Constitution of India ಸಂವಿಧಾನ 75 ನೇ ವರ್ಷಾಚರಣೆ ಪ್ರಯುಕ್ತ ರಾಜ್ಯಾದ್ಯಂತ ಸಂವಿಧಾನ ಜಾಗೃತಿ ಜಾಥಾ ಜ.26 ರಿಂದ ಒಂದು ತಿಂಗಳ ಕಾಲ ಹಮ್ಮಿಕೊಳ್ಳಲಾಗಿದೆ.
ಶಾಂತಿ, ಸೌಹಾರ್ಧ, ಸಹಬಾಳ್ವೆ, ಸಮಾನತೆ, ಪ್ರಜಾಪ್ರಭುತ್ವ, ಒಕ್ಕೂಟ ಸರ್ಕಾರ ಹಾಗೂ ಸ್ವತಂತ್ರ ಭಾರತದ ಪರಿಕಲ್ಪನೆಯ ಸಂವಿಧಾನವು ಭಾರತೀಯರೆಲ್ಲರ ಹಕ್ಕುಗಳನ್ನು ಕಾಯ್ದಿರಿಸುತ್ತದೆ.
ಭಾರತದ ಪ್ರಜೆಗಳಾದ ನಾವು ಸಂವಿಧಾನವನ್ನು ತಿಳಿಯೋಣ, ಸಂವಿಧಾನವನ್ನು ಉಳಿಸೋಣ ಎಂಬ ಆಶಯದೊಂದಿಗೆ ಜಾಥಾ ಹಮ್ಮಿಕೊಳ್ಳಲಾಗಿದೆ.
ಇಂದು ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನಕುಪ್ಪಗಡ್ಡೆ, ಇಂಡವಳ್ಳಿ ,ಗುಡವಿ ತವನಂದಿಯಲ್ಲಿ ತಹಶೀಲ್ದಾರರು ಹಾಗೂ ಎಲ್ಲಾ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು, ನೋಡಲ್ ಅಧಿಕಾರಿಗಳು, ಮುಖ್ಯಾಧಿಕಾರಿಗಳು, ಸಹಾಯಕ ನಿರ್ದೇಶಕರು. ಸಮಾಜ ಕಲ್ಯಾಣ ಇಲಾಖೆ ಸೊರಬ ಹಾಗೂ ಸೊರಬ ಪಟ್ಟಣದ ಸಾರ್ವಜನಿಕರು, ಶಾಲಾ ಕಾಲೇಜುಗಳ ಮಕ್ಕಳು, ಶಿಕ್ಷಕರು, ಸಾರ್ವಜನಿಕರು ಸಂವಿಧಾನ ಜಾಥಾ ಮೆರವಣಿಗೆಯಲ್ಲಿ ಪಾಲ್ಗೊಂಡರು.
Constitution of India ಹಾಗೂ ಸಾಗರ ತಾಲ್ಲೂಕಿನ ಹೆಗ್ಗೋಡು ಗ್ರಾಮ ಪಂಚಾಯಿತಿ ಯಲ್ಲಿ ಸಂವಿಧಾನ ಜಾಥಾ ಕಾರ್ಯಕ್ರಮ ನಡೆಸಲಾಯಿತು.