Saturday, November 23, 2024
Saturday, November 23, 2024

Kateel Ashok Pai Memorial College ಕಟ್ಟಿಮನಿ ಸಾಹಿತ್ಯದಲ್ಲಿ ಸಮಾಜದ ಅಸಮಾನತೆ,ಅಂಕು-ಡೊಂಕು ಅನ್ಯಾಯಗಳ ಪರಿಣಾಮಗಳನ್ನ ಹೊರಚೆಲ್ಲಿದ್ದಾರೆ- ಡಾ.ನಟರಾಜ್ ಹುಳಿಯಾರ್

Date:

Kateel Ashok Pai Memorial College ಬೆಳಗಾವಿಯ ಬಸವರಾಜ ಕಟ್ಟಿಮನಿ ಪ್ರತಿಷ್ಠಾನ, ಶಿವಮೊಗ್ಗದ ಮಾನಸ ಟ್ರಸ್ಟ್ ನ ಮಾನಸ ಸಾಂಸ್ಕೃತಿಕ ಅಧ್ಯಯನಗಳ ಕೇಂದ್ರ ಹಾಗೂ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಸಾಹಿತ್ಯ ಸಹೃದಯ ವೇದಿಕೆಯ ವತಿಯಿಂದ ‘ಬಸವರಾಜ ಕಟ್ಟಿಮನಿಯವರ ಸಾಹಿತ್ಯದ ಸಮಕಾಲೀನ ಪ್ರಸ್ತುತತೆ’ ಎಂಬ ವಿಷಯದ ಒಂದು ದಿನದ ರಾಜ್ಯ ಮಟ್ಟದ ವಿಚಾರ ಸಂಕಿರಣವು ಕಾಲೇಜಿನ ಬಹುಮುಖಿ ಸಭಾಂಗಣದಲ್ಲಿ ನಡೆಯಿತು.

ಇದರ ಉದ್ಘಾಟನೆಯನ್ನು ಮಾಡಿದ ಪ್ರಸಿದ್ಧ ಸಂಸ್ಕೃತಿ ಚಿಂತಕರಾದ ಡಾ.ನಟರಾಜ್ ಹುಳಿಯಾರ್ ರವರು ಕಟ್ಟಿಮನಿಯವರ ಸಾಹಿತ್ಯದಿಂದಲೇ ನಾನೂ ಲೇಖಕನೊಬ್ಬನು ಚಳುವಳಿಗಳಲ್ಲಿ ಭಾಗವಹಿಸಬೇಕೆಂಬ ಸಂದೇಶವನ್ನು ಪಡೆದೆ ಎಂದರು. ಕಟ್ಟಿಮನಿಯವರು ಒಬ್ಬ ಕಾದಂಬರಿಕಾರರು ಹೌದು ಪತ್ರಿಕೋದ್ಯಮಿಯು ಹೌದು, ಆದ್ದರಿಂದ ಅವರು ತಮ್ಮ ಕಾದಂಬರಿಗಳು ಹಾಗೂ ಲೇಖನಗಳಲ್ಲಿ ಸಮಾಜದ ಅಸಮಾನತೆ, ಅಂಕು – ಡೊಂಕು, ಅನ್ಯಾಯಗಳ ಪರಿಣಾಮಗಳನ್ನು ಹೊರಚೆಲ್ಲಿದರು.

ಕಟ್ಟಿಮನಿಯವರು ಸಮಕಾಲೀನ ಚರಿತ್ರೆಯನ್ನು ಕಾದಂಬರಿಗಳ ಮೂಲಕ ದಾಖಲಿಸಿದರು. ಒಬ್ಬ ಕಾದಂಬರಿಕಾರನಿಗೆ ಪತ್ರಿಕೋದ್ಯಮಿಯಂತೆ ಬರೆಯುವ ತುಡಿತವಿರಬೇಕು, ಪತ್ರಿಕೋದ್ಯಮಿಗೆ ಕಾದಂಬರಿಕಾರರ ತಾಳ್ಮೆಯಿರಬೇಕು. ಕಟ್ಟಿಮನಿಯವರು ಇವೆರಡನ್ನೂ ಒಳಗೊಂಡಂತೆ ಒಬ್ಬ ರಾಜಕೀಯ ಮುತ್ಸದ್ದಿಯಾಗಿದ್ದರು.

Kateel Ashok Pai Memorial College ಆದ್ದರಿಂದ ಅವರ ಕೃತಿಗಳಲ್ಲಿ ‘ನೈತಿಕತೆ’ಯ ಮೌಲ್ಯಗಳು ಪ್ರತಿಫಲಿತವಾಗಿದೆ ಎಂದರು. ಕಾರ್ಯಕ್ರಮದ ಪ್ರಸ್ತಾವಿಕ ನುಡಿಗಳನ್ನಾಡಿದ ಪ್ರತಿಷ್ಠಾನದ ಡಾ.ಬಸವರಾಜ ಸಾದರರವರು ಪ್ರತಿಷ್ಠಾನದ ಕಾರ್ಯಕ್ರಮ ಹಾಗೂ ಜವಾಬ್ದಾರಿಗಳನ್ನು ವಿವರಿಸಿದರು.

