.
Acharya Tulsi National College of Commerce ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಪ್ರೊ ಜಗದೀಶ್ ಎಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕರಾದ ಶ್ರೀ ರವಿಕುಮಾರ್ ಪ್ರಸ್ತಾವಿಕವಾಗಿ ಮಾತನಾಡಿದರು.
Acharya Tulsi National College of Commerce ಉನ್ನತ ಶಿಕ್ಷಣ ಹೊರಳು ದಾರಿಯಲ್ಲಿದೆ,ಗುಣಮಟ್ಟದ ಶಿಕ್ಷಣ ಕೊಡಲಾಗುತ್ತಿಲ್ಲ-ಪ್ರೊ.ಸಿ.ರಾಜಶೇಖರ್
Date: