Saturday, November 23, 2024
Saturday, November 23, 2024

B.Y.Raghavendra ಸಿಜಿಎಚ್ಎಸ್ ವೆಲ್ ನೆಸ್ ಸೆಂಟರ್ ಪ್ರಾರಂಭಕ್ಕೆ ಕೇಂದ್ರದ ತಾತ್ವಿಕ ಅನುಮೋದನೆ- ಸಂಸದ ರಾಘವೇಂದ್ರ

Date:

B.Y.Raghavendra ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸತ್ ಸದಸ್ಯರಾದ ಶ್ರೀ ಬಿ ವೈ ರಾಘವೇಂದ್ರರವರು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವರಾದ ಶ್ರೀ ಮನ್ಸುಕ್ ಮಾಂಡವೀಯ ಇವರನ್ನು ಭೇಟಿ ಮಾಡಿ ಕೇಂದ್ರ ಸರ್ಕಾರಿ ನೌಕರರ ಮತ್ತು ನಿವೃತ್ತ ನೌಕರರ ಕುಟುಂಬಗಳ ಅನುಕೂಲಕ್ಕಾಗಿ ಕೇಂದ್ರ ಸರ್ಕಾರದ ಆರೋಗ್ಯ ಸೇವೆ ಅಡಿಯಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಒಂದು ಸುಸರ್ಜಿತ ಕ್ಷೇಮ ಕೇಂದ್ರವನ್ನು (Central Government Health Scheme-Wellness Centre) ಕೂಡಲೇ ಆರಂಭಿಸಲು ಕಳೆದ 20.10.2022ರಲ್ಲಿ ಮನವಿ ಸಲ್ಲಿಸಿದ್ದಲ್ಲದೇ ಹಲವು ಬಾರಿ ವೈಯಕ್ತಿಕವಾಗಿ ಭೇಟಿ ಮಾಡಿ ಮನವಿ ಮಾಡಿಕೊಂಡಿದ್ದರು.

ಮಾನ್ಯ ಸಂಸದರ ಮನವಿಗೆ ಸ್ಪಂದಿಸಿದ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಸನ್ಮಾನ್ಯ ಶ್ರೀ ಡಾ. ಮನ್ಸುಕ್ ಮಾಂಡವೀಯರವರು ಕಳೆದ ಜನವರಿ 10 ರಂದು ಶಿವಮೊಗ್ಗದಲ್ಲಿ CGHS WELLNESS CENTRE ಸ್ಥಾಪಿಸಲು ಅಗತ್ಯವಿರುವ ಮೂಲಭೂತ ಸೌಕರ್ಯಗಳು ಮತ್ತಿತರೆ ಅಂಶಗಳ ಬಗ್ಗೆ ಕೂಲಂಕುಷವಾಗಿ ಸ್ಥಳಪರಿಶೀಲನೆ ನಡೆಸಿ ವರದಿ ಸಲ್ಲಿಸಲು ಬೆಂಗಳೂರಿನ CGHS ನ ಹೆಚ್ಚುವರಿ ನಿರ್ಧೇಶಕರ ನೇತೃತ್ವದ ತಂಡವನ್ನು ರಚಿಸಿ ಕಳುಹಿಸಿಕೊಟ್ಟಿದ್ದರು.

ಅದರನ್ವಯ ಸದರಿ ತಂಡವು ಶಿವಮೊಗ್ಗಕ್ಕೆ ಬಂದಾಗ ಮಾನ್ಯ ಸಂಸದರೊಂದಿಗೆ ಹಲವು ಕಟ್ಟಡಗಳನ್ನು ವೀಕ್ಷಿಸಿ ಅಂತಿಮವಾಗಿ ಶರಾವತಿ ನಗರದಲ್ಲಿರುವ ಹಳೆಯ ಬಿ.ಎಸ್.ಎನ್.ಎಲ್. ಕಟ್ಟಡವನ್ನು ಆಯ್ಕೆ ಮಾಡಿ, ಶಿವಮೊಗ್ಗದಲ್ಲಿ CGHS wellness center ಸ್ಥಾಪನೆ ಮಾಡಲು ಶಿಫಾರಸ್ಸು ಮಾಡಿತ್ತು.ಅದರನ್ವಯ ಇದೀಗ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಸನ್ಮಾನ್ಯ ಶ್ರೀ ಡಾ. ಮನ್ಸುಕ್ ಮಾಂಡವೀಯರವರು ತಮ್ಮ ಪತ್ರ ಸಂಖ್ಯೆ: HFM/FTS/3530801/2024 ದಿನಾಂಕ: 05 ಫೆಬ್ರುವರಿ 2024ರ ಪತ್ರದ ಮೂಲಕ ಮಾನ್ಯ ಸಂಸದ ಶ್ರೀ ಬಿ.ವೈ. ರಾಘವೇಂದ್ರರವರಿಗೆ ಇಡೀ ದೇಶದಲ್ಲಿ ಪ್ರಾರಂಭಿಸಲಾಗುತ್ತಿರುವ 20 ನಗರಗಳ ಪೈಕಿ ವಿಶೇಷವಾಗಿ ಶಿವಮೊಗ್ಗದಲ್ಲಿಯೂ ಸಹ CGHS Wellness Centre ಪ್ರಾರಂಭಿಸಲು ತಾತ್ವಿಕ ಅನುಮೋದನೆಯನ್ನು ನೀಡಿರುವುದಾಗಿ ತಿಳಿಸಿದ್ದಾರೆ.

