Constitution ಭಾರತ ಸಂವಿಧಾನದ 75 ನೇ ವರ್ಷಾಚರಣೆ ಪ್ರಯುಕ್ತ ಸಂವಿಧಾನ ಹಾಗೂ ಅದರ ಆಶಯ ಕುರಿತು ರಾಜ್ಯಾದ್ಯಂತ ಅರಿವು ಮೂಡಿಸುತ್ತಿರುವ ಹಿನ್ನೆಲೆಯಲ್ಲಿ ಸಂವಿಧಾನ ಕುರಿತು ಪ್ರತಿಯೊಬ್ಬ ನಾಗರೀಕರು ತಿಳಿದುಕೊಳ್ಳುವುದು ಹಾಗೂ ಅದನ್ನು ಪಾಲಿಸುವುದು ಅವಶ್ಯಕವಾಗಿದೆ.
ಪ್ರಪಂಚದಲ್ಲೇ ಶ್ರೇಷ್ಠ ಸಂವಿಧಾನವನ್ನು ಹೊಂದಿರುವ ಭಾರತ ದೇಶವು ತನ್ನ ಪ್ರಜೆಗಳಿಗೆ ಮೂಲಭೂತ ಹಕ್ಕುಗಳನ್ನು ನೀಡುವ ಮೂಲಕ ಭಾರತೀಯ ನಾಗರೀಕರ ಬದುಕಿಗೆ ಭರವಸೆ ಜೊತೆಗೆ ಭಾರತೀಯ ಪ್ರಜಾಪ್ರಭುತ್ವದ ತಳಹದಿಯ ಮೇಲೆ ರೂಪಗೊಂಡಿರುವ ವೈಯಕ್ತಿಕ ಸ್ವಾತಂತ್ರ್ಯಗಳು ಮತ್ತು ಸಾಮಾಜಿಕ ಜವಾಬ್ದಾರಿಗಳ ಸಮಾನತೆಯನ್ನು ನೀಡಿದೆ.
ಭಾರತ ಸಂವಿಧಾನದ ಮೂರನೇ ಭಾಗದಲ್ಲಿ 12ನೇ ವಿಧಿಯಿಂದ 35 ನೇ ವಿಧಿಯವರೆಗೆ ಮೂಲಭೂತ ಹಕ್ಕುಗಳನ್ನು ನೀಡಲಾಗಿದೆ. ಭಾರತ ಸಂವಿಧಾನದ ಮೂಲಭೂತ ಹಕ್ಕುಗಳನ್ನು ಅಮೆರಿಕದ ಬಿಲ್ಸ್ ಆಫ್ ರೈಟ್ಸ್ ಎಂಬ ಹಕ್ಕುಗಳಿಂದ ಎರವಲು ಪಡೆಯಲಾಗಿದೆ. ಭಾರತದ ಮೂಲಭೂತ ಹಕ್ಕುಗಳನ್ನು ಭಾರತದ ಮ್ಯಾಗ್ನಾಕಾರ್ಟ ಎಂದು ಕರೆಯುತ್ತಾರೆ.
ಮೂಲ ಸಂವಿಧಾನದಲ್ಲಿ ಒಟ್ಟು 7 ಮೂಲಭೂತ ಹಕ್ಕುಗಳನ್ನು ನೀಡಲಾಗಿದ್ದು ತಿದ್ದುಪಡಿಯ ಮೂಲಕ. ಅಸ್ತಿಯ ಹಕ್ಕನ್ನು ತೆಗೆದು ಹಾಕಲಾಗಿದ್ದು ಪ್ರಸ್ತುತ 6 ಹಕ್ಕುಗಳು ಉಳಿದಿವೆ.
1.ಸಮಾನತೆಯ ಹಕ್ಕು
2.ಸ್ವಾತಂತ್ರದ ಹಕ್ಕು
3.ಶೋಷಣೆಯ ವಿರುದ್ಧದ ಹಕ್ಕು
4.ಧಾರ್ಮಿಕ ಹಕ್ಕು
- ಸಾಂಸ್ಕøತಿಕ ಮತ್ತು ಶೈಕ್ಷಣಿಕ ಹಕ್ಕು
- ಸಂವಿಧಾನ ಪರಿಹಾರದ ಹಕ್ಕು
ಸಮಾನತೆಯ ಹಕ್ಕು:
14 ರಿಂದ 18 ವಿಧಿಗಳನ್ನು ಒಳಗೊಂಡಿದ್ದು ಈ ಹಕ್ಕು ಪ್ರಕಾರ ಕಾನೂನಿನ ಮುಂದೆ ಎಲ್ಲರೂ ಸಮಾನರು . ಜಾತಿ, ಧರ್ಮ, ಬಣ್ಣ ಅಥವಾ ಲಿಂಗದ ಆಧಾರದ ಮೇಲೆ ತಾರತಮ್ಯವನ್ನು ನಿμÉೀಧಿಸಿದೆ. ಕಾನೂನಿನಡಿ ಸಮಾನ ರಕ್ಷಣೆ, ಸಾರ್ವಜನಿಕ ಉದ್ಯೋಗದಲ್ಲಿ ಸಮಾನ ಅವಕಾಶ ಮತ್ತು ಅಸ್ಪøಶ್ಯತೆ ಮತ್ತು ಶೀರ್ಷಿಕೆ ನಿರ್ಮೂಲನೆಯನ್ನು ಒಳಗೊಂಡಿದೆ. ಪ್ರತಿಯೊಬ್ಬ ನಾಗರಿಕನಿಗೆ ಎಲ್ಲಾ ಸಾರ್ವಜನಿಕ ಸ್ಥಳಗಳಿಗೆ ಸಮಾನ ಪ್ರವೇಶ ಅವಕಾಶ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳು ಮತ್ತು ಇತರ ಹಿಂದುಳಿದ ವರ್ಗಗಳು ಮತ್ತು ವಿಧವೆಯರು ಮತ್ತು ದೈಹಿಕ ವಿಕಲಚೇತನರಿಗೆ ಹೊರತುಪಡಿಸಿ ಸರ್ಕಾರಿ ಸೇವೆಗಳಲ್ಲಿ ಯಾವುದೇ ಮೀಸಲಾತಿ ಇರುವುದಿಲ್ಲ. ಭಾರತದಲ್ಲಿ ದಶಕಗಳಿಂದ ಆಚರಣೆಯಲ್ಲಿದ್ದ ಅಸ್ಪøಶ್ಯತೆ ನಿರ್ಮೂಲನೆ ಬಗ್ಗೆ ಇಲ್ಲಿ ತಿಳಿಸಿದೆ.
ಸ್ವಾತಂತ್ರ್ಯದ ಹಕ್ಕು:
ಸಂವಿಧಾನದ 19 ರಿಂದ 22 ವಿಧಿಗಳನ್ನು ಒಳಗೊಂಡಿದ್ದು, ಈ ಹಕ್ಕು ವಾಕ್ ಸ್ವಾತಂತ್ರ್ಯ ,ಅಭಿವ್ಯಕ್ತಿ ಸ್ವಾತಂತ್ರ್ಯ, ಒಕ್ಕೂಟಗಳು ಮತ್ತು ಸಂಘಗಳನ್ನು ರಚಿಸುವ ಸ್ವಾತಂತ್ರ್ಯವನ್ನು ಒಳಗೊಂಡಿದೆ. ಇದು ಭಾರತದಲ್ಲಿ ಎಲ್ಲಿ ಬೇಕಾದರೂ ಪ್ರಯಾಣಿಸುವ ಸ್ವಾತಂತ್ರ್ಯ, ಭಾರತದ ಯಾವುದೇ ಭಾಗದಲ್ಲಿ ವಾಸಿಸುವ ಸ್ವಾತಂತ್ರ್ಯ ಮತ್ತು ಅವರ ಆಸಕ್ತಿಯ ಯಾವುದೇ ವೃತ್ತಿಯನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವನ್ನು ಒಳಗೊಂಡಿದೆ.
