Indian National Congress ಸರ್ಕಾರ ಅಧಿಕಾರಕ್ಕೆ ಬಂದು ಸುಮಾರು 8 ತಿಂಗಳೇ ಕಳೆದ ಆದರೂ ನಿಗಮ ಮಂಡಳಿ ನೇಮಕವಾಗದೆ, ಹುದ್ದೆ ಆಕಾಂಕ್ಷಿ ಶಾಸಕರು ಮತ್ತು ಮುಖಂಡರನ್ನ ನಿರಾಸೆ ಆವರಿಸಿರುವುದು ಒಂದೆಡೆಯಾಗಿದೆ. ಇನ್ನೊಂದೆಡೆ ನಾಮ ನಿರ್ದೇಶನ ಪಟ್ಟಿ ವಿಚಾರದಲ್ಲಿ ಆಡಳಿತಾರೂಢ ಕಾಂಗ್ರೆಸ್ ನಲ್ಲಿ ನಡೆದಿದ್ದ ಮುಸುಕಿನ ಗುದ್ದಾಟ ಬಯಲಿಗೆ ಬಂದಿದೆ. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಮಧ್ಯೆ ಪಾರ್ಟಿ ವಿಚಾರದಲ್ಲಿ ಜಟಾಪಟಿ ನಡೆದಿದೆ.
ನಾಲ್ಕೈದು ಸುತ್ತಿನ ಸಮಾಲೋಚನಾ ಸಭೆಗಳ ನಂತರ ಅಂತಿಮಗೊಳಿಸಿದ್ದ ನಾಮನಿರ್ದೇಶನ ಪಟ್ಟಿಗೆ ಅನುಮೋದನೆ ಹಂತದಲ್ಲಿ ಎಐಸಿಸಿ ಮಟ್ಟದಲ್ಲಿ ಕೆಲವು ಹೆಸರುಗಳು ಸೇರ್ಪಡೆಯಾಗಿರುವುದಕ್ಕೆ ಮುಖ್ಯಮಂತ್ರಿಗಳು ಸಿಡಿ ಮಿಡಿ ವ್ಯಕ್ತಪಡಿಸಿದ್ದಾರೆ. ಇದರಿಂದ ಪಟ್ಟಿ ಪ್ರಕಟಣೆಗೆ ಬ್ರೇಕ್ ಬಿದ್ದಿದೆ. ಇದರ ಜೊತೆಗೆ ತಮ್ಮ ಅಭಿಪ್ರಾಯ ಕೇಳದೆಯೇ ಪಠಿಸಿದ ಪಡಿಸಿರುವುದಕ್ಕೆ ಗೃಹ ಸಚಿವರಾದ ಡಾ. ಜಿ ಪರಮೇಶ್ವರ್ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಎಲ್ಲಾ ಸನ್ನಿವೇಶಗಳು ಕಾಂಗ್ರೆಸ್ ನಲ್ಲಿ ಮತ್ತಷ್ಟು ಗೊಂದಲ ಸೃಷ್ಟಿಸಿದೆ.
Indian National Congress ನಿಗಮ ಮಂಡಳಿ ನೇಮಕಕ್ಕೆ ಸಂಬಂಧಿಸಿದಂತೆ ಶಾಸಕರದ್ದು ಎಲ್ಲಾ ಕ್ಲಿಯರ್ ಆಗಿದೆ. ಕಾರ್ಯಕರ್ತರ ನೇಮಕದ ಬಗ್ಗೆ ಚರ್ಚೆ ನಡೆಯುತ್ತಿದೆ. ಡಿಕೆ ಶಿವಕುಮಾರ್ ಜೊತೆ ಮಾತನಾಡಿದ್ದೇನೆ. ಎಲ್ಲರ ಅಭಿಪ್ರಾಯ ಪಡೆದು ಪಟ್ಟಿ ಸಿದ್ಧಪಡಿಸುವುದು ಕಷ್ಟ. ಈ ವಿಚಾರದಲ್ಲಿ ಸಚಿವ ಪರಮೇಶ್ವರ ಜೊತೆ ಮಾತನಾಡಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.