Sri Shaneswaraswamy Temple ಚಿಕ್ಕಮಗಳೂರು, ನಗರದ ರಾಮನಹಳ್ಳಿ ಸಮೀಪದ ಶ್ರೀ ಶನೇಶ್ವರಸ್ವಾಮಿ ದೇವಾಲಯದ 23ನೇ ವಾರ್ಷಿಕೋತ್ಸವ ಮಹೋತ್ಸವವು ನೂರಾರು ಭಕ್ತಾಧಿಗಳ ಸಮ್ಮುಖದಲ್ಲಿ ಪೂಜಾ ಕೈಂಕಾರ್ಯ ಗಳ ಮುಖಾಂತರ ಅತ್ಯಂತ ಶ್ರದ್ದಾಭಕ್ತಿಯಿಂದ ನೆರವೇರಿತು.
ಮುಂಜಾನೆಯಿ0ದಲೇ ವಿಗ್ರಹ ಮೂರ್ತಿಗೆ ಬಣ್ಣದ ಹೂವುಗಳಿಂದ ಅಲಂಕಾರಗೊಳಿಸಿ ಹೋ ಮ-ಹವನ ಸೇರಿದಂತೆ ಸಾಂಪ್ರದಾಯಿಕ ಪೂಜಾವಿಧಿವಿಧಾನಗಳನ್ನು ನಡೆಸಲಾಯಿತು.
ಮಹಾಮಂಗಳಾರತಿ ಬಳಿಕ ಮಯೂರಿ ಗಾನ ಸುಗಮ ಸಂಗೀತ ತಂಡದಿ0ದ ದೇವಾಲಯ ಮುಂಭಾಗದಲ್ಲಿ ಭಕ್ತಿಗೀತೆ ಗಾಯನ ನಡೆಯಿತು.
ವಾರ್ಷಿಕೋತ್ಸವ ಮಹೋತ್ಸವದಲ್ಲಿ ರಾಮನಹಳ್ಳಿ ಸುತ್ತಮುತ್ತಲಿನ ನೂರಾರು ಮಹಿಳೆಯರು, ವೃದ್ದರು ಹಾಗೂ ಮಕ್ಕಳು ಪಾಲ್ಗೊಂಡು ಸ್ವಾಮಿಯ ಕೃಪೆಗೆ ಪಾತ್ರರಾದರು. ಮಧ್ಯಾಹ್ನ 12.45ಕ್ಕೆ ಸಾರ್ವಜನಿಕ ಅನ್ನಸಂ ಪರ್ತಣೆ ನಡೆಯಿತು.
ಮಧ್ಯಾಹ್ನ 3.38 ರಿಂದ ಶ್ರೀ ಶನೇಶ್ವರ ಸ್ವಾಮಿಯವರ ಕಥಾ ಕಲಾಕ್ಷೇಪ ನಡೆಯಿತು.
ಈ ವೇಳೆ ದೇವಾಲಯದ ಅರ್ಚಕ ರಾಧಾಕೃಷ್ಣ ಮಾತನಾಡಿ ಎರಡು ದಿನಗಳಿಂದಲೂ ವಾರ್ಷಿಕೋತ್ಸವ ವನ್ನು ಸಂಭ್ರಮದಿ0ದ ನಡೆಸಲಾಗುತ್ತಿದ್ದು ನಿನ್ನೆ ಶ್ರೀ ಸ್ವಾಮಿಯವರಿಗೆ ವಿಶೇಷ ಅಭಿಷೇಕ ಜರುಗಿತು.
Sri Shaneswaraswamy Temple ಕೊನೆಯ ದಿನವಾದ ಇಂದು ಪ್ರಸನ್ನಭಟ್ರು ನೇತೃತ್ವದಲ್ಲಿ ನವಗ್ರಹ, ಗಣಪತಿ, ಕಲಾ, ಶನೇಶ್ವರ ಹೋಮ ಹಾಗೂ ಪುರ್ಣಾ ಹುತಿ ನಡೆಯಿತು.
ಕಳೆದ 23 ವರ್ಷಗಳಿಂದ ನಿರಂತರವಾಗಿ ಶ್ರೀ ಶನೇಶ್ವರ ಸ್ವಾಮಿ ಪೂಜಾ ಕಾರ್ಯದಲ್ಲಿ ಸೇವೆ ಸಲ್ಲಿಸಲಾಗುತ್ತಿದೆ.
ಪ್ರತಿವರ್ಷವು ಅತ್ಯಂತ ಸಡಗರ ಹಾಗೂ ಸಂಭ್ರಮದಿ0ದ ವಾರ್ಷಿಕೋತ್ಸವ ಹಮ್ಮಿಕೊಂಡಿದ್ದು ನೂರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಭಾಗವಹಿಸಿ ವಾರ್ಷಿಕೋತ್ಸವದ ಮೆರಗನ್ನು ಹೆಚ್ಚಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಮುಖಂಡ ದಶರಥ ರಾಜ್ ಅರಸ್ ಸೇರಿದಂತೆ ಮತ್ತಿತರರಿದ್ದರು.