Mulugade Odalala Book ಹೊಸನಗರ ತಾಲೂಕು ವಾರಾಹಿ ದಡ ಮೇಲುಸುಂಕ ದುರ್ಗಾಪರಮೇಶ್ವರಿ ದೇವಸ್ಥಾನದ ಆವರಣದಲ್ಲಿ ಎಂಎಂ ಪ್ರಭಾಕರ ಕಾರಂತ ಅವರ ಮುಳುಗಡೆ ಒಡಲಾಳ ಕೃತಿ ಲೋಕಾರ್ಪಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಸಾಹಿತಿ ಡಾ. ಗಜಾನನ ಶರ್ಮ ಅವರು ಮಾತನಾಡಿದರು. ಮುಳುಗಡೆ ಎನ್ನುವುದು ಕೇವಲ ತೋಟ, ಮನೆ ಮುಳುಗಿಸಿಲ್ಲ. ಇದು ಇಲ್ಲಿರುವ ಜನರ ಸಂಸ್ಕೃತಿ, ಜನಪದ, ನಂಬಿದ ದೇವರು ದೈವ ಹಾಗೂ ಸಂಬಂಧಗಳನ್ನು ಮುಳುಗಿಸಿ ಅನಾಥ ಭಾವ ಮೂಡಿಸಿದೆ. ಇಲ್ಲಿನ ಇದೊಂದು ಶಾಪದಂತೆ ಕಾಡಿದೆ ಎಂದು ತಿಳಿಸಿದರು.
70ರ ದಶಕದಲ್ಲಿ ಜಲವಿದ್ಯುತ್ ಯೋಜನೆ ಅನಿವಾರ್ಯವಾಗಿತ್ತು. ಆದರೆ ಯೋಜನೆಯ ಸಂತ್ರಸ್ತರನ್ನ ಸರ್ಕಾರಗಳು ಹಾಗೂ ಅಧಿಕಾರಿ ವರ್ಗ ನೋಡಿಕೊಂಡ ರೀತಿ ಸರಿ ಇಲ್ಲ. ಭೌತಿಕವಾಗಿ ಕನಿಷ್ಠ ಪರಿಹಾರ ನೀಡಿಲ್ಲ. ಜನ ಜೀವನದ ಬಗ್ಗೆ ಕಾಳಜಿ ವಹಿಸಿಲ್ಲ ಎಂದು ಹೇಳಿದರು.
Mulugade Odalala Book ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಲೀಲಾವರ ಸುರೇಂದ್ರ ಅಡಿಗ, ಪರಿಸರ ಸಾಹಿತಿ ಶಿವಾನಂದ ಕಳವೆ,ಗಿರಿಜಾ ಶಂಕರ, ತಿರುಪತಿ ನಾಯಕ್, ಡಾ.ಮಂಜುಳಾ ಹುಲ್ಲಹಳ್ಳಿ ಇನ್ನೂ ಮುಂತಾದ ಗಣ್ಯರು ಉಪಸ್ಥಿತರಿದ್ದರು.