ಕಾರ್ಯಕ್ರಮದಲ್ಲಿ ಡಾ.ರಾಜೇಂದ್ರ ಚೆನ್ನಿ, ಡಾ.ಸಂಧ್ಯಾಕಾವೇರಿ, ಕನ್ನಡ ಉಪನ್ಯಾಸಕರಾದ ಶ್ರೀ ಮೋಹನ್ ಕುಮಾರ್ ಉಪಸ್ಥಿತರಿದ್ದರು. ಅಧ್ಯಕ್ಷತೆಯನ್ನು ಪ್ರತಿಷ್ಠಾನದ ಅಧ್ಯಕ್ಷರಾದ ಪ್ರೊ.ಮಲ್ಲಿಕಾರ್ಜುನ ಹಿರೇಮಠ್ ವಹಿಸಿದ್ದರು.

ಡಾ.ಮಲ್ಲಿಕಾರ್ಜುನ ಮೇಟಿ, ಡಾ.ಸುಭಾಷ್ ರಾಜಮನೆ, ಡಾ.ಭಾರತಿ ಡಾ. ಸಬಿತಾ ಬನ್ನಾಡಿ, ಡಾ. ಅರುಣ್ ಜೋಳದ ಕೂಡ್ಲಿಗಿರವರು ಕಟ್ಟಿಮನಿಯವರ ಸಾಹಿತ್ಯದ ವಿವಿಧ ವಿಷಯಗಳ ಪ್ರಸ್ತುತತೆಯನ್ನು ವಿವಿಧ ಗೋಷ್ಠಿಗಳಲ್ಲಿ ಪ್ರಸ್ತುತಪಡಿಸಿದರು.

ಈ ಕಾರ್ಯಕ್ರಮದ ಸಮಾರೋಪ ನುಡಿಗಳನ್ನು ಡಾ.ರಾಜೇಂದ್ರ ಚೆನ್ನಿ ನಡೆಸಿಕೊಟ್ಟರು. ಡಾ.ಬಾಳಾಸಾಹೇಬ ಲೋಕಾಪುರ, ಮಾನಸ ಸಂಸ್ಥೆಯ ನಿರ್ದೇಶಕರಾದ ಡಾ.ರಜನಿ ಪೈ ರವರು ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.

ಡಾ.ಕೆ.ಆರ್.ದುರ್ಗಾದಾಸ್ ರವರು ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದ ನಿರ್ವಹಣೆಯನ್ನು ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ವಿದ್ಯಾರ್ಥಿಗಳು ನಡೆಸಿಕೊಟ್ಟರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Maharashtra Election ‘ಮಹಾ’ ಚುನಾವಣೆ.ಮತ್ತೆ ತಲೆಯೆತ್ತಿದ ” ಮಹಾಯುತಿ” ಮಕಾಡೆ ಬಿದ್ದಅಘಾಡಿ

Maharashtra Election ದೇಶದ ಗಮನ ಸೆಳೆದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ...

Police Department ರಾಜ್ಯದ ಜೈಲುಗಳ ವಾರ್ಡನ್ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೇಮಕವಾಗಲು ಆಸಕ್ತ ಮಾಜಿ ಸೈನಿಕರು ಅರ್ಜಿ ಸಲ್ಲಿಸಲು ಅವಕಾಶ

Police Department ಕರ್ನಾಟಕ ರಾಜ್ಯಾದ್ಯಾಂತ ಇರುವ ಜೈಲುಗಳಲ್ಲಿ ವಾರ್ಡನ್‌ ಹುದ್ದೆಗೆ ಗುತ್ತಿಗೆ...

DC Shivamogga ಶಿವಮೊಗ್ಗ ಜಿಲ್ಲೆಯಲ್ಲಿ ಚುನಾವಣಾ ಜನಸಂಖ್ಯೆ ಅನುಪಾತದ ಬಗ್ಗೆ ಡಾ.ತ್ರಿಲೋಕ ಚಂದ್ರ ಅವರಿಂದ ಪರಿಶೀಲನೆ

DC Shivamogga ಶಿವಮೊಗ್ಗ ಜಿಲ್ಲೆಯಲ್ಲಿ ಚುನಾವಣಾ ಜನಸಂಖ್ಯೆ ಅನುಪಾತ (ಇಪಿ ರೇಷಿಯೋ)...