Cultural Evening ಸಂಕಲನ ಬಚ್ಚಗಾರು ಸಂಸ್ಥೆ ಸಂಯೋಜನೆಯಲ್ಲಿ ಫೆಬ್ರವರಿ 20 ರಿಂದ ಮಾರ್ಚ್ 5 ರವರೆಗೆ ಪ್ರತಿದಿನ ಸಂಜೆ 06:30 ರಿಂದ ಶ್ರೀ ಶಂಕರ ಮಠದ ಸಭಾಂಗಣದಲ್ಲಿ ಉಪನ್ಯಾಸ ಮತ್ತು ಸಾಂಸ್ಕೃತಿಕ ಸಂಜೆಗಳು ಕಲಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಸಂಚಾಲಕ ಶುಂಠಿ ಸತ್ಯನಾರಾಯಣ ಭಟ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಅವರು, ವಿದ್ವಾಂಸರಿಂದ ವಿವಿಧ ವಿಷಯಗಳ ಕುರಿತು ಉಪನ್ಯಾಸ ಹಾಗೂ ಸಂಪ್ರದಾಯ ಹಾಡು, ಭಕ್ತಿ ಸಂಗೀತ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ಫೆಬ್ರವರಿ 20 ರಿಂದ 25 ರವರೆಗೆ ಗದಗದ ರಾಮಕೃಷ್ಣಾಶ್ರಮದ ನಿರ್ಭಯಾನಂದ ಸ್ವಾಮೀಜಿಯವರಿಂದ ‘ ಸನಾತನ ಧರ್ಮ’ ಕುರಿತು ಉಪನ್ಯಾಸ, ಫೆಬ್ರವರಿ 26 ರಿಂದ 29 ರವರೆಗೆ ಸಿದ್ದಾಪುರ ತಾಲ್ಲೂಕು ಶಿರಳಗಿ ಚೈತನ್ಯ ರಾಜಾರಾಮ ಕ್ಷೇತ್ರದ ಬ್ರಹ್ಮಾನಂದ ಭಾರತಿ ಸ್ವಾಮೀಜಿಯವರಿಂದ ‘ಭಕ್ತನ ಲಕ್ಷಣಗಳು’ ( ಭಗವದ್ಗೀತೆಯ 12 ನೇ ಅಧ್ಯಾಯದ ಕೆಲವು ಶ್ಲೋಕಗಳನ್ನು ಆಧರಿಸಿ) ವಿಷಯ ಕುರಿತು ಉಪನ್ಯಾಸ ನೀಡುವರು.
ಮಾರ್ಚ್ 1 ರಂದು ಬೆಂಗಳೂರಿನ ಪ್ರಲ್ಹಾದ ಆಚಾರ್ಯ ಮತ್ತು ಮಕ್ಕಳಿಂದ ನೆರಳು ಬೆಳಕಿನಾಟ (ಶ್ಯಾಡೋ ಪ್ಲೇ), ಮಾರ್ಚ್ 2 ರಂದು ಕಾವ್ಯ-ಚಿತ್ರ-ಸಂಪ್ರದಾಯ ಹಾಡು- ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಲಿದ್ದು, ಪ್ರಶಾಂತ ಮಧ್ಯಸ್ಥರಿಂದ ಕಾವ್ಯ, ಸತೀಶ್ ಯಲ್ಲಾಪುರ ಅವರಿಂದ ಚಿತ್ರ ರಚನೆ, ಅನ್ನಪೂರ್ಣ ರಮಾನಂದ ತಲವಾಟ ಅವರಿಂದ ಹಾಡು, ಗಣಪತಿ ಬಿ.ಆರ್.ಬಚ್ಚಗಾರು ಅವರಿಂದ ಭಕ್ತಿ ಸಂಗೀತ ನಡೆಯಲಿದೆ.
ಮಾರ್ಚ್ 3 ಮತ್ತು 4 ರಂದು ಸಂಸ್ಕೃತಿ ಚಿಂತಕ ಲಕ್ಷ್ಮೀಶ್ ತೋಳ್ಪಾಡಿಯವರಿಂದ ‘ ಮಾಂಡೋಕ್ಯೋಪನಿಷತ್’ ವಿಷಯ ಕುರಿತು ಉಪನ್ಯಾಸ, ಮಾರ್ಚ್ 5 ರಂದು ದೇರಾಜೆ ಸೀತಾರಾಮಯ್ಯನವರ ಸಂಸ್ಮರಣೆ ಕಾರ್ಯಕ್ರಮ ನಡೆಯಲಿದ್ದು, ಲಕ್ಷ್ಮೀಶ್ ತೋಳ್ಪಾಡಿಯವರು ‘ಕಲೆ ಮತ್ತು ದೇರಾಜೆಯವರ ದಾರಿ’ ಕುರಿತು ಮಾತನಾಡುವರು. ನಿವೃತ್ತ ಪ್ರಾಂಶುಪಾಲರಾದ ಡಾ.ಜಿ.ಎಸ್.ಭಟ್ Cultural Evening ಅಧ್ಯಕ್ಷತೆ ವಹಿಸಲಿದ್ದು, ಹಿರಿಯ ಸಾಹಿತಿ ಡಾ.ನಾ.ಡಿಸೋಜ ಉಪಸ್ಥಿತರಿರುವರು.
ಗಾಯಕಿ ಪ್ರಭಾವತಿ ಮತ್ತು ಸಂಗಡಿಗರು ಹಾಗೂ ಸವಿತಾ ಮತ್ತು ಸಂಗಡಿಗರಿಂದ ಪ್ರತಿದಿನ ಸಂಜೆ 06:00 ರಿಂದ 6:25 ರವರೆಗೆ ಭಜನೆ ಕಾರ್ಯಕ್ರಮ ನಡೆಯುತ್ತದೆ.
Cultural Evening ಮಾರ್ಚ್ 5 ರಂದು ಸಾಗರದ ಸಂಕಲನ ಬಚ್ವಗಾರು ಸಂಸ್ಥೆಯಿಂದ ಸಾಂಸ್ಕೃತಿಕ ಸಂಜೆ
Date: