H D Thammaiah ಚಿಕ್ಕಮಗಳೂರು, ಕ್ಷೇತ್ರದ ಶಾಸಕ ಹೆಚ್.ಡಿ.ತಮ್ಮಯ್ಯನವರು ಪ್ರಸಕ್ತ ಸಾಲಿನಲ್ಲಿ ತಂದಿರುವ ಅನುದಾನ ಹಾಗೂ ಕೈಗೊಂಡಿರುವ ಅಭಿವೃದ್ದಿ ಕಾರ್ಯಗಳ ಬಗ್ಗೆ ಸಂಪೂರ್ಣ ವಿವರ ಒದಗಿಸಿಕೊಡಬೇಕು ಎಂ ದು ಬಿಜೆಪಿ ಚಿಕ್ಕಮಗಳೂರು ನಗರ ಘಟಕದ ಮುಖಂಡರುಗಳು ಶನಿವಾರ ಶಾಸಕರ ಕಚೇರಿಗೆ ಭೇಟಿ ನೀಡಿ ಮನವಿ ಸಲ್ಲಿಸಿ ಒತ್ತಾ ಯಿಸಿದರು.
ಈ ಕುರಿತು ಮಾತನಾಡಿದ ನಗರಸಭಾ ಮಾಜಿ ಅಧ್ಯಕ್ಷ ಪುಷ್ಪರಾಜ್ ಕ್ಷೇತ್ರದ ಅಭಿವೃಧ್ದಿಯ ಮಾಹಿತಿ ಒದಗಿ ಸಬೇಕಾಗಿರುವುದು ಶಾಸಕರ ಕರ್ತವ್ಯವಾಗಿದ್ದು ಪ್ರಶ್ನಿಸುವ ಹಕ್ಕು ಮತದಾರರಿಗಿದೆ. ಆ ಹಿನ್ನೆಲೆಯಲ್ಲಿ ಮತದಾರರ ಧ್ವನಿಯಾಗಿ ಮನವಿ ಸಲ್ಲಿಸುವ ಮುಖಾಂತರ ಕ್ಷೇತ್ರದ ಅಭಿವೃಧ್ದಿ ಕಾಮಗಾರಿಗಳ ವಿವರ ನೀಡಬೇಕೆಂದು ಹೇಳಿ ದರು.
ಚಿಕ್ಕಮಗಳೂರಿನ ಶಾಸಕರು ವರ್ಷ ಪೂರೈಸುವ ಹೊಸ್ತಿನಲ್ಲಿದ್ದು ಕ್ಷೇತ್ರಕ್ಕೆ ಸಂಬoಧಿಸಿದ ಯಾವುದೇ ಅಭಿ ವೃದ್ದಿ ಕಾರ್ಯವಾಗಲೀ ಆರಂಭವಾಗಿಲ್ಲ. ಆ ಕಾರಣದಿಂದ ಪತ್ರದ ಮುಖೇನ ಶಾಸಕರು ಕ್ಷೇತ್ರಕ್ಕೆ ತಂದ ಹಾಗೂ ಇದುವರೆಗೂ ಬಿಡುಗಡೆಯಾಗಿರುವ ಅನುದಾನ ಅಥವಾ ಬಿಡುಗಡೆಗೊಂಡಿದ್ದರೆ ಕೈಗೊಂಡ ಅಭಿವೃದ್ದಿ ಕಾರ್ಯ ಗಳು ಏನೆಂಬುದನ್ನು ತಿಳಿಸಬೇಕಿದೆ ಎಂದು ಪ್ರಶ್ನಿಸಿದರು.
ಬರದ ಛಾಯೆಯಲ್ಲಿ ಸಿಲುಕಿ ನಲುಗುತ್ತಿರುವ ರೈತರಿಗೆ ಸರ್ಕಾರದಿಂದ ಬಿಡುಗಡೆಗೊಂಡ ಪರಿಹಾರ, ನಿರು ದ್ಯೋಗ ನಿರ್ಮೂಲನೆಗೆ ಸೃಷ್ಟಿಸಲಾಗಿರುವ ಉದ್ಯೋಗಗಳ ವಿವರ, ಶೈಕ್ಷಣ ಕ ಅಭಿವೃದ್ದಿಯಲ್ಲಿ ಕೈಗೊಂಡ ಕ್ರಮ ಗಳು, ಬಡಜನರ ಕೈಗೆ ಎಟಕುವ ಉತ್ತಮ ದರ್ಜೆಯ ಆರೋಗ್ಯ ಸೇವೆ ಒದಗಿಸಲು ರೂಪಿಸಿರುವ ಹೊಸ ಯೋಜ ನೆಗಳ ಮಾಹಿತಿ ಕೊಡಬೇಕೆಂದು ಒತ್ತಾಯಿಸಿದರು.
