Netaji Subhas Chandra Bose Jayanti ಜಿಲ್ಲಾ ಸ್ಕೌಟ್ ಭವನ ಶಿವಮೊಗ್ಗದಲ್ಲಿ ನೇತಾಜಿ ಸುಭಾಸ್ ಚಂದ್ರ ಬೋಸ್ ರವರ 127ನೇ ಜಯಂತಿಯನ್ನು ಆಚರಣೆ ಮಾಡಲಾಯಿತು.
ಆಜಾದ್ ಹಿಂದ್ ಫೌಜ್ ರಚನೆಯ ಹರಿಕಾರ ನೇತಾಜಿ ಸುಭಾಸ್ ಚಂದ್ರ ಬೋಸ್ ರವರ ಭಾವಚಿತ್ರಕ್ಕೆ ಪುಷ್ಪಾಂಜಲಿ ಸಲ್ಲಿಸುವುದರ ಮೂಲಕ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಜಂಟಿ ಕಾರ್ಯದರ್ಶಿಯವರಾದ ಶ್ರೀ ವೈ.ಆರ್.ವೀರೇಶಪ್ಪ ರವರು ಮಾತನಾಡುತ್ತಾ ಭಾರತದ ಅತ್ಯಂತ ಪ್ರಸಿದ್ಧ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಸುಭಾಸ್ ಚಂದ್ರ ಬೋಸ್ ಒಬ್ಬರಾಗಿದ್ದರು. ಅವರು ಯುವಕರ ವರ್ಚಸ್ವಿ ಪ್ರಭಾವಶಾಲಿಯಾಗಿದ್ದರು.
ಮತ್ತು ಸ್ವಾತಂತ್ಯ ಹೋರಾಟದ ಸಮಯದಲ್ಲಿ ಭಾರತೀಯ ರಾಷ್ಟ್ರೀಯ ಸೇನೆಯನ್ನು ಸ್ಥಾಪಿಸಿ ಮುನ್ನಡೆಸುವ ಮೂಲಕ ‘ನೇತಾಜಿ’ ಎಂಬ ಬಿರುದನ್ನು ಪಡೆದರು.
ಭಾರತದಿಂದ ಬ್ರಿಟಿಷರನ್ನು ಪದಚ್ಯುತಗೊಳಿಸಲು “ನನಗೆ ರಕ್ತ ಕೊಡು ಮತ್ತು ನಾನು ನಿಮಗೆ ಸ್ವಾತಂತ್ರ್ಯವನ್ನು ನೀಡುತ್ತೇನೆ” ಎಂಬ ಅವರ ಕರೆಗೆ ಅಗಾಧ ಪ್ರತಿಕ್ರಿಯೆಯು ಬಂದಿತು. ಅವರಂತೆ ರಾಷ್ಟç ರಕ್ಷಣೆ ನಮ್ಮೆಲ್ಲರ ಕರ್ತವ್ಯ ಅವರ ವಿಭಿನ್ನ ಸಿದ್ಧಾಂತಗಳನ್ನು ನಾವು ಸಹ ನಮ್ಮ ಜೀವನದಲ್ಲಿ ಆಳವಡಿಸಿಕೊಳ್ಳೂಣ ಎಂದು ಕರೆ ನೀಡಿದರು.
ನೇತಾಜಿ ಸುಭಾಸ್ ಚಂದ್ರ ಬೋಸ್ ರವರ ಜೀವನ ಚರಿತ್ರೆಯನ್ನು ಮಕ್ಕಳಿಗೆ ಸವಿಸ್ತಾರವಾಗಿ ಎಲ್.ಎ ಕಾರ್ಯದರ್ಶಿ ಎ.ವಿ.ರಾಜೇಶರವರು ತಿಳಿಸಿಕೊಟ್ಟರು. ಸ್ವಾಗತವನ್ನು ಜಿಲ್ಲಾ ಕಾರ್ಯದರ್ಶಿ ಹೆಚ್.ಪರಮೇಶ್ವರ ರವರು ನೇರವೇರಿಸಿದರು, ಕಾರ್ಯಕ್ರಮದ ನಿರೂಪಣೆಯನ್ನು ಎ.ಎಸ್.ಒ.ಸಿ ಭಾರತಿ ಡಾಯಸ್ ರವರು ನಿರ್ವಹಿಸಿದರು, ವಂದನೆಯನ್ನು ಕೇಂದ್ರ ಸ್ಥಾನಿಕ ಆಯುಕ್ತರಾದ ವಿಜಯಕುಮಾರ ರವರು ನೇರವೇರಿಸಿದರು.
Netaji Subhas Chandra Bose Jayanti ಮೀನಾಕ್ಷಮ್ಮ, ಚಂದ್ರಶೇಖರಯ್ಯ, ಡಾನ್ಸ ಮಾಸ್ಟರ್, ರೋವರ್ಸ್, ಕಸ್ತೂರಬಾ ಪ್ರೌಢ ಶಾಲೆಯ ಹಾಗೂ ಮೇರಿ ಇಮ್ಮಾಕುಲೇಟ್ ಶಾಲೆಯ ಒಟ್ಟು 85ಗೈಡ್ಸ್ ಗಳು ಹಾಜರಿದ್ದರು.