ಭಾರತದ ಯಾವುದೇ ಪ್ರಜೆಯು ದೇಶದ ಯಾವುದೇ ಭಾಗದಲ್ಲಿ ಆಸ್ತಿಯನ್ನು ಖರೀದಿಸಲು, ಮಾರಾಟ ಮಾಡಲು ಮತ್ತು ಹೊಂದಲು ಸಂಪೂರ್ಣ ಹಕ್ಕನ್ನು ಹೊಂದಿರುತ್ತಾನೆ ಎಂದು ಈ ಹಕ್ಕು ಹೇಳುತ್ತದೆ. ಈ ಹಕ್ಕುಗಳ ಪ್ರಕಾರ, ಜನರು ಯಾವುದೇ ವ್ಯಾಪಾರ ಅಥವಾ ವ್ಯವಹಾರದಲ್ಲಿ ಪಾಲ್ಗೊಳ್ಳುವ ಸ್ವಾತಂತ್ರ್ಯವನ್ನು ಹೊಂದಿರುತ್ತಾರೆ. ಒಬ್ಬ ವ್ಯಕ್ತಿಯನ್ನು ಒಂದೇ ಅಪರಾಧಕ್ಕೆ ಎರಡು ಬಾರಿ ಶಿಕ್ಷೆಗೆ ಗುರಿಪಡಿಸಲಾಗುವುದಿಲ್ಲ ಮತ್ತು ತನ್ನ ವಿರುದ್ಧ ಸಾಕ್ಷಿಯಾಗಿ ನಿಲ್ಲುವಂತೆ ಒತ್ತಾಯಿಸಲಾಗುವುದಿಲ್ಲ ಎಂದು ಇದು ವ್ಯಾಖ್ಯಾನಿಸುತ್ತದೆ.
ಶೋಷಣೆ ವಿರುದ್ಧ ಹಕ್ಕು:
ಸಂವಿಧಾನದ 23-24 ವಿಧಿಯಲ್ಲಿ ಬರುವ ಈ ಹಕ್ಕು ಯಾವುದೇ ರೀತಿಯ ಬಲವಂತದ ಕಾರ್ಮಿಕರ(ಜೀತ ಪದ್ದತಿ) ನಿμÉೀಧವನ್ನು ಒಳಗೊಂಡಿದೆ.
14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಜೀವಕ್ಕೆ ಅಪಾಯವಿರುವ ಗಣಿ ಅಥವಾ ಕಾರ್ಖಾನೆಗಳಲ್ಲಿ ಕೆಲಸ ಮಾಡಲು ಅನುಮತಿಸಲಾಗುವುದಿಲ್ಲ. ಈ ಹಕ್ಕುಗಳ ಪ್ರಕಾರ, ಯಾವುದೇ ವ್ಯಕ್ತಿಗೆ ಇನ್ನೊಬ್ಬ ವ್ಯಕ್ತಿಯನ್ನು ಯಾವುದೇ ರೀತಿಯಲ್ಲಿ ಶೋಷಿಸುವ ಹಕ್ಕಿಲ್ಲ.
ಆದ್ದರಿಂದ ಮಾನವ ಕಳ್ಳಸಾಗಣೆ ಮತ್ತು ಭಿಕ್ಷಾಟನೆಯನ್ನು ಕಾನೂನು ಅಪರಾಧಗಳಾಗಿ ಮಾಡಲಾಗಿದೆ ಮತ್ತು ಅದರಲ್ಲಿ ಭಾಗಿಯಾಗಿರುವವರಿಗೆ ದಂಡ ವಿಧಿಸಲಾಗುತ್ತದೆ.
ಈ ಹಕ್ಕುಗಳ ಪ್ರಕಾರ ಮಹಿಳೆಯರು ಮತ್ತು ಮಕ್ಕಳ ನಡುವೆ ಅಪ್ರಾಮಾಣಿಕ ಉದ್ದೇಶಗಳಿಗಾಗಿ ಗುಲಾಮಗಿರಿ ಮತ್ತು ಸಾಗಾಟವನ್ನು ಅಪರಾಧವೆಂದು ಘೋಷಿಸಲಾಗಿದೆ. ಕಾರ್ಮಿಕರ ವಿರುದ್ಧ ಕನಿಷ್ಠ ವೇತನ ಪಾವತಿಯನ್ನು ವ್ಯಾಖ್ಯಾನಿಸಲಾಗಿದೆ ಮತ್ತು ಈ ವಿಷಯದಲ್ಲಿ ಯಾವುದೇ ರಾಜಿಗೆ ಅವಕಾಶವಿಲ್ಲ ಎಂದು ತಿಳಿಸಲಾಗಿದೆ.