B.Y.Raghavendra ಇದರಿಂದಾಗಿ ಶಿವಮೊಗ್ಗ ಜಿಲ್ಲೆಯ 7518 ಹಾಗೂ ದಾವಣಗೆರೆ ಜಿಲ್ಲೆಯ 4888, ಚಿತ್ರದುರ್ಗ ಜಿಲ್ಲೆಯ 2079 ನೆರೆ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಸುಮಾರು 14ಸಾವಿರಕ್ಕೂ ಹೆಚ್ಚಿನ ಸಂಖ್ಯೆಯ ಬಿ.ಎಸ್.ಎನ್.ಎಲ್., ಪೋಸ್ಟಲ್, ಇನಕಂಟ್ಯಾಕ್ಸ್, ಪ್ರಾವಿಡೆಂಡ್ ಫಂಡ್, ಸೆಂಟ್ರಲ್ ಎಕ್ಸೈಸ್, ನಿವೃತ್ತ ಅರೆ ಸೇನಾ ಪಡೆ, ಕೇಂದ್ರೀಯ ವಿದ್ಯಾಲಯ, ರಾಷ್ಟ್ರೀಯ ರಕ್ಷಾ ಯೂನಿವರ್ಸಿಟಿ ಮತ್ತಿತರೆ ಕೇಂದ್ರ ಸರ್ಕಾರದ ನೌಕರರು ಹಾಗೂ ನಿವೃತ್ತ ನೌಕರರ ಮತ್ತು ಕುಟುಂಬವರ್ಗದವರುಗಳ ಕ್ಷೇಮಾಭಿವೃದ್ಧಿಯನ್ನು ಕಾಪಾಡಿಕೊಂಡು ಬರಲು ಈ ಒಂದು ಸುಸರ್ಜಿತ ಕ್ಷೇಮ ಕೇಂದ್ರದ (CGHS Wellness Centre) ಅತ್ಯಂತ ಉಪಯುಕ್ತವಾಗಲಿದೆ.

ಹಾಲಿ ಬೆಂಗಳೂರು, ಮೈಸೂರು ಹಾಗೂ ಹುಬ್ಬಳ್ಳಿಯಲ್ಲಿರುವ ಕ್ಷೇಮ ಕೇಂದ್ರಗಳನ್ನು ಅವಲಂಬಿಸಿದ್ದ ಇವರುಗಳಿಗೆ ಶಿವಮೊಗ್ಗದಲ್ಲಿ ಪ್ರಾರಂಭವಾಗುತ್ತಿರುವ Wellness Center ಗೆ ಒಳಪಡುವ ಅನುಮತಿ ಪಡೆದ ಖಾಸಗಿ ಆಸ್ಪತ್ರೆಗಳಲ್ಲಿ ಎಲ್ಲಾ ರೀತಿಯ ಔಷದೋಪಚಾರಗಳು ಉಚಿತವಾಗಿ ಮತ್ತು ತ್ವರಿತಗತಿಯಲ್ಲಿ ದೊರೆಯುತ್ತದೆ.

ಕೇಂದ್ರ ಸರ್ಕಾರಿ ನೌಕರರು ಮತ್ತು ನಿವೃತ್ತ ನೌಕರರ ಹಲವು ವರ್ಷಗಳ ಬೇಡಿಕೆಯನ್ನು ಕೇಂದ್ರ ಸರ್ಕಾರ ಈಡೆರಿಸುತ್ತಿರುವುದಕ್ಕೆ ಸಮಸ್ತ ನೌಕರರು ಮತ್ತು ಅವರುಗಳ ಕುಟುಂಬ ವರ್ಗದವರ ಪರವಾಗಿ ಪ್ರಧಾನಿ ಸನ್ಮಾನ್ಯ ಶ್ರೀ ನರೇಂದ್ರ ಮೋದೀಜಿಯವರಿಗೆ ಮತ್ತು ವಿಶೇಷವಾಗಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಶ್ರೀ ಡಾ. ಮನ್ಸುಕ್ ಮಾಂಡವೀಯರವರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Maharashtra Election ‘ಮಹಾ’ ಚುನಾವಣೆ.ಮತ್ತೆ ತಲೆಯೆತ್ತಿದ ” ಮಹಾಯುತಿ” ಮಕಾಡೆ ಬಿದ್ದಅಘಾಡಿ

Maharashtra Election ದೇಶದ ಗಮನ ಸೆಳೆದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ...

Police Department ರಾಜ್ಯದ ಜೈಲುಗಳ ವಾರ್ಡನ್ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೇಮಕವಾಗಲು ಆಸಕ್ತ ಮಾಜಿ ಸೈನಿಕರು ಅರ್ಜಿ ಸಲ್ಲಿಸಲು ಅವಕಾಶ

Police Department ಕರ್ನಾಟಕ ರಾಜ್ಯಾದ್ಯಾಂತ ಇರುವ ಜೈಲುಗಳಲ್ಲಿ ವಾರ್ಡನ್‌ ಹುದ್ದೆಗೆ ಗುತ್ತಿಗೆ...

DC Shivamogga ಶಿವಮೊಗ್ಗ ಜಿಲ್ಲೆಯಲ್ಲಿ ಚುನಾವಣಾ ಜನಸಂಖ್ಯೆ ಅನುಪಾತದ ಬಗ್ಗೆ ಡಾ.ತ್ರಿಲೋಕ ಚಂದ್ರ ಅವರಿಂದ ಪರಿಶೀಲನೆ

DC Shivamogga ಶಿವಮೊಗ್ಗ ಜಿಲ್ಲೆಯಲ್ಲಿ ಚುನಾವಣಾ ಜನಸಂಖ್ಯೆ ಅನುಪಾತ (ಇಪಿ ರೇಷಿಯೋ)...