ಬಿಜೆಪಿ ನಗರಾಧ್ಯಕ್ಷ ಮಧುಕುಮಾರ್ ರಾಜ್ ಅರಸ್ ಮಾತನಾಡಿ ಕುಡಿಯುವ ನೀರು ಹಾಗೂ ಒಳಚರಂಡಿ ವ್ಯವಸ್ಥೆ ಪರಿಪೂರ್ಣಗೊಳಿಸಲು ಕೈಗೊಂಡ ಕಾಮಗಾರಿ, ಮೋದಿ ಸರ್ಕಾರ ನೀಡುತ್ತಿರುವ ಅನ್ನ ಭಾಗ್ಯದ 5 ಕೆಜಿ ಅಕ್ಕಿ ಹೊರತುಪಡಿಸಿ ರಾಜ್ಯದಲ್ಲಿ ವಿತರಿಸುತ್ತಿರುವ ಅಕ್ಕಿ ವಿವರ, ಜಿಲ್ಲೆಯಲ್ಲಿ ನಿರ್ಮಾಣವಾಗುತ್ತಿರುವ ವೈದ್ಯಕೀಯ ಕಾಲೇಜು ಕಾಮಗಾರಿಗೆ ನೀವು ಶಾಸಕರಾಗಿ ಸರ್ಕಾರದಿಂದ ಎಷ್ಟು ಅನುದಾನ ಬಿಡುಗಡೆಗೊಳಿಸಲಾಗಿದೆ ಎಂಬು ದನ್ನು ತಿಳಿಸಬೇಕಿದೆ ಎಂದರು.
ಒಟ್ಟಾರೆ ಸಾರ್ವಜನಿಕರ ಹಿತದೃಷ್ಟಿ ಹಾಗೂ ಕ್ಷೇತ್ರದ ಸರ್ವಾಂಗೀಣ ಅಭಿವೃಧ್ದಿಯ ದೃಷ್ಟಿಯಿಂದ ಕ್ಷೇತ್ರಕ್ಕೆ ತಂದಿರುವ ಅನುದಾನದ ವಿವರವನ್ನು ಆಧಾರ ಸಹಿತ ಒದಗಿಸಿಕೊಡಬೇಕು ಎಂದು ತಿಳಿಸಿದರು.
H D Thammaiah ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ.ನರೇಂದ್ರ, ಹಿರಿಯ ಮುಖಂಡರುಗಳಾದ ಸಿ.ಎಚ್.ಲೋಕೇಶ್, ಬಿ.ರಾಜಪ್ಪ, ಯುವ ಮೋರ್ಚಾ ಅಧ್ಯಕ್ಷ ಸಂತೋಷ್ ಕೋಟ್ಯಾನ್, ಜಿಲ್ಲಾ ಮಹಿಳಾ ಮೋ ರ್ಚಾ ಅಧ್ಯಕ್ಷೆ ಜಸಂತ ಅನಿಲ್ ಕುಮಾರ್, ಎಸ್ಸಿ ಘಟಕದ ನಗರಾಧ್ಯಕ್ಷ ಕೇಶವ, ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಅಬ್ದುಲ್ ಕಬೀರ್, ಮಾಜಿ ನಗರಸಭೆ ಉಪಾಧ್ಯಕ್ಷ ಸುಧೀರ್, ಸದಸ್ಯ ಶ್ರೀಧರ್ ಉರಾಳ್, ಅಂಕಿತಾ ಅನಿಶ್, ಬ್ಯಾಟರಿ ಮಂಜುನಾಥ್, ನರಸಿಂಹಮೂರ್ತಿ, ಪ್ರದೀಪ್ ಉಪಸ್ಥಿತರಿದ್ದರು.