Constitution ಧಾರ್ಮಿಕ ಸ್ವಾತಂತ್ರ್ಯದ ಹಕ್ಕು:
ಸಂವಿಧಾನದ 25 ರಿಂದ 28 ನೇ ವಿಧಿಯಲ್ಲಿ ಈ ಹಕ್ಕುಗಳು ಭಾರತದ ಎಲ್ಲಾ ನಾಗರಿಕರಿಗೆ ಆತ್ಮಸಾಕ್ಷಿಯ ಸಂಪೂರ್ಣ ಸ್ವಾತಂತ್ರ್ಯ ಇರುತ್ತದೆ ಎಂದು ಹೇಳುತ್ತದೆ. ಎಲ್ಲಾ ಜನರು ತಮ್ಮ ಆಯ್ಕೆಯ ಧರ್ಮವನ್ನು ಮುಕ್ತವಾಗಿ ಅಳವಡಿಸಿಕೊಳ್ಳಲು, ಆಚರಿಸಲು ಮತ್ತು ಪ್ರಚಾರ ಮಾಡಲು ಸಮಾನ ಹಕ್ಕನ್ನು ಹೊಂದಿರುತ್ತಾರೆ. ಯಾವುದೇ ವ್ಯಕ್ತಿಯ ಯಾವುದೇ ಧಾರ್ಮಿಕ ವ್ಯವಹಾರಗಳಲ್ಲಿ ರಾಜ್ಯವು ಯಾವುದೇ ರೀತಿಯಲ್ಲಿ ಅಡ್ಡಿಪಡಿಸುವುದಿಲ್ಲ. ಇದರಲ್ಲಿ, ಎಲ್ಲಾ ಧರ್ಮಗಳು ಧಾರ್ಮಿಕ ಮತ್ತು ದತ್ತಿ ಉದ್ದೇಶಗಳಿಗಾಗಿ ಸಂಸ್ಥೆಗಳನ್ನು ಸ್ಥಾಪಿಸುವ ಮತ್ತು ಎತ್ತಿಹಿಡಿಯುವ ಹಕ್ಕನ್ನು ಹೊಂದಿವೆ. ಅಲ್ಲದೆ,ಈ ಹಕ್ಕುಗಳಿಗೆ ಸಂಬಂಧಿಸಿದಂತೆ ಅವರು ತಮ್ಮ ಸ್ವಂತ ವ್ಯವಹಾರಗಳನ್ನು ನಿರ್ವಹಿಸಲು ಸ್ವತಂತ್ರರಾಗಿರುತ್ತಾರೆ ಎಂದು ವಿವರಿಸಲಾಗಿದೆ.
ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಹಕ್ಕು:
ಸಂವಿಧಾನದ 29-30 ವಿಧಿಗಳು ಶಿಕ್ಷಣವು ಪ್ರತಿ ಮಗುವಿನ ಪ್ರಾಥಮಿಕ ಹಕ್ಕು ಆಗಿರುವುದರಿಂದ ಈ ಹಕ್ಕು ಅತ್ಯಂತ ಪ್ರಮುಖ ಹಕ್ಕುಗಳಲ್ಲಿ ಒಂದಾಗಿದೆ.ಈ ಹಕ್ಕಿನ ಪ್ರಕಾರ,ಪ್ರತಿಯೊಬ್ಬರೂ ತಮ್ಮ ಆಯ್ಕೆಯ ಸಂಸ್ಕೃತಿಯನ್ನು ಅನುಸರಿಸಲು ಸ್ವತಂತ್ರರು. ಅಲ್ಲದೆ, ಪ್ರತಿಯೊಬ್ಬರೂ ತಮ್ಮ ಆಯ್ಕೆಯ ಶಿಕ್ಷಣವನ್ನು ಪಡೆಯಲು ಮುಕ್ತರಾಗಿದ್ದಾರೆ.
ಯಾವುದೇ ವ್ಯಕ್ತಿಗೆ ಅವರ ಸಂಸ್ಕøತಿ, ಜಾತಿ ಅಥವಾ ಧರ್ಮದ ಆಧಾರದ ಮೇಲೆ ಯಾವುದೇ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶವನ್ನು ನಿರಾಕರಿಸಲಾಗುವುದಿಲ್ಲ. ಇದರ ಪ್ರಕಾರ, ಎಲ್ಲಾ ಅಲ್ಪಸಂಖ್ಯಾತರು ತಮ್ಮದೇ ಆದ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಹಕ್ಕನ್ನು ಹೊಂದಿದ್ದಾರೆ.
ಸಂವಿಧಾನಾತ್ಮಕ ಪರಿಹಾರದ ಹಕ್ಕು:
ಸಂವಿಧಾನದ 32 ರಿಂದ 35. ವಿಧಿಯಲ್ಲಿ ಈ ಹಕ್ಕು ಎಲ್ಲಾ ಪ್ರಜೆಗಳಿಗೂ ನೀಡಿರುವ ವಿಶೇಷ ಹಕ್ಕು. ಈ ಹಕ್ಕಿನ ಪ್ರಕಾರ, ಯಾವುದೇ ಮೂಲಭೂತ ಹಕ್ಕುಗಳನ್ನು ನಿರಾಕರಿಸಿದ ಸಂದರ್ಭದಲ್ಲಿ ನ್ಯಾಯಾಲಯಕ್ಕೆ ಹೋಗಲು ನಾಗರಿಕನಿಗೆ ಅಧಿಕಾರವಿದೆ. ಈ ಹಕ್ಕುಗಳ ಉಲ್ಲಂಘನೆಯ ವಿರುದ್ಧ ನ್ಯಾಯಾಲಯವು ಯಾರಿಗಾದರೂ ಕಾವಲುಗಾರನಾಗಿ ನಿಂತಿದೆ. ಸರ್ಕಾರವು ಯಾವುದೇ ವ್ಯಕ್ತಿಗೆ ಬಲವಂತವಾಗಿ ಅಥವಾ ಉದ್ದೇಶಪೂರ್ವಕವಾಗಿ ಅನ್ಯಾಯವನ್ನು ಮಾಡಿದರೆ ಅಥವಾ ಯಾವುದೇ ಕಾರಣವಿಲ್ಲದೆ ಅಥವಾ ಕಾನೂನುಬಾಹಿರ ಕೃತ್ಯದಿಂದ ವ್ಯಕ್ತಿಯನ್ನು ಜೈಲಿನಲ್ಲಿರಿಸಿದರೆ, ಈ ಹಕ್ಕು ವ್ಯಕ್ತಿಯು ಸರ್ಕಾರದ ಕ್ರಮಗಳ ವಿರುದ್ಧ ನ್ಯಾಯಕ್ಕಾಗಿ ಕೋರ್ಟ್ ಮೊರೆ ಹೋಗಲು ಅನುಮತಿಸುತ್ತದೆ.ಆರ್ಟಿಕಲ್ 32 ಅನ್ನು ಭಾರತೀಯ ಸಂವಿಧಾನದ ‘ಹೃದಯ ಮತ್ತು ಆತ್ಮ’ ಎಂದು ಕರೆಯಲಾಗುತ್ತದೆ, ಇದನ್ನು ಡಾ. ಬಿ.ಆರ್. ಅಂಬೇಡ್ಕರ್ ಅವರು ಸ್ಪಷ್ಟಪಡಿಸಿದ್ದಾರೆ. ಹೇಬಿಯಸ್ ಕಾರ್ಪಸ್, ಮ್ಯಾಂಡಮಸ್, ನಿಷೇಧ, ಸರ್ಷಿಯೊರರಿ ಮತ್ತು ಕ್ವೊ ವಾರಂಟೊ ಗಳ ಮೂಲಕ ನಾಗರಿಕ ಹಕ್ಕುಗಳ ರಕ್ಷಣೆ ಮಾಡಿಕೊಳ್ಳಲು ಪ್ರತಿಯೊಬ್ಬರಿಗೂ ಅವಕಾಶ ನೀಡಿದೆ.
ನಮ್ಮ ಪ್ರಜಾಪ್ರಭುತ್ವ ಮತ್ತು ದೇಶದ ಪ್ರಗತಿಯ ಅಡಿಪಾಯವಾಗಿರುವ ಈ ಮೂಲಭೂತ ಹಕ್ಕುಗಳನ್ನು ಗೌರವಿಸುವುದು ಮತ್ತು ಎತ್ತಿಹಿಡಿಯುವುದು ಭಾರತದ ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳು ಭಾರತೀಯ ಸಂವಿಧಾನದ ಮೂಲಾಧಾರವಾಗಿದೆ.
ಲೇ: ರಘು ಆರ್
ಅಪ್ರೆಂಟಿಸ್ ವಾರ್ತಾ ಇಲಾಖೆ ಶಿವಮೊಗ್ಗ